ನಗರದ ಮಹಾಲಕ್ಷ್ಮೀ ಲೇಔಟ್ನ 10ನೇ ಕ್ರಾಸ್ನಲ್ಲಿ ಹಳೇ ಕಟ್ಟಡ ನೆಲಸಮ ಮಾಡುವ ವೇಳೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್ನ 10ನೇ ಕ್ರಾಸ್ನಲ್ಲಿ ಹಳೇ ಕಟ್ಟಡ ನೆಲಸಮ ಮಾಡುವ ವೇಳೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.
ಪಶ್ಚಿಮ ಬಂಗಳಾದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರು ಇನಾಮ್ ಉಲ್ಲಾ, ಸಿರಾಜ್ ಉಲ್ಲಾ ಎಂದು ತಿಳಿದುಬಂದಿದೆ. ಹಳೇ ಕಟ್ಟಡದ ಪಿಲ್ಲರ್ ಕುಸಿದು ಅವಘಡ ಸಂಭವಿಸಿದೆ. ಒಂದು ವಾರದಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.