Home High Court/ಹೈಕೋರ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಭಡ್ತಿ ಪ್ರಕರಣದಲ್ಲಿ ನಿಯಮ ಉಲ್ಲಂಘನೆ:ಹೈ ಕೋರ್ಟ್ ನಿಂದ 10ಸಾವಿರ ದಂಡ

ಸಾರ್ವಜನಿಕ ಸಂಪರ್ಕಾಧಿಕಾರಿ ಭಡ್ತಿ ಪ್ರಕರಣದಲ್ಲಿ ನಿಯಮ ಉಲ್ಲಂಘನೆ:ಹೈ ಕೋರ್ಟ್ ನಿಂದ 10ಸಾವಿರ ದಂಡ

98
0
Karnataka High Court
Advertisement
bengaluru

ಬೆಂಗಳೂರು:

ಬಿಬಿಎಂಪಿ ಆಡಳಿತ ವ್ಯವಸ್ಥೆಗೆ ಅದೇನಾಗಿದೆಯೋ ಗೊತ್ತಿಲ್ಲ…ಕೋರ್ಟ್ ಆದೇಶ-ಸೂಚನೆ ಎನ್ನುವುದು ಕಾಲ ಕಸವಾಗಿ ಪರಿಣಮಿಸಿದೆ.ಈ ಕಾರಣಕ್ಕೆ ದಂಡ ಹಾಕಿಸಿಕೊಳ್ಳುವುದು ಕಾಮನ್ ಆಗೋಗಿದೆ.ದಂಡ ಪಾವತಿಸುವಂತೆ ಆದೇಶಿಸಿದ್ದರೂ ಈ ಸಂಬಂಧ ಕಾನೂನು ಕೋಶ ಯಾವುದೇ ಆಕ್ಷೇಪಣೆ ಸಲ್ಲಿಸದೆ ತನ್ನ ನಿರ್ಲಕ್ಷ್ಯ ಮುಂದುವರೆಸಿರುವುದು ಕೂಡ ಸ್ಪಷ್ಟವಾಗಿದೆ.

ಅಂದ್ಹಾಗೆ ಕೋರ್ಟ್ ನಿಂದ ದಂಡ ಹಾಕಿಸಿಕೊಂಡಿರುವ ಪ್ರಕರಣವೇ ಉಪ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆ ಭಡ್ತಿ ವಿಚಾರ.

ನಿಯಮಬಾಹೀರವಾಗಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಉಪ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯನ್ನು ಅರ್ಹರಲ್ಲದವರಿಗೆ ನೀಡಲಾಗಿತ್ತು. ಹಾಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸುರೇಶ್ ಲಿಂಗಯ್ಯ ಅವರಿಗೆ ತಮಗೆ ಸಾಮರ್ಥ್ಯ ಇದ್ದಾಗ್ಯೂ ನೀಡಲಾಗಿತ್ತು ಎಂದು ಬಿಬಿಎಂಪಿ ಉದ್ಯೋಗಿ ಮಂಜುನಾಥ್.ವಿ ಎನ್ನುವವರು ಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಎಲ್ಲಾ ದಾಖಲೆ ಹಾಗು ಸಾಕ್ಷ್ಯಗಳನ್ನು ಪರಿಶೀಲಿಸಿ ಸುರೇಶ್ ಅವರ ನೇಮಕಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೇ ನಿಯಮಬಾಹೀರವಾಗಿ ನೇಮಕಾತಿ ಮಾಡಿದ ಬಿಬಿಎಂಪಿ ಆಡಳಿತ ವ್ಯವಸ್ಥೆಗೆ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿತ್ತು.

bengaluru bengaluru
IMG 20201105 113215

ದಂಡ ಪಾವತಿಸುವ ವಿಚಾರದಲ್ಲಿ ಬಿಬಿಎಂಪಿ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ನೇಮಕಾತಿಯಲ್ಲಿ ಆಗಿರುವ ಲೋಪ ಸರಿಪಡಿಸುವಂತೆಯೂ ಸೂಚಿಸಿದೆ.ದಂಡ ಪಾವತಿಸುವುದರ ಜೊತೆಗೆ ಸುರೇಶ್ ಲಿಂಗಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲೇಬೇಕಾದ ಸಂದಿಗ್ಧತೆಗೆ ಸಿಲುಕಿದ್ದಾರೆ ಕಮಿಷನರ್ ಮಂಜುನಾಥ ಪ್ರಸಾದ್.ಅದ್ಹೇನೆ ಆಗಲಿ,ಬಿಬಿಎಂಪಿ ಪಾಲಿಗೆ ಇದು ದೊಡ್ಡ ಮುಖಂಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.


bengaluru

LEAVE A REPLY

Please enter your comment!
Please enter your name here