Home Uncategorized 'ಶಕ್ತಿ ಯೋಜನೆ': ಮಹಿಳೆಯರಿಗೆ ಹೇಗೆ ಅನುಕೂಲವಾಗಿದೆ, ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ವೆಚ್ಚವೇನು?

'ಶಕ್ತಿ ಯೋಜನೆ': ಮಹಿಳೆಯರಿಗೆ ಹೇಗೆ ಅನುಕೂಲವಾಗಿದೆ, ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ವೆಚ್ಚವೇನು?

16
0

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು.   ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ(Shakti scheme) ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ.

ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದ ಬಾಗಲಕೋಟೆಯ ದಾನಮ್ಮ, ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಸರ್ಕಾರ ಉಚಿತ ಪ್ರಯಾಣವನ್ನು ನೀಡದಿದ್ದರೆ, ನಾನು ಯಾವುದೇ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರಲಿಲ್ಲ ಎಂದರು. 2024 ರ ಸಂಸತ್ತಿನ ಚುನಾವಣೆಯ ನಂತರ ಉಚಿತ ಪ್ರಯಾಣದ ಸೌಲಭ್ಯವು ನಿಲ್ಲಬಹುದು ಎಂದು ಭಾವಿಸಿರುವ ಅವರು ಹೀಗಾಗಿ ತಮ್ಮ ಕುಟುಂಬಸ್ಥರೊಂದಿಗೆ ಶೀಘ್ರದಲ್ಲಿ ಪ್ರವಾಸ ಹೋಗುತ್ತಿದ್ದಾರೆ. 

ಮಡಿಕೇರಿ ಮತ್ತು ಕೊಡಗು ಮಾರುಕಟ್ಟೆಗಳಿಗೆ ಭೇಟಿ ನೀಡುವ ಹಾಸನ ಮತ್ತು ಸುತ್ತಮುತ್ತಲಿನ ಹಲವು ಮಹಿಳಾ ರೈತರು ಸ್ಥಳೀಯವಾಗಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಮನೆ ಮನೆಗೆ ತೆರಳಿ, ಶಕ್ತಿ ಯೋಜನೆಯಿಂದ ಪ್ರತಿದಿನ ಸುಮಾರು 200 ರೂಪಾಯಿ ಉಳಿಸುತ್ತಿದ್ದಾರೆ. 

ತುಂಬಿತುಳುಕುತ್ತಿರುವ ಬಸ್ಸುಗಳು: ಸರ್ಕಾರಿ-ಚಾಲಿತ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆ ಬಸ್ಸುಗಳಲ್ಲಿ ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿದೆ.  ಮಹಿಳೆಯರು ಉಚಿತ ಸರ್ಕಾರಿ ಬಸ್‌ಗಳಿಗೆ ಸ್ಥಳಾಂತರಗೊಳ್ಳುವುದರಿಂದ ಖಾಸಗಿ ಬಸ್‌ಗಳು ಮತ್ತು ಹಂಚಿಕೆ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಾಣುತ್ತಿವೆ ಎಂದು ನಗರ ತಜ್ಞ ಶ್ರೇಯಾ ಗಡೇಪಲ್ಲಿ ಹೇಳುತ್ತಾರೆ. 

ಅನೇಕ ಮಹಿಳೆಯರು ಕುಗ್ರಾಮಗಳಲ್ಲಿ, ದೂರದ ಊರುಗಳಲ್ಲಿ ಇದರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಸ್ಥಳಗಳಲ್ಲಿ ಬಸ್ಸುಗಳ ಸೇವೆ ಸರಿಯಾಗಿಲ್ಲ. ಹಾಗಿರುವ ಸ್ಥಳಗಳಲ್ಲಿ ಮಹಿಳೆಯರು ಖಾಸಗಿ ಬಸ್ಸುಗಳು ಅಥವಾ ಆಟೋಗಳ ಮೊರೆ ಹೋಗಬೇಕಾಗುತ್ತದೆ. ಇವುಗಳಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣಗಳಿಗೆ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ. 

ಶಕ್ತಿ ಯೋಜನೆಯನ್ನು ಹೆಚ್ಚು ಮಹಿಳಾಪರವಾಗಿಸಲು ಸಾರ್ವಜನಿಕ ಅಥವಾ ಖಾಸಗಿ ಯಾವುದೇ ಬಸ್‌ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿಸಬಹುದು. ಬಸ್ ನಿರ್ವಾಹಕರು ತಮ್ಮ ಬಸ್‌ಗಳಲ್ಲಿ ಟ್ಯಾಪ್ ಮಾಡಿದ ಕಾರ್ಡ್‌ಗಳ ಸಂಖ್ಯೆಯನ್ನು ಆಧರಿಸಿ ಮರುಪಾವತಿ ಮಾಡಬಹುದು ಎನ್ನುತ್ತಾರೆ ಗಡೇಪಲ್ಲಿ. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯ ತಜ್ಞ ಆಶಿಶ್ ವರ್ಮಾ, ಶಕ್ತಿ ಯೋಜನೆಯು ಮಹಿಳೆಯರಿಗೆ ಪ್ರವೇಶವನ್ನು ಸುಧಾರಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ, ವಿಶೇಷವಾಗಿ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ, ಅದರ ಪ್ರಯೋಜನಗಳು ಉತ್ತಮವಾಗಿವೆ. 

ದೆಹಲಿ, ಪಂಜಾಬ್ ಮತ್ತು ತಮಿಳುನಾಡು ಸರ್ಕಾರದ ಯೋಜನೆಗಳಂತೆ 2013 ರಿಂದ ಬಸ್ ಪ್ರಯಾಣ ದರವನ್ನು ಇಳಿಸಿ ಮಹಿಳೆಯರು, ತೃತೀಯಲಿಂಗಿಗಳು ಮತ್ತು ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here