Ambulance caught fire in the middle of the road | ನಡು ರಸ್ತೆಯಲ್ಲಿ ಹೊತ್ತಿ ಉರಿದ ಆ್ಯಂಬುಲೆನ್ಸ್
ಬೆಂಗಳೂರು:
ಮಧ್ಯರಾತ್ರಿ ನಡು ರಸ್ತೆಯಲ್ಲಿ ಆಂಬುಲೆನ್ಸ್ ಹೊತ್ತಿ ಉರಿದ ಘಟನೆ ನಗರದ ಸೌಥ್ ಅಂಡ್ ಸರ್ಕಲ್ ಬಳಿ ಜರುಗಿದೆ.
ಶಾರ್ಟ್ ಸೆಕ್ಯೂರ್ಟ್ ಅಥವಾ ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಒಂದು ಅಗ್ನಿಶಾಮಕ ವಾಹನ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ.
ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಆಂಬುಲೆನ್ಸ್ ಚಾಲಕ ಅಂಬರೀಶ್ ಮಾತನಾಡಿ, ಜಯನಗರದಿಂದ ಬ್ಲಡ್ ಟೆಸ್ಟ್ ಸ್ಯಾಂಪಲ್ ಪಡೆಯೋಕೆ ಹೋಗ್ತಿದ್ದೆ. ಇದೇ ವೇಳೆ ಇದ್ದಕ್ಕಿದ್ದಂತೆ ಗಾಡಿ ಆಫ್ ಆಯ್ತು, ಗೇರ್ ವರ್ಕ್ ಆಗಿಲ್ಲ. ಸ್ಟೇರಿಂಗ್ ಕೂಡಾ ಜಾಮ್ ಆಯ್ತು.
ಬೆಂಕಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.
