Home ಬೆಂಗಳೂರು ನಗರ ವಿಸ್ಟ್ರನ್‌ ಘಟನೆ ಮರುಕಳಿಸದಂತೆ ಬಿಗಿ ಕ್ರಮ: ಜಗದೀಶ್‌ ಶೆಟ್ಟರ್‌

ವಿಸ್ಟ್ರನ್‌ ಘಟನೆ ಮರುಕಳಿಸದಂತೆ ಬಿಗಿ ಕ್ರಮ: ಜಗದೀಶ್‌ ಶೆಟ್ಟರ್‌

32
0
Advertisement
bengaluru

ಬೆಂಗಳೂರು:

ಕೋಲಾರ ಜಿಲ್ಲೆಯ ವಿಸ್ಟ್ರನ್‌ ಕಂಪನಿಯಲ್ಲಿ ಆಗಿರುವ ಅಹಿತಕರ ಘಟನೆಯು ಮರುಕಳಿಸದಂತೆ ರಾಜ್ಯ ಸರಕಾರದಿಂದ ಬಿಗಿ ಕ್ರಮ ಕೈಗೊಳ್ಳುವುದಷ್ಟೇ ಅಲ್ಲದೆ, ಕಂಪನಿಗೆ ಅಗತ್ಯವಿರುವ ರಕ್ಷಣೆ ನೀಡಲು ರಾಜ್ಯ ಸರಕಾರ ಸಿದ್ದವಿದೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ರಾಜ್ಯ ಶಾಂತಿಪ್ರಿಯ ರಾಜ್ಯ, ಈ ಹಿನ್ನಲೆಯಿಂದಲೇ ವಿದೇಶಿ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದು ಸ್ನೇಹಕರ ವಾತಾವರಣದಲ್ಲಿ ವ್ಯವಹಾರ ಮಾಡುತ್ತಿವೆ. ಫಾರ್ಚೂನ್‌ 500 ಕಂಪನಿಗಳಲ್ಲಿ 400 ಕಂಪನಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಂಪನಿಗಳು ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಆರ್ಥಿಕ ಹಾಗೂ ಕೈಗಾರಿಕಾ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿವೆ. ಇದು ನಮ್ಮ ರಾಜ್ಯ ಸರಕಾರದ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜನಸ್ನೇಹಿ ಅಂಶಗಳ ಪ್ರತಿಬಿಂಬವಾಗಿದೆ ಎಂದಿದ್ದಾರೆ.

workers turned into violence at Wistron Company

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ರೀತಿಯ ಅಹಿತಕರ ಘಟನೆ ಆಗಿರುವುದು ವಿಷಾಧನೀಯ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡಾ ಕಾನೂನಿನ ವಿರುದ್ದವಾಗಿ ಹೋಗುವುದು ಸರಿಯಲ್ಲ. ರಾಜ್ಯ ಸರಕಾರ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಕಾರ್ಮಿಕರ ಹಕ್ಕುಗಳ ರಕ್ಷಣೆಗೂ ಬದ್ದವಾಗಿದೆ. ತಮಗೆ ಆಗಿರುವ ತೊಂದರೆಯನ್ನು ಕಾನೂನಿನ ಅಡಿಯಲ್ಲಿ ಸಮರ್ಪಕವಾಗಿ ತಿಳಿಸಿದ್ದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿತ್ತು ಎಂದಿದ್ದಾರೆ.

bengaluru bengaluru

ರಾಜ್ಯದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಿಗೆ ಸೂಕ್ತ ರಕ್ಷಣೆ ಕೊಡಲು ಸಿದ್ದವಿದೆ. ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನಾವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈಗಾಗಲೇ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ರಕ್ಷಣೆ ನೀಡಲು ಸೂಚನೆ ನೀಡಿದ್ದೇವೆ. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಯಾರೇ ಆಗಿದ್ದರೂ ಕೂಡಾ ನಿರ್ದಾಕ್ಷೀಣ್ಯವಾಗಿ ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳಿದೆ ಎಂದು ಹೇಳೀದ್ದಾರೆ.

ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಮುಷ್ಕರ; ವಾಹನಗಳಿಗೆ ಬೆಂಕಿ, ಲಾಠಿಪ್ರಹಾರ https://kannada.thebengalurulive.com/workers-turned-into-violence-at-wistron-company/


bengaluru

LEAVE A REPLY

Please enter your comment!
Please enter your name here