Home Uncategorized ಬೆಳಗಾವಿ ಆಟಗಾರನ ಅದ್ಭುತ ಕ್ಯಾಚ್‍ಗೆ ಫಿದಾ ಆದ ಸಚಿನ್ ತೆಂಡೂಲ್ಕರ್!

ಬೆಳಗಾವಿ ಆಟಗಾರನ ಅದ್ಭುತ ಕ್ಯಾಚ್‍ಗೆ ಫಿದಾ ಆದ ಸಚಿನ್ ತೆಂಡೂಲ್ಕರ್!

15
0

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಅತ್ಯುತ್ತಮ ಫೀಲ್ಡಿಂಗ್‌ಗಳನ್ನು ನೋಡಿಯೇ ಇರುತ್ತೇವೆ. ‘ಕ್ಯಾಚಸ್ ವಿನ್ ದ ಮ್ಯಾಚಸ್’ ಎನ್ನುವ ಜನಪ್ರಿಯ ಮಾತಿದೆ. ಇದು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮಾತ್ರವೇ ಅಲ್ಲ, ದೇಶೀಯ ಕ್ರಿಕೆಟ್, ಗಲ್ಲಿ ಕ್ರಿಕೆಟ್‌, ಟೆನಿಸ್ ಬಾಲ್ ಟೂರ್ನಿಗಳಲ್ಲಿ ಕೂಡ ಹಲವು ಅದ್ಬುತ ಕ್ಯಾಚ್‌ಗಳು ಆಗಾಗ ಗಮನ ಸೆಳೆಯುತ್ತವೆ. ಬೆಳಗಾವಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಅತ್ಯುತ್ತಮ ಫೀಲ್ಡಿಂಗ್‌ಗಳನ್ನು ನೋಡಿಯೇ ಇರುತ್ತೇವೆ. ‘ಕ್ಯಾಚಸ್ ವಿನ್ ದ ಮ್ಯಾಚಸ್’ ಎನ್ನುವ ಜನಪ್ರಿಯ ಮಾತಿದೆ. ಇದು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮಾತ್ರವೇ ಅಲ್ಲ, ದೇಶೀಯ ಕ್ರಿಕೆಟ್, ಗಲ್ಲಿ ಕ್ರಿಕೆಟ್‌, ಟೆನಿಸ್ ಬಾಲ್ ಟೂರ್ನಿಗಳಲ್ಲಿ ಕೂಡ ಹಲವು ಅದ್ಬುತ ಕ್ಯಾಚ್‌ಗಳು ಆಗಾಗ ಗಮನ ಸೆಳೆಯುತ್ತವೆ.

ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಶನಿವಾರ ನಡೆದ ಟೆನಿಸ್‌ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಇಂತಹದ್ದೇ ಬೆಳವಣಿಗೆಯೊಂದು ಕಂಡು ಬಂದಿದ್ದು, ಇದು ಹಲವರ ಗಮನ ಸೆಳೆಯುತ್ತಿದೆ.

ಬೆಳಗಾವಿ ಹುಡುಗನೊಬ್ಬ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಹೀಗೂ ಕ್ಯಾಚ್ ಹಿಡಿಯಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೆಕೆಟ್ ದೇವರು ಕೂಡ ಈ ಹುಡುಗನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಇರುವ ಆಟಗಾರನ ಹೆಸರು ಕಿರಣ್ ತಾರಳೇಕರ್, ಬೌಂಡರಿ ಗೆರೆಯಾಚೆ ಹೋಗುತ್ತಿದ್ದ ಚೆಂಡನ್ನು ಹಿಡಿಯುವ ಕಿರಣ್ ಬೌಂಡರಿ ಗೆರೆಗೆ ಕಾಲು ತಾಗುವ ಭಯದಿಂದ ಚೆಂಡನ್ನು ಮೇಲೆಕ್ಕೆ ಎಸೆಯುತ್ತಾರೆ. ಆದರೆ, ಚೆಂಡು ಬೌಂಡರಿ ಗೆರೆಯಾಚೆ ಹೋಗುವುದನ್ನು ಕಂಡು, ಬೌಂಡರಿ ಗೆರೆ ದಾಟಿ ಫುಟ್ಬಾಲ್ ರೀತಿ ಚೆಂಡನ್ನು ಒದ್ದು ಬೌಂಡರಿ ಒಳಗೆ ಕಳುಹಿಸುತ್ತಾರೆ. ಬೌಂಡರಿ ಗೆರೆಯ ಬಳಿಯಿದ್ದ ಮತ್ತೊಬ್ಬ ಫೀಲ್ಡರ್ ಆ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.

ಈ ದೃಶ್ಯ ಭಾನುವಾರ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವು ಜನರು ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಅದ್ಭುತ ಕ್ಯಾಚ್‍ನ ವಿಡಿಯೋ ತುಣುಕನ್ನು ಸಚಿನ್ ತೆಂಡೂಲ್ಕರ್ ಕೂಡ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಕಿರಣ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

This is what happens when you bring a guy who also knows how to play football!! href=”https://t.co/IaDb5EBUOg”>https://t.co/IaDb5EBUOg
— Sachin Tendulkar (@sachin_rt) February 12, 2023

‘ಫುಟ್ಬಾಲ್ ಕೂಡ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದಾಗ ಹೀಗೇ ಆಗುತ್ತದೆ…’ಎಂದು ಬರೆದುಕೊಂಡಿದ್ದಾರೆ.

ಮುಂಬೈನ ಇಂಜಿನಿಯರ್ ಆಗಿರುವ ಕ್ರಿಕೆಟ್ ಬರಹಗಾರ ಓಂಕಾರ್ ಮಂಕಮೆ ಅವರು ಮೊದಲು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡೋಯವನ್ನು ಹಂಚಿಕೊಂಡಿದ್ದರು. ನಂತರ ಈ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಟ್ಯಾಗ್ ಮಾಡಿದ್ದರು.

ಕುತೂಹಲಕಾರಿ ವಿಚಾರವೆಂದರೆ ಬ್ರಿಟನ್ ಮಾಧ್ಯಮ ಕಂಪನಿಯಾದ ‘ಕ್ರಿಕೆಟ್ ಡಿಸ್ಟ್ರಿಕ್ಟ್’ನ ಟ್ವಿಟರ್ ಖಾತೆಯಲ್ಲಿಯೂ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆಸ್ಟ್ರೇಲಿಯನ್ ಕ್ರಿಕೆಟಿಗ ಮೈಕೆಲ್ ವಾನ್ ಕೂಡ, ಕಿರಣ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಖಂಡಿತವಾಗಿಯೂ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್” ಎಂದು ಟ್ವೀಟ್ ಮಾಡಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ ನಿಶಾಮ್ ಟ್ವೀಟ್ ಮಾಡಿ, “ಕಂಪ್ಲೀಟ್ಲಿ ಔಟ್ ಸ್ಯಾಂಡಿಂಗ್” ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here