Home Uncategorized ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಮತ್ತೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಮತ್ತೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

18
0

ಬೆಂಗಳೂರು: ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳು, ವಿವಾದಗಳಾಗುತ್ತಿವೆ. ಚುನಾವಣೆ ಎದುರಿಸಲು ಪಕ್ಷಗಳು ನಾನಾ ತಂತ್ರಗಳನ್ನು ಮಾಡುತ್ತಿವೆ. ಇದರ ನಡುವೆ ಬಿಜೆಪಿ ರೌಡಿಶೀಟರ್​ಗಳಿಗೆ ಮಣೆ ಹಾಕುತ್ತಿದೆ ಎಂಬ ಮಾತುಗಳು ಸುಳಿದಾಡುತ್ತಿವೆ. ಈ ಸಂಬಂಧ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ರೌಡಿಗಳಿಗೂ ಬಿಜೆಪಿಗೂ ಯಾವ ನಂಟು, ಏನು ವ್ಯವಹಾರ? ಎಂದು ಟ್ವೀಟ್​ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ. ಈಗಾಗಲೇ ಸೈಲೆಂಟ್ ಸುನಿಲ್, ಫೈಟರ್ ರವಿ, ಬೆತ್ತನಗೆರೆ ಶಂಕರ ಮತ್ತಿತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಆದ್ರೆ ಈಗ ವಿಲ್ಸನ್​ಗಾರ್ಡನ್​ ನಾಗ ಕೂಡ ನಿನ್ನೆ ರಾತ್ರಿ ಸಚಿವರ ಮನೆಗೆ ಭೇಟಿ ನೀಡಿದ್ದಾನೆ. ಸಚಿವ ವಿ.ಸೋಮಣ್ಣ ಮನೆಗೆ ರೌಡಿಶೀಟರ್​ ನಾಗ ಬಂದಿದ್ದೇಕೆ? ನಾಗನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ಟೀಕೆ ಮಾಡಿದೆ.

ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು?

ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ನಿನ್ನೆ ರಾತ್ರಿ ಸಚಿವ ವಿ.ಸೋಮಣ್ಣ ಮನೆಗೆ ಬಂದಿದ್ದೇಕೆ?

ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ @BJP4Karnataka?

— Karnataka Congress (@INCKarnataka) December 1, 2022

ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!

ಮೊದಲೆಲ್ಲ ರೌಡಿ ಶೀಟರ್‌ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ. ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೊಮ್ಮಣ್ಣನವರ ಮನೆಗೆ
ಭೇಟಿ ನೀಡಿದ್ದು ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡುವುದಕ್ಕಾ? ಎಂದು ಟ್ವೀಟ್ ಮಾಡಿದೆ.

ಹಣಬಲದಲ್ಲಿ ರಾಜಕಾರಣ ಮಾಡ್ತಿದ್ದ ಬಿಜೆಪಿ ಈಗ ತೋಳ್ಬಲದ ರಾಜಕೀಯ ಮಾಡಲು ಮುಂದಾಗಿದೆ.

ಹಗರಣ, ವೈಫಲ್ಯಗಳ ಸರಮಾಲೆಯನ್ನೇ ಹೊತ್ತಿರುವ ಬಿಜೆಪಿ ಚುನಾವಣೆ ಗೆಲ್ಲುವುದಕ್ಕೆ ಎಲ್ಲಾ ದುಷ್ಟ ಮಾರ್ಗಗಳನ್ನೂ ಹಿಡಿಯುತ್ತಿದೆ.

ಮತದಾರ ಮಾಹಿತಿ ಕಳ್ಳತನ ಒಂದೆಡೆಯಾದರೆ, ರೌಡಿಗಳನ್ನು ಬಳಸಿ ಬೆದರಿಸಿ ಮತ ಪಡೆಯಲು ರೌಡಿ ಮೋರ್ಚಾ ಸ್ಥಾಪನೆಗೆ ಹೊಂಚು ಹಾಕಿದೆ. pic.twitter.com/v74kzKxD7q

— Karnataka Congress (@INCKarnataka) December 1, 2022

LEAVE A REPLY

Please enter your comment!
Please enter your name here