ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರು ಜಿ.ಕೃಷ್ಣಮೂರ್ತಿ ರವರಿಂದ ದಿನಸಿ ಸಾಮಾಗ್ರಿಗಳ ವಿತರಣೆ
ಬೆಂಗಳೂರು:
ರಾಜಾಜಿನಗರ ವಿಧಾನಸಭಾ ಕ್ಷೇತ್ರ , ರಾಜಾಜಿನಗರ ವಾರ್ಡ್ ನಲ್ಲಿ ಬಡವರು ,ಕೂಲಿ ಕಾರ್ಮಿಕರು ಮತ್ತು ಆಟೋ ಚಾಲಕರು ,ಸವಿತಾ ಸಮಾಜ ,ಅರ್ಚಕರು ,ಮಡಿವಾಳ ಸಮಾಜದವರಿಗೆ 5000ಸಾವಿರ ದಿನಸಿ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭ.
ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳು ,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ದೀಪಾ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭಗಳಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ,ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ ,ಸಲೀಮ್ ಅಹಮ್ಮದ್ ,ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು ,ಶಾಸಕರಾದ ರಿಜ್ಞಾನ್ ಆರ್ಹದ್ ,ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ,ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ , ಮಾಜಿ ಮಹಾಪೌರರುಗಳಾದ ಶ್ರೀಮತಿ ಜಿ.ಪದ್ಮಾವತಿ ,ರಾಮಚಂದ್ರಪ್ಪ ,ಜೆ.ಹುಚ್ಚಪ್ಪರವರು ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿರವರು ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಿದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರು ಮಾತನಾಡಿ ಕೊವಿಡ್ ಎರಡನೆಯ ಅಲೆ ಬರುತ್ತದೆ ಎಂದು ತಜ್ಞರು ವರದಿ ಕೊಟ್ಟರು ,ಸರ್ಕಾರದ ನಿರ್ಲಕ್ಯ್ರದಿಂದ ಕೊವಿಡ್ ಸೋಂಕಿತರು ಹಲವಾರು ಸಾವು ,ನೋವು ಸಂಭವಿಸಿತು.
ಕಾಂಗ್ರೆಸ್ ಪಕ್ಷದ ಪ್ರಧಾನಿ ಮನಮೋಹನ್ ಸಿಂಗ್ ರವರು ಆಡಳಿತದಲ್ಲಿ ಆರ್ಥಿಕ ಸುಧಾರಣೆಯಾಯಿತು .ಆರ್.ಟಿ.ಐ.ಮತ್ತು ಆರ್.ಟಿ.ಇ. ಹಾಗೂ ಆಹಾರ ಭದ್ರತೆ ಕಾಯಿದೆ ಜಾರಿಗೆ ಬಂತು .ಬಿ.ಜೆ.ಪಿ.ಕೇಂದ್ರ ಸರ್ಕಾರದ 7ವರ್ಷದ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ ಆಧೋಗತಿಗೆ ಇಳಿದಿದೆ .
ಪೆಟ್ರೋಲ್ ಒಂದು ಲೀಟರ್ 100ರೂಪಾಯಿ ಮತ್ತು ಡೀಸಲ್ ಒಂದು ಲೀಟರ್ 94ರೂಪಾಯಿ ಆಗಿದೆ .ಕೇಂದ್ರ ಮತ್ತು ರಾಜ್ಯ ಸರ್ಕಾರ ಸೆಸ್ ಕಡಿಮೆ ಮಾಡಬೇಕು .
ರಾಜ್ಯ ಸರ್ಕಾರಕ್ಕೆ 15ನೇ ವೇತನ ಆಯೋಗದಿಂದ 5495ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರ ಕೊಟ್ಟಿಲ್ಲ .
ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಪ್ರತಿಯೊಬ್ಬರಿಗೂ ತಲಾ 7ಕೆ.ಜಿ.ಅಕ್ಕಿ ನೀಡಲಾಗುತ್ತಿತು ಬಿ.ಜೆ.ಪಿ.ಸರ್ಕಾರ ಕಡಿತ ಮಾಡಿ ತಲಾ 2ಕೆ.ಜಿ.ನೀಡುತ್ತಿದೆ.ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರುವುದು ಖಚಿತ ತಲಾ 10ಕೆ.ಜಿ.ಅಕ್ಕಿ ಉಚಿತವಾಗಿ ನೀಡಲಾಗುವುದು ಹೇಳಿದರು.
ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಸತತ ಹೋರಟ ಮಾಡಿ ಕಾರ್ಮಿಕ ವರ್ಗ ,ಅಸಂಘಟಿತ ಕಾರ್ಮಿಕರಿಗೆ 5ಸಾವಿರ ರೂಪಾಯಿ ಮತ್ತು ಈ ವರ್ಷ 2ಸಾವಿರ ರೂಪಾಯಿ ಪರಿಹಾರ ಕೊಡಿಸುವುದಲ್ಲಿ ಹೋರಟ ಮಾಡಬೇಕಾಯಿತು ಅದರೆ ಪರಿಹಾರ ಧನ ಇನ್ನು ಸಮರ್ಪಕವಾಗಿ ತಲುಪಿಲ್ಲ .
ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ .ಕೊವಿಡ್ ನಿಂದ 18ತಿಂಗಳ ಸಂಕಷ್ಟ ಸಮಯದಲ್ಲಿ ಬಡವರಿಗೆ ಸಹಾಯ ಮಾಡಬೇಕು ಎಂದು 223ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಕಿಟ್ ಗಳನ್ನು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ,ಕಾರ್ಯಕರ್ತರು ವಿತರಿಸಿದರು .
ಪ್ರತಿ ಜಿಲ್ಲೆ ಮತ್ತು ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸರ್ವೆ ಕಾರ್ಯ ಮಾಡಲಾಗುತ್ತಿದೆ .ಸರ್ವೆಯಲ್ಲಿ ಉದ್ಯೋಗ ಕಳೆದುಕೊಂಡವರು ಮತ್ತು ಕೊವಿಡ್ ಸೋಂಕಿತರು ಮತ್ತು ಮೃತಪಟ್ಟರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದರಲ್ಲಿ ಹೋರಟ ಮಾಡಲಾಗುವುದು ಎಂದು ಹೇಳಿದರು.