ತನ್ನನ್ನು ಅವಾಯ್ಡ್ ಮಾಡಿ ಬೇರೊಬ್ಬ ಯುವತಿ ಜೊತೆ ಸುತ್ತಾಡುತ್ತಿದ್ದ ಪ್ರಿಯಕರನಿಗೆ ಮಹಿಳೆಯೋರ್ವಳು ಪ್ರಿಯಕರನಿಗೆ ಚಾಕು ಇರಿದ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಬೆಂಗಳೂರು: ತನ್ನನ್ನು ಅವಾಯ್ಡ್ ಮಾಡಿ ಬೇರೊಬ್ಬ ಯುವತಿ ಜೊತೆ ಸುತ್ತಾಡುತ್ತಿದ್ದ ಪ್ರಿಯಕರನಿಗೆ ಮಹಿಳೆಯೋರ್ವಳು ಪ್ರಿಯಕರನಿಗೆ ಚಾಕು ಇರಿದ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.
ಆರೋಪಿಯನ್ನು ಜುಂಟಿ ದಾಸ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ. ಸಂತ್ರಸ್ತ ಜೋಗೇಶ್ ಪೆಗು (35) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಅಸ್ಸಾಂ ಮೂಲದವರು.
ಜುಂಟಿ ತನ್ನ ಪತಿಯನ್ನು ತೊರೆದು ತನ್ನ 17 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು ಮತ್ತು ಡೇಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜೋಗೇಶ್ ಎಂಬಾತನ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಸಂಬಂಧವಿತ್ತು. ಆದಾಗ್ಯೂ, ಜೋಗೇಶ್ ಜುಂಟಿಯನ್ನುಅವಾಯ್ಡ್ ಮಾಡಲು ಫೋನ್ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ,. ಆಕೆಯಿಂದ ಸ್ವಲ್ಪ ಹಣವನ್ನೂ ಪಡೆದಿದ್ದ ಎನ್ನಲಾಗಿದೆ.
“ಜುಲೈ 21 ರಂದು, ಜುಂಟಿ ಈಜಿಪುರದಲ್ಲಿರುವ ಜೋಗೇಶ್ ಅವರ ಮನೆಗೆ ಆಕೆ ಹೋಗಿದ್ದಳು, ಅಲ್ಲಿ ಅವರಿಬ್ಬರೂ ಜಗಳವಾಡಿದರು, ನಂತರ ಅವಳು ಅವನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಳು. ಜೋಗೇಶ್‌ನ ಸ್ನೇಹಿತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕಂಡು ಆತನ ಮನೆಗೆ ತೆರಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೋಗೇಶ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯಿಂದ ಸಾಲವಾಗಿ ಪಡೆದಿದ್ದ ಹಣವನ್ನು ಹಿಂದಿರುಗಿಸದ ಕಾರಣ ಆಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆಕೆಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.