Home Uncategorized ಸಲಿಂಗ ವಿವಾಹ ಕುರಿತು ಹೇಳಿಕೆ: ಕ್ಷಮೆಯಾಚಿಸುವಂತೆ ಸುಶೀಲ್​ ಕುಮಾರ್ ಮೋದಿಗೆ ಅಕೈ ಪದ್ಮಶಾಲಿ ಆಗ್ರಹ

ಸಲಿಂಗ ವಿವಾಹ ಕುರಿತು ಹೇಳಿಕೆ: ಕ್ಷಮೆಯಾಚಿಸುವಂತೆ ಸುಶೀಲ್​ ಕುಮಾರ್ ಮೋದಿಗೆ ಅಕೈ ಪದ್ಮಶಾಲಿ ಆಗ್ರಹ

14
0
Advertisement
bengaluru

ಸಲಿಂಗ ವಿವಾಹ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಕ್ಷಮೆಯಾಚಿಸಬೇಕೆಂದು ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರು ಶನಿವಾರ ಆಗ್ರಹಿಸಿದ್ದಾರೆ. ಬೆಂಗಳೂರು: ಸಲಿಂಗ ವಿವಾಹ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಕ್ಷಮೆಯಾಚಿಸಬೇಕೆಂದು ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರು ಶನಿವಾರ ಆಗ್ರಹಿಸಿದ್ದಾರೆ.

ರಾಜ್ಯಸಭೆ ಕಲಾಪದ ಸಂದರ್ಭ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ಸುಶೀಲ್ ಕುಮಾರ್ ಮೋದಿ ಸಲಿಂಗ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕೆಲವು ಮಂದಿ ಉದಾರವಾದಿಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಇಂತಹ ಕಾನೂನು ರೂಪಿಸುವುದರಿಂದ ದೇಶದ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಹೀಗಾಗಿ ಈ ವಿಚಾರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದು ಹೇಳಿದ್ದರು.

ಜತೆಗೆ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡಲು ನಡೆಯುವ ಹೋರಾಟವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕು. ಬಿಜೆಪಿಯಂತೂ ಸಲಿಂಗ ವಿವಾಹವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು.

bengaluru bengaluru

ಈ ಹೇಳಿಕೆಗೆ ಅಕೈ ಪದ್ಮಶಾಲಿ ವಿರೋಧ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ನನ್ನಂತೆಯೇ ಜೈವಿಕವಾಗಿ ಪುರುಷರಲ್ಲದ, ಮಹಿಳೆಯೂ ಅಲ್ಲದ ಅನೇಕರಿದ್ದಾರೆ. ಜೈವಿಕವಾಗಿ ಪುರುಷ ಮತ್ತು ಮಹಿಳೆಯಾಗಿದ್ದರೆ ಮಾತ್ರ ಮದುವೆಯಾಗಬಹುದೇ? ಇದು ಸಮಾನತೆ, ಘನತೆ ಮತ್ತು ಒಳಗೊಳ್ಳುವಿಕೆಯ ನಮ್ಮ ಸಾಂವಿಧಾನಿಕ ಆಶಯವನ್ನು ಉಲ್ಲಂಘಿಸಿದಂತೆ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಟೀಕೆಗಳ ಮೂಲಕ ನೀವು ಎಲ್​ಜಿಬಿಟಿ ಸಮುದಾಯಕ್ಕೆ ಉಂಟುಮಾಡಿದ ನೋವಿಗೆ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here