Home Uncategorized ನನಗಾದ ಅವಮಾನ, ನೋವು ಬೇರೆ ಹೆಣ್ಣುಮಕ್ಕಳಿಗೆ ಬರುವುದು ಬೇಡ, ಐಪಿಎಸ್ ಅಧಿಕಾರಿ ರೂಪಾ ಅವರ ಹೋರಾಟಕ್ಕೆ...

ನನಗಾದ ಅವಮಾನ, ನೋವು ಬೇರೆ ಹೆಣ್ಣುಮಕ್ಕಳಿಗೆ ಬರುವುದು ಬೇಡ, ಐಪಿಎಸ್ ಅಧಿಕಾರಿ ರೂಪಾ ಅವರ ಹೋರಾಟಕ್ಕೆ ಯಶಸ್ಸು ಸಿಗಲಿ: ಡಿ ಕೆ ರವಿ ಸಾವಿನ ಬಗ್ಗೆ ಮಾತನಾಡಿದ ಪತ್ನಿ ಕುಸುಮಾ

20
0

ನನಗೆ ಆದ ನೋವು, ನಾನು ಅನುಭವಿಸಿದ ನರಕಯಾತನೆ, ಕಷ್ಟಗಳು ಬೇರೆ ಯಾವುದೇ ಕುಟುಂಬದ ಹೆಣ್ಣು ಮಗಳಿಗೆ ಬರುವುದು ಬೇಡ, ಅನುಭವಿಸುವುದೂ ಬೇಡ ಎಂದೇ ನಾನು ದೇವರಲ್ಲಿ ಕೇಳಿಕೊಳ್ಳುವುದು, ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ, ಅದು ಇಂದು ಅಥವಾ ನಾಳೆ ನಮ್ಮನ್ನು ಖಂಡಿತಾ ಕಾಡುತ್ತದೆ, ಇದು ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಪತ್ನಿ ಕುಸುಮಾ ಹನುಮಂತಯ್ಯ ನಿನ್ನೆ ಮಾಧ್ಯಮಗ ಬೆಂಗಳೂರು: ನನಗೆ ಆದ ನೋವು, ನಾನು ಅನುಭವಿಸಿದ ನರಕಯಾತನೆ, ಕಷ್ಟಗಳು ಬೇರೆ ಯಾವುದೇ ಕುಟುಂಬದ ಹೆಣ್ಣು ಮಗಳಿಗೆ ಬರುವುದು ಬೇಡ, ಅನುಭವಿಸುವುದೂ ಬೇಡ ಎಂದೇ ನಾನು ದೇವರಲ್ಲಿ ಕೇಳಿಕೊಳ್ಳುವುದು, ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ, ಅದು ಇಂದು ಅಥವಾ ನಾಳೆ ನಮ್ಮನ್ನು ಖಂಡಿತಾ ಕಾಡುತ್ತದೆ, ಇದು ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಪತ್ನಿ ಕುಸುಮಾ ಹನುಮಂತಯ್ಯ ನಿನ್ನೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ವೇಳೆ ಆಡಿರುವ ಮಾತು.

ರಾಜ್ಯದ ಇಬ್ಬರು ಖ್ಯಾತ ಸರ್ಕಾರದ ಹಿರಿಯ ಮಹಿಳಾ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಜಟಾಪಟಿ ಈಗ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಜನರ ಬಾಯಲ್ಲಿ ಚರ್ಚೆಯ ವಿಷಯವಾಗಿದೆ. ಐಪಿಎಸ್ ಮಹಿಳಾ ಅಧಿಕಾರಿ ಡಿ ರೂಪಾ ಅವರು ಆಂಧ್ರ ಪ್ರದೇಶ ಮೂಲದ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಖ್ಯಾತಿ ಮತ್ತು ಕುಖ್ಯಾತಿ ಗಳಿಸಿರುವ ರೋಹಿಣಿ ಸಿಂಧೂರಿ ವಿರುದ್ಧ ಪುಂಖಾನುಪುಂಖವಾಗಿ ಆರೋಪ ಮಾಡುತ್ತಲೇ ಹೋದರು. ಆರಂಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು, ಆರೋಪಗಳನ್ನು ಪಟ್ಟಿ ಮಾಡುತ್ತಾ ಹೋದ ಅಧಿಕಾರಿ ರೂಪ ನಂತರ ಮಾಧ್ಯಮಗಳ ಮುಂದೆ ಬಂದು ಕೂಡ ಹೇಳಿಕೆ ನೀಡಿದರು. 

ಇದಕ್ಕೆ ರೋಹಿಣಿ ಸಿಂಧೂರಿಯವರು ಮಾಧ್ಯಮ ಪ್ರಕಟಣೆ ಹೊರಡಿಸಿ ರೂಪಾ ಅವರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.
ನನ್ನ ಪತಿಯ ಸಾವಿನ ವಿಚಾರದಲ್ಲಿ ಸಿಬಿಐ ರಿಪೋರ್ಟ್ ಬಂದ ಮೇಲೆ ವರದಿಯಲ್ಲಿ ಏನಿದೆ ಎಂಬುದನ್ನು ಯಾರು ಕೂಡ ಚರ್ಚೆ ಮಾಡಲೇ ಇಲ್ಲ, ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಬಿಟ್ಟರೆ ಸಿಬಿಐ ವರದಿಯ ಬಗ್ಗೆ ಯಾರು ಕೂಡ ಆಕ್ಷೇಪವೆತ್ತುವುದಾಗಲಿ, ತನಿಖೆ ಮಾಡಲು ಮುಂದೆ ಬರಲೇ ಇಲ್ಲ. ರವಿಯವರು ತೀರಿಹೋದಾಗ ಆದ ಕೆಲವೊಂದು ಬೆಳವಣಿಗೆಗಳು ಬಿಟ್ಟರೆ ಸಿಬಿಐ ತನಿಖೆ ಮಾಡಿ ವರದಿ ಸಲ್ಲಿಸಿದ ಮೇಲೆ ಸಿಬಿಐ ತನಿಖೆಯಲ್ಲಿ ಯಾವ ಅಂಶಗಳಿತ್ತು ಎಂಬುದನ್ನು ತೀರಿಹೋದ ಸಂದರ್ಭದಲ್ಲಿ ಕಂಡುಬಂದಿದ್ದ ಆಸಕ್ತಿ ನಂತರ ಯಾರು ತೋರಿಸಲೇ ಇಲ್ಲ ಎಂಬ ನೋವು ನನಗಿದೆ ಎಂದರು.

ಐಪಿಎಸ್ ಅಧಿಕಾರಿ ರೂಪಾ ಅವರ ಬಗ್ಗೆ ನನಗೆ ಗೌರವ ಇದೆ, ಅವರು ಮಾಡುತ್ತಿರುವ ಹೋರಾಟಕ್ಕೆ, ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಅವರ ಹೋರಾಟಕ್ಕೆ ಯಶಸ್ಸು ಸಿಗಲಿ. ಸಿಬಿಐ ವರದಿಯಲ್ಲಿ ಎಲ್ಲವೂ ಸವಿಸ್ತಾರವಾಗಿ ಇದೆ. ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು.

ಡಿ ಕೆ ರವಿ ಮಾನಸಿಕ ಅಸ್ವಸ್ಥರಾಗಿದ್ದರು ಎಂದರೆ ನನಗೆ ಬಹಳ ನೋವಾಗುತ್ತದೆ: ಇಂದು ಡಿ ಕೆ ರವಿಯವರ ಸಾವಿನ ಬಗ್ಗೆ ಹತ್ತಾರು ಸುದ್ದಿಗಳು ಬರುತ್ತಿವೆ. ಅವರು ಮಾನಸಿಕ ಅಸ್ವಸ್ಥರಾಗಿದ್ದರು ಎಂದರೆ ನನಗೆ ಬಹಳ ನೋವಾಗುತ್ತಿದೆ. ಯಾಕೆಂದರೆ ಅವರು ಮಾನಸಿಕವಾಗಿ ಸದೃಢರಾಗಿದ್ದರು. ಯಾರಾದರೂ ಹಾಗೆ ಹೇಳುತ್ತಿದ್ದಾರೆ ಎಂದರೆ ಅವರಿಗೆ ಮಾಡುತ್ತಿರುವ ಅವಮಾನ ಎನ್ನಬಹುದು ಎಂದರು.

ನಾನು ಯಾವುದೇ ತಪ್ಪು ಮಾಡದಿದ್ದರೂ ಡಿ ಕೆ ರವಿಯವರು ತೀರಿಕೊಂಡಾಗ ತಪ್ಪಿತಸ್ಥೆ ಸ್ಥಾನದಲ್ಲಿ ನಿಲ್ಲಿಸಿದರು. ಅವರು ತೀರಿಕೊಂಡಾಗಿನಿಂದ ನನಗಾದ ಅವಮಾನ, ನೋವು ಅಷ್ಟಿಷ್ಟಲ್ಲ, ಇಂತಹ ಪರಿಸ್ಥಿತಿ ಯಾವ ಹೆಣ್ಣುಮಗಳಿಗೂ ಬರಬಾರದು ಎಂದರು.
ಡಿ ಕೆ ರವಿಯವರು ಮೊಬೈಲ್ ಚಾಟಿಂಗ್ ನಡೆಸಿದ್ದು, ಅವರು ಏನೇನು ಚಾಟಿಂಗ್ ಮಾಡಿದ್ದರು ಎಂದು ಸಿಬಿಐ ವರದಿಯಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ. ಯಾವ ಕಾರಣಕ್ಕೆ ರವಿಯವರು ಆತ್ಮಹತ್ಯೆ ಮಾಡಿಕೊಂಡರು ಎಂಬುದಕ್ಕೆ ಸಿಬಿಐ ವರದಿಯಲ್ಲಿ ಸವಿಸ್ತಾರ ಕಾರಣಗಳಿವೆ. ಅದು ಹೊರಗಿನ ಪ್ರಪಂಚಕ್ಕೆ ಸರಿಯಾಗಿ ತೋರಿಸಬೇಕಷ್ಟೆ ಎಂದು ಕುಸುಮಾ ನುಡಿದರು.

LEAVE A REPLY

Please enter your comment!
Please enter your name here