Home ಬೆಂಗಳೂರು ನಗರ ಬೆಂಗಳೂರು ನಗರದ ಟೌನ್ ಹಾಲ್ ಬಳಿ 7-8 ಅಡಿಗಳಷ್ಟು ರಸ್ತೆಯು ಕುಸಿತಗೊಂಡು ಗುಂಡಿ ನಿರ್ಮಾಣ

ಬೆಂಗಳೂರು ನಗರದ ಟೌನ್ ಹಾಲ್ ಬಳಿ 7-8 ಅಡಿಗಳಷ್ಟು ರಸ್ತೆಯು ಕುಸಿತಗೊಂಡು ಗುಂಡಿ ನಿರ್ಮಾಣ

173
0
8-foot sinkhole sends traffic for a toss near Bengaluru's Town Hall
Advertisement
bengaluru

ಬೆಂಗಳೂರು:

ಬೆಂಗಳೂರಿನ ಅತ್ಯಂತ ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳಲ್ಲಿ ಒಂದಾದ ಜೆಸಿ ರಸ್ತೆಯಲ್ಲಿ, ಬಿಬಿಎಂಪಿ ಕೇಂದ್ರ ಕಚೇರಿಗೆ ಸಮೀಪ ರಸ್ತೆಯ ಮಧ್ಯದಲ್ಲಿ ಸುಮಾರು 7-8 ಅಡಿ ಆಳದ ಗುಂಡಿಯುಂದು ಗುರುವಾರ ನಿರ್ಮಾಣಗೊಂಡಿದ್ದು, ನಗರದಲ್ಲಿ ಅವಾಂತರ ಸೃಷ್ಟಿಸಿದೆ.

ನಗರದ ಹೆಗ್ಗುರುತಾಗಿರುವ ಪುರ ಭವನ ಮತ್ತು ರವೀಂದ್ರ ಕಲಾ ಕ್ಷೇತ್ರದ ನಡುವೆ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು ಗುಂಡಿ ಕಾಣಿಸಿಕೊಂಡಿದೆ. ಮುಂಜಾನೆ ಇದರಿಂದಾಗಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.

ಈ ಗುಂಡಿಯು ಹೇಗೆ ಉಂಟಾಯಿತು ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು. ಇದು ಮೊದಲು 11 ಗಂಟೆ ಸುಮಾರಿಗೆ ಕಾಣಿಸಿಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ವರದಿಯಾಗಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತಗಳಾಗದಂತೆ ತಾತ್ಕಾಲಿಕ ತಡೆ ನಿರ್ಮಿಸಿ, ನಂತರ ಅಧಿಕಾರಿಗಳು ಹಳ್ಳ ಉಂಟಾದ ಮೂಲವನ್ನು ತಿಳಿಯಲು ಗುಂಡಿಯನ್ನು ಅಗೆದು ನೋಡದರೂ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ.

bengaluru bengaluru

Also Read: 8-foot sinkhole sends traffic for a toss near Bengaluru’s Town Hall

ತಜ್ಞರು ಹೇಳುವಂತೆ, ಬಿಬಿಎಂಪಿಯ ಅಥವಾ ಮೆಟ್ರೊ ಕಾಮಗಾರಿಗಳು ಈ ರಸ್ತೆಯ ಸುತ್ತಲೂ ನಡೆಯುತ್ತಿಲ್ಲ, ಆದರೂ ಹಳ್ಳ ಕಾಣಿಸಿಕೊಂಡಿದೆ, ಸಾಮಾನ್ಯವಾಗಿ, ಯಾವುದಾದರೂ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆ ಅಗೆದಿದ್ದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಸಿವಿಲ್ ಕೆಲಸವನ್ನು ಕಾರ್ಯಗತಗೊಳಿಸಲಾಗಿಲ್ಲ ಎಂದು ಅವರು ಹೇಳಿದರು.

TheBengaluruLive ಜೊತೆ ಮಾತನಾಡಿದ ದಕ್ಷಿಣ ವಲಯ ಜಂಟಿ ಆಯುಕ್ತರಾದ ಜಗದೀಶ್ ನಾಯ್ಕ್ರವರು, “ನಾನು ಎಂಜಿನಿಯರ್‌ಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ, ನಮಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ, ಅದು ಹಳೆಯ ಬಾವಿಯಾಗಿರಬಹುದು, ಅದು ದಾರಿ ಕಂಡುಕೊಳ್ಳಬಹುದು. ನಾವು ಬಿಡಬ್ಲ್ಯುಎಸ್‌ಎಸ್‌ಬಿ ತಂಡವನ್ನು ಭೇಟಿ ಮಾಡಲು ಕೇಳಿದ್ದೇವೆ. ಅವರು ಸಹ ನೀರಿನ ಸೋರಿಕೆ ಇಲ್ಲ ಮತ್ತು ಗುಂಡಿ ಬಿದ್ದಿರುವ ಸ್ಥಳದ ಪಕ್ಕದಲ್ಲಿ ನೀರಿನ ಪೈಪ್‌ಲೈನ್ ಇಲ್ಲ ಎಂದು ಖಚಿತಪಡಿಸಿದ್ದಾರೆ. ಈಗ ನಾವು ಭೂಕುಸಿತದಿಂದ ಗುಂಡಿ ನಿರ್ಮಾಣಗೊಂಡಿರುವ ಭಾಗವನ್ನು ವೆಟ್‌ಮಿಕ್ಸ್‌ ನಿಂದ ತುಂಬಿಸಿ ಸಂಚಾರವನ್ನು ಸಾಮಾನ್ಯಗೊಳಿಸಲಾಗಿದೆ” ಎಂದು ಹೇಳಿದರು.


bengaluru

LEAVE A REPLY

Please enter your comment!
Please enter your name here