Home Uncategorized ರೆಸ್ಟ್ ರೂಂನಲ್ಲಿ ಸಹ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಮೂವರು ಕಾಲೇಜು ವಿದ್ಯಾರ್ಥಿನಿಯರ ಅಮಾನತು

ರೆಸ್ಟ್ ರೂಂನಲ್ಲಿ ಸಹ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಮೂವರು ಕಾಲೇಜು ವಿದ್ಯಾರ್ಥಿನಿಯರ ಅಮಾನತು

9
0
Advertisement
bengaluru

ಕಾಲೇಜಿನಲ್ಲಿ ಆಪ್ಟೋಮೆಟ್ರಿ (optometry) ಕೋರ್ಸ್ ಓದುತ್ತಿರುವ ಮೂವರು ವಿದ್ಯಾರ್ಥಿನಿಯರು ರೆಸ್ಟ್ ರೂಂನಲ್ಲಿದ್ದ ಸಹ ವಿದ್ಯಾರ್ಥಿಯ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಭಾನುವಾರ ತಿಳಿಸಿದೆ. ಉಡುಪಿ: ಕಾಲೇಜಿನಲ್ಲಿ ಆಪ್ಟೋಮೆಟ್ರಿ (optometry) ಕೋರ್ಸ್ ಓದುತ್ತಿರುವ ಮೂವರು ವಿದ್ಯಾರ್ಥಿನಿಯರು ರೆಸ್ಟ್ ರೂಂನಲ್ಲಿದ್ದ ಸಹ ವಿದ್ಯಾರ್ಥಿಯ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.

ಬುಧವಾರ ಈ ಘಟನೆ ನಡೆದಿದ್ದು, ಮರುದಿನವೇ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ನೇತ್ರ ಜ್ಯೋತಿ ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ಎರಡು ಪ್ರಕರಣಗಳಲ್ಲಿ ಅಮಾನತುಗೊಳಿಸಲಾಗಿದೆ. ಒಂದು ಅವರು ಕಾಲೇಜಿಗೆ ನಿಷೇಧಿತ ಮೊಬೈಲ್ ತಂದಿದ್ದು ಮತ್ತು ನಂತರ ವಿಡಿಯೋ ರೆಕಾರ್ಡ್ ಮಾಡಿದ ಸಂಬಂಧ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

ತಮ್ಮ ಗುರಿ ಇತರೆ ವಿದ್ಯಾರ್ಥಿನಿಯರಾಗಿದ್ದರು, ಆದರೆ, ಅಕಸ್ಮಾತ್ ಆಗಿ ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಮೂವರು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಅಲ್ಲದೆ, ಅವರು ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ತಮ್ಮ ಮುಂದೆಯೇ ಡಿಲಿಟ್ ಮಾಡಿದ್ದಾರೆ ಎಂದು ನಿರ್ದೇಶಕಿ ತಿಳಿಸಿದ್ದಾರೆ.

bengaluru bengaluru

ಸಂತ್ರಸ್ತೆ ತನ್ನ ಇತರ ಸ್ನೇಹಿತರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ ಮತ್ತು ಅವರು ವಿಷಯವನ್ನು ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ ಎಂದು ನಿರ್ದೇಶಕಿ ತಿಳಿಸಿದ್ದಾರೆ.

‘ನಾವು ಮೂವರು ವಿದ್ಯಾರ್ಥಿನಿಯರನ್ನು ತಕ್ಷಣವೇ ಅಮಾನತುಗೊಳಿಸಿದ್ದೇವೆ. ಸಂತ್ರಸ್ತೆ ಕೆಲವು ಕಾರಣಗಳಿಂದ ಪೊಲೀಸ್ ದೂರು ನೀಡಲು ಹಿಂಜರಿಯುತ್ತಿದ್ದರೂ, ಘಟನೆ ಬಗ್ಗೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ. ನಾವು ವಿಡಿಯೋ ರೆಕಾರ್ಡ್ ಮಾಡಲು ಬಳಸಲಾದ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ನೀಡಿದ್ದೇವೆ’ ಎಂದು ರಶ್ಮಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಮಲ್ಪೆ ಠಾಣಾಧಿಕಾರಿಯನ್ನು ಸಂಪರ್ಕಿಸಿದಾಗ ದೂರು ಸ್ವೀಕರಿಸಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.


bengaluru

LEAVE A REPLY

Please enter your comment!
Please enter your name here