ಪ್ರಧಾನಿ ಮೋದಿ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿದ್ದಾರೆ. ಅದಕ್ಕೆ ವಿಶ್ವಮಾನವ ಸಂದೇಶವನ್ನು ತಮ್ಮ ಸಾಹಿತ್ಯ ಮೂಲಕ ಸಾರಿದ ಖ್ಯಾತ ಕವಿ, ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಹೆಸರನ್ನಿಟ್ಟಿದ್ದು ಕುವೆಂಪು ಏರ್ಪೋರ್ಟ್ ಎಂದು ಹೆಸರಿಡಲಾಗಿದೆ. ಶಿವಮೊಗ್ಗ : ಪ್ರಧಾನಿ ಮೋದಿ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿದ್ದಾರೆ. ಅದಕ್ಕೆ ವಿಶ್ವಮಾನವ ಸಂದೇಶವನ್ನು ತಮ್ಮ ಸಾಹಿತ್ಯ ಮೂಲಕ ಸಾರಿದ ಖ್ಯಾತ ಕವಿ, ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಹೆಸರನ್ನಿಟ್ಟಿದ್ದು ಕುವೆಂಪು ಏರ್ಪೋರ್ಟ್ ಎಂದು ಹೆಸರಿಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನವೇ ಏರ್ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. 449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಸಾಥ್ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತಿತರರು ಹಾಜರಾಗಿದ್ದಾರೆ.
Prime Minister Narendra Modi inaugurates Shivamogga Airport. @XpressBengaluru pic.twitter.com/FWVf7TopXh
— Marx Tejaswi (@_marxtejaswi) February 27, 2023
ನೇಗಿಲ ಕಾಣಿಕೆ: ಸಮಾವೇಶದಲ್ಲಿ ನರೇಂದ್ರ ಮೋದಿಯವರು ಕರ್ನಾಟಕ ರಾಜ್ಯದಲ್ಲಿ ರೈತ ಬಜೆಟ್ ಮಂಡಿಸಿದ್ದ ಬಿಎಸ್ ಯಡಿಯೂರಪ್ಪಗೆ ನೇಗಿಲ ಕಾಣಿಕೆ ನೀಡಿದ್ದಾರೆ. ಮೋದಿ ಬಿಎಸ್ವೈಗೆ ಗೌರವ ಸಮರ್ಪಣೆ ಮಾಡಿದ್ದು, ಹಸಿರು ಶಾಲು ಹೊದಿಸಿ, ಪೇಟ ತೊಡಿಸಿ, ಸನ್ಮಾನ ಮಾಡಿದ್ದಾರೆ.
ಇಂದು @BSYBJP ಅವರ ಜನ್ಮದಿನ. ಅವರು ತಮ್ಮ ಜೀವನವನ್ನು ಬಡವರಿಗೆ, ರೈತರಿಗಾಗಿ ಸಮರ್ಪಿಸಿದ್ದಾರೆ. ಅವರು ಹಿಂದಿನ ವಾರ ವಿಧಾನಸಭೆಯಲ್ಲಿ ನೀಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಪ್ರೇರಣೆ. ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕೆಂಬುದಕ್ಕೆ ಅದು ಆದರ್ಶ. – ಪ್ರಧಾನಿ ಶ್ರೀ @narendramodi#modiinmalnad #BJPYeBharavase pic.twitter.com/oqccwB8xlQ
— BJP Karnataka (@BJP4Karnataka) February 27, 2023
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ: ಪ್ರಧಾನಿ ಮೋದಿ ಏರ್ಪೋರ್ಟ್ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದ್ದಾರೆ. 7,165 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. 995 ಕೋಟಿ ವೆಚ್ಚದ 96 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಶಂಕುಸ್ಥಾಪನೆ, 105 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, 953 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.
66.44 ಕೋಟಿ ವೆಚ್ಚದ ಬೈಂದೂರು-ರಾಣೆಬೆನ್ನೂರು ರಸ್ತೆ ಬೈಪಾಸ್, 96.20 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ-ಮಲ್ಪೆ ದ್ವಿಪಥ ರಸ್ತೆ ಅಗಲೀಕರಣ ಮತ್ತು ಶಿವಮೊಗ್ಗ-ಮಂಗಳೂರು ರಸ್ತೆ ಭಾರತೀಪುರ ಬಳಿ ರಸ್ತೆ ನಿರ್ಮಾಣ, 896.16 ಕೋಟಿ ವೆಚ್ಚದ 44 ಸ್ಮಾರ್ಟ್‍ಸಿಟಿ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ. 45 ಕೋಟಿ ವೆಚ್ಚದ ಶಿಮುಲ್ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ, ಎಪಿಎಂಸಿ ಆವರಣದಲ್ಲಿ 8 ಕೋಟಿ ವೆಚ್ಚದ ಮ್ಯಾಮ್‍ಕೋಸ್ ಆಡಳಿತ ಕಚೇರಿ, ಮೇಗರವಳ್ಳಿ-ಆಗುಂಬೆವರೆಗೆ 96 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನೂರಾರು ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಿದ್ದಾರೆ.
60ನೇ ಹುಟ್ಟುಹಬ್ಬ: ತಮ್ಮ 60ನೇ ವರ್ಷದ ಹುಟ್ಟುಹಬ್ಬಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಬಂದಿದ್ದರು. ಇದೀಗ 80ನೇ ವರ್ಷದ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿರುವುದು ಎರಡೂ ಹುಟ್ಟುಹಬ್ಬವೂ ವಿಶೇಷವಾಗಿದೆ ಎಂದರು.
ಶಿವಮೊಗ್ಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭ.@narendramodi https://t.co/cGlA8PrYFk
— CM of Karnataka (@CMofKarnataka) February 27, 2023