Home Uncategorized 2023ರ ವಿಧಾನಸಭೆ ಚುನಾವಣೆ ತಯಾರಿ: ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದ ಮತಯಂತ್ರಗಳು

2023ರ ವಿಧಾನಸಭೆ ಚುನಾವಣೆ ತಯಾರಿ: ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದ ಮತಯಂತ್ರಗಳು

12
0

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ (2023 Assembly Election) ಕೆೆಲವೆ ತಿಂಗಳು ಬಾಕಿ ಉಳಿದಿವೆ. ಹೀಗಾಗಿ ಬೆಂಗಳೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲ ಹಂತದಲ್ಲಿ ಹೈದರಾಬಾದ್​​ನಿಂದ ಬೆಂಗಳೂರಿಗೆ ಮತಯಂತ್ರಗಳು (voting machines) ಆಗಮಿಸಿವೆ. 7,465 ಬ್ಯಾಲೆಟ್​ ಯೂನಿಟ್​, 5,558 ಕಂಟ್ರೋಲ್​​ ಯೂನಿಟ್​​ ಯಂತ್ರಗಳು ಬಂದಿವೆ. ಎರಡನೇ ಹಂತದಲ್ಲಿ ವಿವಿ ಪ್ಯಾಟ್​ಗಳು ಬರಲಿವೆ.

ಕಂದಾಯ ಭವನದ ಸ್ಟ್ರಾಂಗ್​ ರೂಮ್​ನಲ್ಲಿ ಮತಯಂತ್ರ ಭದ್ರ

ಕಂದಾಯ ಭವನದ ಸ್ಟ್ರಾಂಗ್​ ರೂಮ್​ನಲ್ಲಿ ಸಿಬ್ಬಂದಿ ಮತಯಂತ್ರಗಳನ್ನು ಇಟ್ಟಿದ್ದಾರೆ. ಈ ಸ್ಟ್ರಾಂಗ್​ ರೂಂ ಅನ್ನು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಪರಿಶೀಲಿಸಿದ್ದಾರೆ. ಸ್ಟ್ರಾಂಗ್ ರೂಂಗೆ ದಿನದ 24 ಗಂಟೆಯೂ ಭದ್ರತೆ, ಸಿಸಿಟಿವಿ ಕಣ್ಗಾವಲು ಇರುತ್ತದೆ. ಭದ್ರತೆಗೆ ರಾತ್ರಿ, ಬೆಳಗ್ಗೆ ಪಾಳಯದಲ್ಲಿ 4 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ: ನ್ಯೂ ಇಯರ್​ಗೆ 4 ಸಾವಿರ ಕ್ಯಾಮೆರಾ ಕಣ್ಗಾವಲು: ಆರಗ ಜ್ಞಾನೇಂದ್ರ

ಖಾಸಗಿ ಸಂಸ್ಥೆಗಳು ಡೋರ್ ಟು ಡೋರ್ ಸರ್ವೆ ಮಾಡುವಂತಿಲ್ಲ

ಖಾಸಗಿ ಸಂಸ್ಥೆಗಳು ಮತದಾರರ ಮಾಹಿತಿ ಪಡೆಯುವ ಯಾವುದೆ ಡೋರ್ ಟು ಡೋರ್ ಸರ್ವೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ. ಮಾಹಿತಿ ಪಡೆಯುವ ಕೆಲಸ ಮಾಡದೇ ಇರುವ ರೀತಿ ಕ್ರಮಕೈಗೊಳ್ಳಿ. ಈಗಾಗಲೇ ಖಾಸಗಿ ಸಂಸ್ಥೆಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ. ಅನುಮತಿಯನ್ನು ರದ್ದುಪಡಿಸಿ ಸರ್ವೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here