Home Uncategorized ಮತ್ತೆ ಕೋವಿಡ್ ಭೀತಿ: ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆ ಹೆಚ್ಚಳ

ಮತ್ತೆ ಕೋವಿಡ್ ಭೀತಿ: ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆ ಹೆಚ್ಚಳ

11
0

ಕೋವಿಡ್-19 ರೂಪಾಂತರಿ ಬಿಎಫ್.7 ಹರಡುವಿಕೆಯ ಭೀತಿಯಿಂದ ಕಳೆದ ನಾಲ್ಕೈದು ದಿನಗಳಿಂದ ಜನರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಮುಗಿಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಕಂಡುಬರದಿದ್ದರೂ, ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶ ಹೇಳುತ್ತದೆ.  ನವದೆಹಲಿ: ಕೋವಿಡ್-19 ರೂಪಾಂತರಿ ಬಿಎಫ್.7 ಹರಡುವಿಕೆಯ ಭೀತಿಯಿಂದ ಕಳೆದ ನಾಲ್ಕೈದು ದಿನಗಳಿಂದ ಜನರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಮುಗಿಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಕಂಡುಬರದಿದ್ದರೂ, ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶ ಹೇಳುತ್ತದೆ. 

ಅಧಿಕೃತ ಮಾಹಿತಿಯ ಪ್ರಕಾರ, ಮೊನ್ನೆ ಡಿಸೆಂಬರ್ 24 ರಂದು, ಕಳೆದ 30 ದಿನಗಳಲ್ಲಿ ಮೊದಲ ಬಾರಿಗೆ ಒಂದು ದಿನದಲ್ಲಿ ಒಟ್ಟಾರೆ ವ್ಯಾಕ್ಸಿನೇಷನ್ 2,000 ಲಸಿಕೆಗಳನ್ನು ದಾಟಿದೆ. ಅಂದು ಬೂಸ್ಟರ್ ಡೋಸ್ ಲಸಿಕೆ ಪಡೆದವರ ಒಟ್ಟು ಸಂಖ್ಯೆ 2,139 ಆಗಿತ್ತು. ಅವುಗಳಲ್ಲಿ, ಮುನ್ನೆಚ್ಚರಿಕೆ ಡೋಸ್ 1,681 ಆಗಿದೆ. 

ಸರಾಸರಿಯಾಗಿ, ದೈನಂದಿನ ಬೂಸ್ಟರ್ ಡೋಸ್ ಪಡೆದವರ ಅಂಕಿಅಂಶಗಳು 700 ಮತ್ತು 900 ರ ನಡುವೆ ಇದೆ. Covid-19 ಮತ್ತೆ ಹರಡುವ ಭೀತಿ ಎದುರಾದ ನಂತರ ಈ ಪ್ರಮಾಣ ಹೆಚ್ಚಳವಾಗಿದೆ. ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಈ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಕ್ರಮೇಣ ಹೆಚ್ಚಳವಾಗಿದೆ ಎಂದು ಅಧಿಕೃತ ಮಾಹಿತಿಯು ತೋರಿಸಿದೆ, ಡಿಸೆಂಬರ್ 22 ರಂದು 1,516 ಡೋಸ್‌ಗಳನ್ನು ನೀಡಲಾಯಿತು. ಡಿಸೆಂಬರ್ 23 ರಂದು ಈ ಸಂಖ್ಯೆ 1,482 ಆಗಿತ್ತು. ಅವುಗಳಲ್ಲಿ ಕ್ರಮವಾಗಿ 1,238 ಮತ್ತು 1,212 ಬೂಸ್ಟರ್ ಲಸಿಕೆಗಳು ಡಿಸೆಂಬರ್ 22 ಮತ್ತು 23 ರಂದು ನೀಡಲಾಯಿತು.

LEAVE A REPLY

Please enter your comment!
Please enter your name here