Home Uncategorized ಬಿಜೆಪಿ ಎಂಎಲ್‌ಸಿ ಆರ್.ಶಂಕರ್ ನಿವಾಸದ ಮೇಲೆ ಐಟಿ ದಾಳಿ: 50 ಸಾವಿರ ಸೀರೆ, 20 ಸಾವಿರ...

ಬಿಜೆಪಿ ಎಂಎಲ್‌ಸಿ ಆರ್.ಶಂಕರ್ ನಿವಾಸದ ಮೇಲೆ ಐಟಿ ದಾಳಿ: 50 ಸಾವಿರ ಸೀರೆ, 20 ಸಾವಿರ ಶಾಲಾ ಬ್ಯಾಗ್'ಗಳು ವಶಕ್ಕೆ

16
0
Advertisement
bengaluru

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿರುವ ಬಿಜೆಪಿ ಎಂಎಲ್ಸಿ ಆರ್.ಶಂಕರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 50 ಸಾವಿರಕ್ಕೂ ಹೆಚ್ಚು ಸೀರೆಗಳು, 20 ಸಾವಿರ ಶಾಲಾ ಬ್ಯಾಗ್‌ಗಳು ಮತ್ತು ಸಾವಿರಾರು ಸ್ಟೀಲ್ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಹಾವೇರಿ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿರುವ ಬಿಜೆಪಿ ಎಂಎಲ್ಸಿ ಆರ್.ಶಂಕರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 50 ಸಾವಿರಕ್ಕೂ ಹೆಚ್ಚು ಸೀರೆಗಳು, 20 ಸಾವಿರ ಶಾಲಾ ಬ್ಯಾಗ್‌ಗಳು ಮತ್ತು ಸಾವಿರಾರು ಸ್ಟೀಲ್ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಚುನಾವಣೆಗೂ ಮುನ್ನ ಶಂಕರ್ ಅವರು ಮತದಾರರ ಪಟ್ಟಿ ಹಿಡಿದು ಕುಕ್ಕರ್, ಸೀರೆ, ತಟ್ಟೆ, ಲೋಟಗಳನ್ನು ಹಂಚುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ದಾಳಿ ವೇಳೆ ಶಂಕರ್ ಅವರ ಕಚೇರಿಯಲ್ಲಿ ಕೋಟ್ಯಾಂತರ ರುಪಾಯಿ ಬೆಲೆಬಾಳುವ ಸೀರೆ, ಸ್ಕೂಲ್ ಬ್ಯಾಗ್, ತಟ್ಟೆ, ಲೋಟ ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅವರ ಮೇಲೆ ಪ್ರಕರಣ ದಾಖಲಿಸುವ ಕುರಿತು ನ್ಯಾಯಾಲಯದ ಅನುಮತಿ ಕೋರಿದ್ದಾರೆಂದು ತಿಳಿದುಬಂದಿದೆ.

20,000 ಸ್ಕೂಲ್ ಬ್ಯಾಗ್’ಗಲು, 55,000 ಸೀರೆಗಳು, ಸ್ಟೀಲ್ ಪ್ಲೇಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಎಲ್ಲಾ ವಸ್ತುಗಳು ಹಾಗೂ ಬಿಲ್ ಗಳನ್ನು ಪರಿಶೀಲನೆ ನಡೆಸಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.

bengaluru bengaluru

ಐಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಶಂಕರ್ ಅವರು, ಪ್ರತೀಯೊಂದು ವಸ್ತುವಿಗೂ ನನ್ನ ಬಳಿ ಬಿಲ್ ಗಳಿವೆ. 2012ಕ್ಕೆ ನಾನು ರಾಣೆ ಬೆನ್ನೂರಿಗೆ ಬಂದಿದ್ದೆ. ಅಂದಿನಿಂದಲೂ ನಾನು ಜನರಿಗೆ ಸಹಾಯ ಮಾಡುತ್ತಿದ್ದೇನೆ. ಐಟಿ ಅಧಿಕಾರಿಗಳೊಂದಿಗೆ ನಾನು ಸಹಕರಿಸುತ್ತೇನೆ. ಹೆದರುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಕಾನೂನು ಕ್ರಮ ಎದುರಿಸಲು ಸಿದ್ಧನಿದ್ದೇನೆ. ಜನರಿಗೆ ಸಹಾಯ ಮಾಡಲು ನನ್ನ ಎಲ್ಲಾ ಆಸ್ತಿ ಮಾರಾಟ ಮಾಡಲೂ ಸಿದ್ಧನಿದ್ದೇನೆಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಕ್ರಿಯೆ ನೀಡಿ, ಸಂಸ್ಥೆಗೆ ನಾನು ಮುಕ್ತ ಹಸ್ತವನ್ನು ನೀಡಿದ್ದೇವೆ. ಎಲ್ಲೂ ಕಾನೂನಾತ್ಮಕವಾಗಿದ್ದರೆ, ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಶಂಕರ್ ಅವರ ಬೆಂಬಲಿಗರು ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಶಂಕರ್ ಅವರು ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದು, ಜನರಿಗೆ ಸಹಾಯ ಮಾಡಲು ಟ್ರಸ್ಟ್ ವೊಂದನ್ನು ನಡೆಸುತ್ತಿದ್ದಾರೆಂದು ಶಂಕರ್ ಅವರ ಬೆಂಬಲಿಗರು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here