Home Uncategorized ಬೆಂಗಳೂರು ಇತಿಹಾಸ ಹೇಳಲಿದೆ ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ!

ಬೆಂಗಳೂರು ಇತಿಹಾಸ ಹೇಳಲಿದೆ ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ!

47
0

ಈ ಬಾರಿಯ ಗಣರಾಜ್ಯೋತ್ಸ ದಿನದ ಫಲಪುಷ್ಪ ಪ್ರದರ್ಶನದಲ್ಲಿ ಜನತೆಗೆ ಶೈಕ್ಷಣಿಕ ಅನುಭವ ನೀಡಲು ತೋಟಗಾರಿಕಾ ಇಲಾಖೆಯು ಮುಂದಾಗಿದ್ದು, ಬೆಂಗಳೂರು ಇತಿಹಾಸವನ್ನು ಥೀಮ್ ಆಗಿ ಬಳಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಈ ಬಾರಿಯ ಗಣರಾಜ್ಯೋತ್ಸ ದಿನದ ಫಲಪುಷ್ಪ ಪ್ರದರ್ಶನದಲ್ಲಿ ಜನತೆಗೆ ಶೈಕ್ಷಣಿಕ ಅನುಭವ ನೀಡಲು ತೋಟಗಾರಿಕಾ ಇಲಾಖೆಯು ಮುಂದಾಗಿದ್ದು, ಬೆಂಗಳೂರು ಇತಿಹಾಸವನ್ನು ಥೀಮ್ ಆಗಿ ಬಳಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ತಜ್ಞರ ಸಲಹೆಯ ಮೇರೆಗೆ ಈ ಬಾರಿಯ ಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರಿನ ಇತಿಹಾಸವನ್ನು ಥೀಮ್ ಆಗಿ ತೆಗೆದುಕೊಳ್ಳಲು ಇಲಾಖೆ ನಿರ್ಧರಿಸಿದೆ,

ಇಲಾಖೆಯು 1500 ಎಡಿ ಯಿಂದ ಇತಿಹಾಸವನ್ನು ಪ್ರದರ್ಶಿಸಲಿದೆ. ವಿವಿಧ ರಾಜವಂಶಗಳ ಆಳ್ವಿಕೆಯಲ್ಲಿ ನಗರವು ಹೇಗೆ ಬೆಳೆಯಿತು ಮತ್ತು ಹೇಗೆ ರೂಪುಗೊಂಡಿತು ಎಂಬುದನ್ನು ಈ ಫಲಪುಷ್ಪ ಪ್ರದರ್ಶನ ವಿವರಿಸುತ್ತದೆ.

ಗ್ಲಾಸ್ ಹೌಸ್‌ಗಷ್ಟೇ ಇದು ಸೀಮಿತವಾಗುವುದಿಲ್ಲ, ಉದ್ಯಾನವನದಾದ್ಯಂತ ಇತಿಹಾಸ ಹೇಳುವ ಪ್ರಯತ್ನ ಮಾಡಲಾಗುತ್ತದೆ. ಫಲಪುಷ್ಪ ಪ್ರದರ್ಶನವು ಥೀಮ್-ವೈಸ್ ಮತ್ತು ಕಿಂಗ್ಡಮ್-ವೈಸ್ ಆಗಿರುತ್ತವೆ, ಅವುಗಳ ಬಗ್ಗೆ ಟಿಪ್ಪಣಿಯೂ ಇರುತ್ತದೆ. ಈ ಬಾರಿ ಎಲ್ಲಾ ಪ್ರವಾಸಿಗರಿಗೆ ಫಲಪುಷ್ಪ ಪ್ರದರ್ಶನವು ಶೈಕ್ಷಣಿಕ ಪ್ರವಾಸವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಪುಣೆಯ ಅಪರೂಪದ ಹೂವುಗಳು ಸೇರಿದಂತೆ 97 ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದೆ. ಮೊದಲ ಬಾರಿಗೆ, ಗ್ಲಾಸ್ ಹೌಸ್ ಹೊರಭಾಗವನ್ನು ಪ್ರದರ್ಶನದ ಮುಖ್ಯ ಥೀಮ್ ಆಗಿ ಬಳಕೆ ಮಾಡಲಾಗುತ್ತಿದೆ.

ಪ್ರತಿಯೊಂದು ಸಾಮ್ರಾಜ್ಯದ ವಿವರಗಳು ಮತ್ತು ಅದರ ವಿಶೇಷತೆಗಳನ್ನು ತಿಳಿಸಲಾಗುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರಗಳ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ರೀತಿಯ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಸಾಮಾನ್ಯವಾಗಿ, ನಾವು ಒಬ್ಬ ವ್ಯಕ್ತಿ ಅಥವಾ ವಿಷಯವನ್ನು ತೆಗೆದುಕೊಳ್ಳುತ್ತಿದ್ದೆವು. ಈ ಬಾರಿ ಬೆಂಗಳೂರಿನ ಬೆಳವಣಿಗೆಯನ್ನು ತೋರಿಸುತ್ತೇವೆ. ಈ ಸಂಬಂಧ ನಿರ್ಧಾರಗಳ ಅಂತಿಮಗೊಳಿಸಲು ಬಹು ಸಂಸ್ಥೆಗಳು, ಕಲಾವಿದರು ಮತ್ತು ಮಧ್ಯಸ್ಥಗಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here