Home Uncategorized ಹೆಚ್ಚಿದ ಬೇಡಿಕೆ: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

ಹೆಚ್ಚಿದ ಬೇಡಿಕೆ: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

6
0
Advertisement
bengaluru

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನತೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಈ ನಡುವೆ ರಾಜ್ಯದಲ್ಲಿ ಕೋವಿಶೀಲಡ್ ಮತ್ತು ಕಾರ್ಬೆವ್ಯಾಕ್ಸ್‌ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನತೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಈ ನಡುವೆ ರಾಜ್ಯದಲ್ಲಿ ಕೋವಿಶೀಲಡ್ ಮತ್ತು ಕಾರ್ಬೆವ್ಯಾಕ್ಸ್‌ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ಬುಧವಾರದವರೆಗೆ ರಾಜ್ಯದಲ್ಲಿ 6.87 ಲಕ್ಷ ಡೋಸ್ ಕೋವಾಕ್ಸಿನ್ ಲಭ್ಯವಿತ್ತು. ರಾಜ್ಯದ ಬಹುಪಾಲು ಜನರು ಕೋವಿಶೀಲ್ಡ್ ಅನ್ನು ತೆಗೆದುಕೊಂಡಿರುವುದರಿಂದ, ಇದೀಗ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಕಾಯುತ್ತಿದ್ದಾರೆ.

ಬೂಸ್ಟರ್ ಡೋಸ್ ಲಸಿಕೆ ಕುರಿತು ಜನರಲ್ಲಿ ಮಿಶ್ರ ಪ್ರತಿಕ್ರಿಯೆಯೂ ಇದೆ. ಕೆಲವರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.

ಕೋವಿಶೀಲ್ಟ್ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳಲು ಕೆಲವರು ಕಾಯುತ್ತಿದ್ದರೆ, ಇನ್ನೂ ಕೆಲವರು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ.

bengaluru bengaluru

ಕೋವಿಶೀಲ್ಡ್ ಅನ್ನು ಆಯ್ಕೆ ಮಾಡಿದವರಿಗೆ ಅದೇ ಲಸಿಕೆ ಅಥವಾ ಹೆಟೆರೊಲಾಜಸ್ ಕಾರ್ಬೆವಾಕ್ಸ್ ನೀಡಲಾಗುತ್ತದೆ. ಆದಾಗ್ಯೂ, ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕಾರ್ಬೆವ್ಯಾಕ್ಸ್‌ ಎರಡೂ ಲಭ್ಯವಿಲ್ಲದಂತಾಗಿದೆ.

ಸರ್ಕಾರಿ ಬೌರಿಂಗ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾತನಾಡಿ, ಲಸಿಕೆ ಕೊರತೆ ಎದುರಾಗಿದೆ ಎಂದು ಹೇಳಿದ್ದಾರೆ.

“ಸರ್ಕಾರವು ಲಸಿಕೆಗಳನ್ನು ಮಿಶ್ರಣ ಮಾಡಲು ಅನುಮತಿಸಿದರೆ, ನಾವು ಕೋವಿಶೀಲ್ಡ್ ಪಡೆದವರಿಗೆ ಕೋವಾಕ್ಸಿನ್ ಅನ್ನು ನೀಡಬಹುದು. ಕೋವಾಕ್ಸಿನ್ ಡೋಸ್‌ಗಳು ಈ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುತ್ತವೆ ಎಂದು ಹೇಳಿದ್ದಾರೆ.

ರಾಜ್ಯದ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಮಾತನಾಡಿ, ಲಸಿಕೆಗಳನ್ನು ಮಿಶ್ರಣ ಮಾಡುವ ಬಗ್ಗೆ ಯಾವುದೇ ಚರ್ಚೆಗಳೂ ನಡೆದಿಲ್ಲ. ಕೋವಿಶೀಲ್ಡ್ ತೆಗೆದುಕೊಂಡ ಜನರು ಬೂಸ್ಟರ್ ಡೋಸ್ ಬರುವವರೆಗೆ ಕಾಯಬೇಕಾಗಿದೆ ಎಂದು ಹೇಳಿದ್ದಾರೆ.

ಲಸಿಕೆಗಳ ಮಿಶ್ರಣವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ವೈರಸ್ ಅನ್ನು ಗುರುತಿಸಲು ಮತ್ತು ಕಾರ್ಯನಿರ್ವಹಿಸಲು ಅನೇಕ ಮಾರ್ಗಗಳನ್ನು ನೀಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಮತ್ತೊಬ್ಬ ಸದಸ್ಯರು ಹೇಳಿದ್ದಾರೆ. ಆದರೆ ಕ್ಲಿನಿಕಲ್ ಪ್ರಯೋಗಗಳ ಅಂತಿಮ ಫಲಿತಾಂಶಗಳು ಅದನ್ನು ಸಮರ್ಥಿಸಲು ಇನ್ನೂ ಲಭ್ಯವಾಗಿಲ್ಲ.

ಲಸಿಕೆಗಳನ್ನು ಬೆರೆಸುವ ಕುರಿತು ಯಾವುದೇ ನಿರ್ದೇಶನವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಡಿ ರಂದೀಪ್ ಅವರು ಹೇಳಿದ್ದಾರೆ

ಸದ್ಯಕ್ಕೆ, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಲಸಿಕೆಯನ್ನು ಪಡೆದಿರುವ ಎಲ್ಲ ವ್ಯಕ್ತಿಗಳಿಗೆ ಮುನ್ನೆಚ್ಚರಿಕೆ/ಬೂಸ್ಟರ್ ಡೋಸ್‌ನಂತೆ ಕೇಂದ್ರ ಆರೋಗ್ಯ ಸಚಿವಾಲಯವು ಕಾರ್ಬೆವಾಕ್ಸ್ ಅನ್ನು ಮಾತ್ರ ಅನುಮತಿಸಿದೆ.

ನಾವು 25 ಲಕ್ಷ ಕೋವಿಶೀಲ್ಡ್ ಮತ್ತು 5 ಲಕ್ಷ ಕಾರ್ಬೆವಾಕ್ಸ್ ಡೋಸ್‌ಗಳಿಗಾಗಿ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ವಾರಾಂತ್ಯದಲ್ಲಿ ವಿತರಣೆ ಮಾಡುವ ನಿರೀಕ್ಷೆಗಳಿವೆ. ನಮ್ಮಲ್ಲಿ 6.87 ಲಕ್ಷ ಕೋವಾಕ್ಸಿನ್ ಲಸಿಕೆಯಿದೆ ಎಂದು ತಿಳಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here