Home Uncategorized ರಾಮನಗರ: ಊಟ ಬಡಿಸುವ ವಿಚಾರವಾಗಿ ಜಗಳ, ಆತ್ಮಹತ್ಯೆ ಮಾಡಿಕೊಂಡ ಅಮ್ಮ, ಮಗ

ರಾಮನಗರ: ಊಟ ಬಡಿಸುವ ವಿಚಾರವಾಗಿ ಜಗಳ, ಆತ್ಮಹತ್ಯೆ ಮಾಡಿಕೊಂಡ ಅಮ್ಮ, ಮಗ

18
0
bengaluru

ಶುಕ್ರವಾರ ರಾತ್ರಿ ಊಟದ ವೇಳೆ ತನ್ನ ಮಗನೊಂದಿಗೆ ನಡೆದ ಜಗಳದಿಂದ ಮನನೊಂದ 50 ವರ್ಷದ ಮಹಿಳೆ ತನ್ನ ಮನೆಯ ಹೊರಗಿನ ನೀರಿನ ಸಂಪ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪುತ್ರನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು: ಶುಕ್ರವಾರ ರಾತ್ರಿ ಊಟದ ವೇಳೆ ತನ್ನ ಮಗನೊಂದಿಗೆ ನಡೆದ ಜಗಳದಿಂದ ಮನನೊಂದ 50 ವರ್ಷದ ಮಹಿಳೆ ತನ್ನ ಮನೆಯ ಹೊರಗಿನ ನೀರಿನ ಸಂಪ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

 
ಮಹಿಳೆಯ ಪುತ್ರನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮನಗರ ಜಿಲ್ಲಾ ಪೊಲೀಸರು ಂಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತರನ್ನು ವಿಜಯಲಕ್ಷ್ಮಿ ಮತ್ತು ಅವರ 25 ವರ್ಷದ ಮಗ ಹರ್ಷ ಎಂದು ಗುರುತಿಸಲಾಗಿದೆ. ಅವರಿಬ್ಬರು ರಾಮನಗರ ಜಿಲ್ಲೆಯ ಇಜೂರಿನಲ್ಲಿ ತಮ್ಮ ಬೇಕರಿ ನೋಡಿಕೊಳ್ಳುತ್ತಿದ್ದರು.

ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಹರ್ಷ ಮನೆಗೆ ಹಿಂದಿರುಗಿದ್ದಾನೆ ಮತ್ತು ಅವನ ತಾಯಿ ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಿ, ತನಗೆ ಊಟವನ್ನು ಬಡಿಸಲು ಹೇಳಿದ್ದಾನೆ. ಇಧರಿಂದ ಬೇಸತ್ತ ವಿಜಯಲಕ್ಷ್ಮಿ ತಾನೇ ಬಡಿಸಿಕೊಳ್ಳುವಂತೆ ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು.

ಹರ್ಷ ಅವರ ತಂದೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಅವರಿಗೆ ಊಟ ಬಡಿಸಲು ಪ್ರಯತ್ನಿಸಿದರು. ನಂತರ ವಿಜಯಲಕ್ಷ್ಮಿ ಮನೆಯಿಂದ ಹೊರನಡೆದು ಸಂಪ್‌ಗೆ ಹಾರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

LEAVE A REPLY

Please enter your comment!
Please enter your name here