Home Uncategorized ಮೈಸೂರು-ಬೆಂಗಳೂರು ಹೆದ್ದಾರಿ, ವಂದೇ ಭಾರತ್ ರೈಲಿನ ವಿಡಿಯೋ: ಬೊಮ್ಮಾಯಿ ಟ್ವೀಟ್ ಗೆ ಮೋದಿ ಪ್ರತಿಕ್ರಿಯೆ

ಮೈಸೂರು-ಬೆಂಗಳೂರು ಹೆದ್ದಾರಿ, ವಂದೇ ಭಾರತ್ ರೈಲಿನ ವಿಡಿಯೋ: ಬೊಮ್ಮಾಯಿ ಟ್ವೀಟ್ ಗೆ ಮೋದಿ ಪ್ರತಿಕ್ರಿಯೆ

20
0
Advertisement
bengaluru

ನೂತನ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಕೆಳಗೆ ಸಾಗುವ ವಂದೇ ಭಾರತ್ ಎಕ್ಸ್  ಪ್ರೆಸ್ ರೈಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು.  ಬೆಂಗಳೂರು: ನೂತನ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಕೆಳಗೆ ಸಾಗುವ ವಂದೇ ಭಾರತ್ ಎಕ್ಸ್  ಪ್ರೆಸ್ ರೈಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕ್ಯಾಮರಾಮನ್ ಶ್ರೀರಾಮು ಅವರ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಈ ಅದ್ಬುತ ದೃಶ್ಯದ ವಿಡಿಯೋವನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಟ್ವೀಟ್ ಮಾಡಿದ್ದರು. 

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ ಬೆಂಗಳೂರು- ಮೈಸೂರು ದಶಪಥ ಎಕ್ಸ್ ಪ್ರೆಸ್ ಹೆದ್ದಾರಿ ವಿಶ್ವದರ್ಜೆ ಗುಣಮಟ್ಟದ ಮೂಲಸೌಕರ್ಯ ಮತ್ತು ಕರ್ನಾಟಕದ ಅಭೂತಪೂರ್ವ ಬೆಳವಣಿಗೆಯನ್ನು ಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ರಾಜ್ಯದಲ್ಲಿ ಅದ್ಬುತ ಕೆಲಸಗಳನ್ನು ಮಾಡುತ್ತಿದೆ ಎಂದು ಸಿಎಂ ಟ್ವೀಟ್ ನಲ್ಲಿ ಹೇಳಿದ್ದರು.

ಬೊಮ್ಮಾಯಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಜನರಿಗೆ ಉತ್ತಮ ಮೂಲಭೂತ ಸೌಕರ್ಯದ ಅವಶ್ಯಕತೆಯಿದೆ. ಅದನ್ನು ಒದಗಿಸಲು ನಮ್ಮ ಸರ್ಕಾರ ಶ್ರಮಿಸುತ್ತಿದೆ. ನಮ್ಮ ಯೋಜನೆಗಳು ಜಾಗತಿಕವಾಗಿ ಶ್ಲಾಘಿಸಲ್ಪಟ್ಟಿವೆ ಎಂದು ರೀಟ್ವೀಟ್ ಮಾಡಿದ್ದಾರೆ. 
 

Our people deserve the best possible infrastructure, which our Government will always work hard to provide. Our strides in infra creation have been widely lauded. https://t.co/3MStIKTnSF
— Narendra Modi (@narendramodi) February 11, 2023

bengaluru bengaluru

bengaluru

LEAVE A REPLY

Please enter your comment!
Please enter your name here