Home ಬೆಂಗಳೂರು ನಗರ ಗತಿಶಕ್ತಿ ಕಾರ್ಯಕ್ರಮದ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಶಕೆ

ಗತಿಶಕ್ತಿ ಕಾರ್ಯಕ್ರಮದ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಶಕೆ

48
0
A new era in the country's infrastructure development through the Gati Shakti Program

ಬೆಂಗಳೂರು:

ಗತಿಶಕ್ತಿ ಕಾರ್ಯಕ್ರಮದ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಶಕೆಯ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಪಿಎಂ ಗತಿ ಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ಗತಿ ಶಕ್ತಿ ಯೋಜನೆ ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದ ರೂಪಿತವಾದ ಕಾರ್ಯಕ್ರಮ. ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡುವ, ಒಂದೇ ಗುರಿಯತ್ತ ಸಾಗಲು, ದೇಶ ಕಟ್ಟುವ ಕಾಯಕಕ್ಕೆ ಅನುಕೂಲವಾಗುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಹಾಗೂ ಕೊರತೆಗಳನ್ನು ನೀಗಿಸಲು ಇರುವ ಸಾಧನ. ಈ ಬಹುಉದ್ದೇಶಗಳನ್ನು ಹೊಂದಿರುವ ಗತಿ ಶಕ್ತಿ ಯೋಜನೆ , ನಮ್ಮ ಪ್ರಧಾನ ಮಂತ್ರಿಗಳ ಕನಸಿನ ಕೂಸು. ಪ್ರಧಾನಮಂತ್ರಿ ಹಾಗೂ ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿರುವ ಅವರ ಅನುಭವವು ಭಾರತ ಸರ್ಕಾರ ಹಾಗೂ ರಾಜ್ಯಗಳ ಬೃಹತ್ ಯೋಜನೆಗಳನ್ನು ಸಾಧಿಸಲು ಸಮನ್ವಯ ಹಾಗೂ ಸಹಕಾರ ನೀಡಲು ಸೂಕ್ತ ಸಮಯ ಇದಾಗಿದೆ ಎನ್ನುವುದನ್ನು ನಿರೂಪಿಸಿದೆ ಎಂದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಒಕ್ಕೂಟದ ಸಹಕಾರವನ್ನು ಉದಾಹರಣೆಯಾಗಿ ತೋರಬಹುದಾಗಿದೆ. ಏಕೆಂದರೆ ಬಹುತೇಕ ಮೂಲಸೌಕರ್ಯ ರಾಜ್ಯ ಗಳ ಮೂಲಕವೇ ಹಾದುಹೋಗುತ್ತದೆ ಹಾಗೂ ಅವರ ಸಹಕಾರದಿಂದಲೇ ಅನುಷ್ಠಾನಕ್ಕೆ ತರಬೇಕಿದೆ. ಭಾರತ ಸರ್ಕಾರದ ದೂರದೃಷ್ಟಿ ಮತ್ತು ಸಹಕಾರದಿಂದ ಎನ್.ಎಂ.ಪಿ ಮತ್ತು ಡಿಜಿಟಲ್ ಶಿಷ್ಟಾಚಾರದ ವ್ಯಾಪ್ತಿ ಯೊಳಗೆ ತರುವ ಯೋಜನೆಗಳು ರಾಷ್ಟ್ರ ದಶಕಗಳಿಂದ ಬೇಡಿಕೆಯಲ್ಲಿದ್ದ ಕಾರ್ಯಕ್ರಮಗಳಾಗಿವೆ ಎಂದರು.

Also Read: Time has come to revisit Inter-state River Water Disputes Act: Karnataka CM

ರಸ್ತೆ ಸಾರಿಗೆಯಲ್ಲಿ ಗತಿ ಮತ್ತು ಶಕ್ತಿ ಎರಡನ್ನೂ ಸಾಧಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವರು, ರಾಷ್ಟ್ರೀಯ ಹೆದ್ದಾರಿಗಳನ್ನು ಕಳೆದ 7 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿಸಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ ಕೇವಲ ರಸ್ತೆ ಸಾರಿಗೆ ಮತ್ತು ಲಾಜಿಸ್ಟಿಕ್ಗಳಿಗೆ ಮಾತ್ರ ಸೀಮಿತವಾಗಿರದೆ, ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧ್ಯವಾಗಿಸಬಲ್ಲದು ಎಂದು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಎಲ್ಲ ಸಕಾರಾತ್ಮಕ ಆಲೋಚನೆಗಳ ಹಿನ್ನೆಲೆಯಲ್ಲಿ ಅನುಷ್ಠಾನ ಮಾಡಲು ಇದು ಸಕಾಲ. ಕ್ರಮ ಕೈಗೊಳ್ಳವುದರಿಂದ ನಾವು ಫಲಿತಾಂಶವನ್ನು ಕಾಣಬಹುದು. ಹಾಗಾಗಿಯೇ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸಭೆ ಸೇರಲು ವೇದಿಕೆಯೊಂದರ ಅಗತ್ಯವಿದೆ ಎಂದರು. ನಾವು ಪರಿಹಾರದ ಭಾಗವಾಗಿ, ಮುಂದೆ ಸಾಗಲು ಗತಿಶಕ್ತಿ ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿರುವ ರಾಜ್ಯ. ಐತಿಹಾಸಿಕವಾಗಿ ರಾಜ್ಯ ಮೊದಲಿನಿಂದಲೂ ಸಾರ್ವಜನಿಕ ವಲಯದ ಕೈಗಾರಿಕೆ ಗಳನ್ನು ಹೊಂದಿದ್ದು, ಭಾರತ ಸರ್ಕಾರ ಹಾಗೂ ಅಂತರ ರಾಜ್ಯ ಸಹಕಾರದಲ್ಲಿ ಕರ್ನಾಟಕ ಸದಾ ಸಮನ್ವಯ ಸಾಧಿಸಿದೆ ಎಂದರು.

o ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಯನ್ನು ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ. ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಅಂಶಗಳೂ ರಾಜ್ಯದಲ್ಲಿದ್ದು, ರಸ್ತೆ, ರೈಲ್ವೆ, ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 5 ವಿಮಾನ ನಿಲ್ದಾಣಗಳು, ಒಳನಾಡು ಜಲಸಾರಿಗೆ, ಕೆ- ರೈಡ್ ಮುಂತಾದ ವುಗಳನ್ನು ಹೊಂದಿದೆ. ರೈಲು ಉತ್ಪಾದನೆಯಯಲ್ಲಿ 50-50 ಪಾಲುದಾರಿಕೆಯನ್ನು ಹೊಂದಿದ ಮೊದಲ ರಾಜ್ಯ ಎಂದರು.

o ಕೇಂದ್ರ ಸರ್ಕಾರದ ಮಟ್ಟದಲ್ಲಿ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಗಮನ ಸೆಳೆದ ಮುಖ್ಯಮಂತ್ರಿಗಳು,ಪರಿಸರ ಹಾಗೂ ಅರಣ್ಯ ಇಲಾಖೆ ಅನುಮೋದನೆಗಳು, ಆರ್ಥಿಕ ವಲಯದಲ್ಲಿ ಕೆಲವು ಕಾನೂನುಗಳನ್ನು ಸರಳೀಕರಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯ ಎಂದರು. ಅಂತರ ರಾಜ್ಯ ಜಲ ವಿವಾದಗಳಿಂದ ನೀರಾವರಿ ಯೋಜನೆಗಳಲ್ಲಿ ವಿಳಂಬವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮಧ್ಯಸ್ಥಿಕೆಗಳ ಅಗತ್ಯವೂ ಇದ್ದು, ಇವುಗಳ ಬಗ್ಗೆ ಮತ್ತೊಮ್ಮೆ ಗಮನಹರಿಸಬೇಕು ಎಂದರು.

o ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಹಾಗೂ ಬಂಡವಾಳ ಮೂಲಕ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದ್ದು, ಈ ಯೋಜನೆಗಳ ಶೀಘ್ರವಾಗಿ ಪೂರ್ಣಗೊಳಿಸಬೇಕಿದೆ. ಬೆಂಗಳೂರು-ಮೈಸೂರು-ಹೈದ್ರಾಬಾದ ಗೆ ಹೈ ಸ್ಪೀಡ್ ರೈಲು ಪ್ರಮುಖ ಯೋಜನೆಯಾಗಿದೆ. 453 ಕಿಮೀ.ಉದ್ದದ ಈ ಯೋಜನೆ ಯನ್ನು ಮೇಲ್ದರ್ಜೆ ಗೇರಿಸುವುದರಿಂದ ಎರಡೂ ರಾಜ್ಯಗಳ ನಡುವಿನ ಆರ್ಥಿಕ ಅಭಿವೃದ್ಧಿ ಗೆ ಸಹಕಾರಿಯಾಗಲಿದೆ.

o ಕರ್ನಾಟಕ ರಾಜ್ಯದಲ್ಲಿ 330 ಕಿಲೋಮೀಟರ್ ಕರಾವಳಿ ಇದೆ. ಅಲ್ಲಿ ಬಂದರುಗಳ ನಿರ್ಮಾಣ, ವಾಣಿಜ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದಕ್ಕಾಗಿ ಈಗಿರುವ crz ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆ. ಇಡೀ ದೇಶಕ್ಕೆ ಒಂದೇ crz ಕಾನೂನು ತರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದರು.

o ಕರ್ನಾಟಕದ ಅಭಿವೃದ್ಧಿಯಲ್ಲಿ ರಸ್ತೆ, ರೈಲು ಸಂಪರ್ಕ, ವಿಮಾನ ನಿಲ್ದಾಣ ಮತ್ತು ಬಂದರು ಮುಂತಾದ ಮೂಲಭೂತ ಸೌಕರ್ಯಗಳು ಪ್ರಮುಖ ಪಾತ್ರವಹಿಸುತ್ತದೆ.

· ಬೆಂಗಳೂರು ಉಪನಗರ ಹಾಗೂ ತುಮಕೂರು ಚಿತ್ರದುರ್ಗ ದಾವಣಗೆರೆ ರೈಲ್ವೆ ಸಂಪರ್ಕಕ್ಕಾಗಿ ಕೇರೈಡ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ

· ಬೆಂಗಳೂರು-ಚೆನ್ನೈ ಬೆಂಗಳೂರು-ಹೈದರಾಬಾದ್, ಬೆಂಗಳೂರು – ಮುಂಬೈ ನಡುವೆ ಮೇಗಾ ಮೂಲ ಸೌಕರ್ಯ ಕೈಗಾರಿಕೆ ಕಾರಿಡಾರ್ ಯೋಜನೆಗಳನ್ನು ಸ್ಥಾಪಿಸಲು 11 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

· ರಾಜ್ಯದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್, ಕೃಷಿ -ತೋಟಗಾರಿಕೆ ಕ್ಲಸ್ಟರ್ ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಹಲವು ಯೋಜನೆಗಳ ಜಾರಿಗೆ ಕ್ರಮವಹಿಸಲಾಗಿದೆ.

· 2274 km ರಾಜ್ಯ ಹೆದ್ದಾರಿ ಹಾಗೂ 3611 km ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

· ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ 1100 km ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.

· ದಕ್ಷಿಣ ಭಾರತದ ಮೆಟ್ರೋ ನಗರಗಳ‌ನಡುವೆ ಹೈ ಸ್ಪೀಡ್ ರೈಲು ಲೈನ್ ನಿರ್ಮಾಣಕ್ಕೆ ಇಂಡಿಯನ್ ರೈಲ್ವೆ ಉದ್ದೇಶಿಸಿದೆ.

· ಚೆನೈ- ಬೆಂಗಳೂರು – ಮೈಸೂರು, ಹೈದರಾಬಾದ್ – ಬೆಂಗಳೂರು ಮಧ್ಯೆ

· ಉಡಾನ್ ಯೋಜನೆಯಡಿ ಶಿವಮೊಗ್ಗ, ಬಳ್ಳಾರಿ, ವಿಜಯಪುರ, ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.

· ಹೆಲಿ ಟೂರಿಸಂ ಗಾಗಿ ಚಿಕ್ಕಮಗಳೂರು, ಮಡಿಕೇರಿ, ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

· ಪಿಪಿಪಿ ಮಾದರಿಯಲ್ಲಿ ಬೆಲೆಕೆರೆಯಲ್ಲಿ ಎರಡು ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ಕ್ರಮ.

· ಸಾಗರಮಾಲಾ ಯೋಜನೆಯಡಿ ಪವಿನಕುರ್ವೆ, ಕಾರವಾರ ಮತ್ತು ಹಳೆ ಮಂಗಳೂರು ಪೋರ್ಟ್ ಗಳ ಆಧುನಿಕರಣ ಯೋಜನೆ ಸಿದ್ಧ ಗೊಂಡಿದೆ.

· ರಾಜ್ಯದ ೨೮ ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ಯಾಸ್ ಗ್ರಿಡ್ ಯೋಜನೆಯಡಿ ೧೨೦೪ ಕಿ ಮೀ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುವುದು

ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ತೀವ್ರಗತಿಯಲ್ಲಿ ಅನುಮೋದನೆ ಹಾಗೂ ಚಾಲನೆ ಕೊಡಲು ಮತ್ತು ಎಲ್ಲ ರೀತಿಯ ನೆರವನ್ನು ನೀಡುವಂತೆ ಮುಖ್ಯಮಂತ್ರಿಗಳು ಕೋರಿದರು.

ಕರ್ನಾಟಕ ರಾಜ್ಯ ಈ ಗತಿಶಕ್ತಿಯ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿದ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here