Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಅಪರಾಧ
  • Bangalore CCB raid: ಬೆಂಗಳೂರು ಸಿಸಿಬಿ ದಾಳಿ: 2 ವಿದೇಶಿ ಪ್ರಜೆ ಸೇರಿ 7 ಮಂದಿಗೆ ಬಂಧನ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ
  • ಅಪರಾಧ
  • ಬೆಂಗಳೂರು ನಗರ

Bangalore CCB raid: ಬೆಂಗಳೂರು ಸಿಸಿಬಿ ದಾಳಿ: 2 ವಿದೇಶಿ ಪ್ರಜೆ ಸೇರಿ 7 ಮಂದಿಗೆ ಬಂಧನ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ

Bangalore CCB raid: 7 people including 2 foreign nationals arrested, drugs worth ₹9.93 crore seized
The Bengaluru Live September 29, 2025 7:00 PM 1 minute read
Bangalore CCB raid: ಬೆಂಗಳೂರು ಸಿಸಿಬಿ ದಾಳಿ: 2 ವಿದೇಶಿ ಪ್ರಜೆ ಸೇರಿ 7 ಮಂದಿಗೆ ಬಂಧನ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ

Bangalore CCB raid: ಬೆಂಗಳೂರು ಸಿಸಿಬಿ ದಾಳಿ: 2 ವಿದೇಶಿ ಪ್ರಜೆ ಸೇರಿ 7 ಮಂದಿಗೆ ಬಂಧನ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಭಾರೀ ದಾಳಿ ನಡೆಸಿ, 2 ವಿದೇಶಿ ಪ್ರಜೆ ಸೇರಿ 7 ಮಂದಿಯನ್ನು ಬಂಧಿಸಿ ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬಂಧಿತರಿಂದ ಒಟ್ಟು 3.858 ಕೆ.ಜಿ. ಎಂಡಿಎಂಎ ಕ್ರಿಸ್ಟಲ್, 41 ಗ್ರಾಂ ಎಕ್ಸ್ಟಸಿ ಮಾತ್ರೆಗಳು, 1.082 ಕೆ.ಜಿ. ಹೈಡ್ರೋ ಗಾಂಜಾ, 6 ಕೆ.ಜಿ. ಗಾಂಜಾ ಹಾಗೂ ಅಪರಾಧಕ್ಕೆ ಬಳಸಿದ 1 ಕಾರು ಮತ್ತು 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಸಾಫ್ಟ್‌ವೇರ್ ಇಂಜಿನಿಯರ್ ಕೆವಿನ್ ರೋಜರ್ ಅವರನ್ನು ಸಿಸಿಬಿ ಬಂಧಿಸಿದ್ದು, ಕೇರಳದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾ ತಂದು, ಬೆಂಗಳೂರಿನ ಪರಿಚಿತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ 500 ಗ್ರಾಂ ಹೈಡ್ರೋ ಗಾಂಜಾ, 1 ಕಾರು, 1 ಬೈಕ್ ಮತ್ತು 1 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಆಡುಗೋಡಿ ಪೊಲೀಸರು ದಂತವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರಂಜಿತ್ ಆ್ಯಂಟೋನಿ ಅವರನ್ನು ಬಂಧಿಸಿದ್ದಾರೆ. ಅವರು ಸಹ ಮೋಜು-ಮಸ್ತಿಗಾಗಿ ಹಾಗೂ ಹೆಚ್ಚಿನ ಹಣಕ್ಕಾಗಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆತನಿಂದ 300 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ, ಕೆ.ಜಿ.ನಗರ ಠಾಣೆ ಪೊಲೀಸರು ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್‌ನಲ್ಲಿ ₹1 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 1.022 ಕೆ.ಜಿ. ಹೈಡ್ರೋ ಗಾಂಜಾ ಮತ್ತು ಇತರ ವಸ್ತುಗಳು ಸೇರಿದ್ದು, ಪಾರ್ಸೆಲ್ ಬುಕ್ ಮಾಡಿದ್ದ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹೆಬ್ಬಗೋಡಿ ಪೊಲೀಸರು ನೈಜೀರಿಯಾ ಮೂಲದ ಎನ್‌ಗ್ವು ಕಿಂಗ್ಸ್‌ಲೆ ಮತ್ತು ಥಾಮಸ್ ನವೀದ್ ಚಿಮೆ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರು ದೆಹಲಿಯಲ್ಲಿ ನೆಲೆಸಿರುವ ಇತರ ವಿದೇಶಿ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲಿ ಒಬ್ಬ ಆರೋಪಿಯ ವಿರುದ್ಧ ಗುಜರಾತ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Also Read: Bengaluru CCB Busts Major Drug Racket: 7 Arrested Including 2 Foreign Nationals, Narcotics Worth ₹9.93 Crore Seized

ಒಟ್ಟಾರೆಯಾಗಿ, 7 ಮಂದಿಯನ್ನು (2 ವಿದೇಶಿ ಪ್ರಜೆ ಸೇರಿ) ಬಂಧಿಸಿ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

About the Author

The Bengaluru Live

Author

View All Posts

Post navigation

Previous: Karnataka government launches Unified Land Acquisition System: ಭೂಸ್ವಾಧೀನದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ: ಕರ್ನಾಟಕ ಸರ್ಕಾರದಿಂದ ಏಕೀಕೃತ ಭೂಸ್ವಾಧೀನ ವ್ಯವಸ್ಥೆ (ULMS) ಆರಂಭ
Next: Use Cauvery water sparingly in cleaning activities during Ayudha Puja: ಆಯುಧ ಪೂಜಾದ ಸ್ವಚ್ಛತಾ ಕಾರ್ಯಗಳಲ್ಲಿ ಕಾವೇರಿ ನೀರನ್ನು ಮಿತವಾಗಿಯೇ ಬಳಸಿ: ಬಡಾವಣೆ ಬೋರ್ಡ್ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್

Related Stories

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

The Bengaluru Live November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

The Bengaluru Live November 15, 2026 12:31 PM
ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM

Latest Post

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

November 15, 2026 12:31 PM
ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

November 15, 2026 10:00 AM
ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

November 15, 2026 10:00 AM
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ ಮೈಸೂರು ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡಿಕೆ
  • ಕರ್ನಾಟಕ

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ

November 15, 2026 10:00 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ವಿಜಯಪುರ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 14, 2026 10:47 PM

ನೀವು ತಪ್ಪಿಸಿಕೊಂಡಿರಬಹುದು

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

The Bengaluru Live November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

The Bengaluru Live November 15, 2026 12:31 PM
ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

The Bengaluru Live November 15, 2026 10:00 AM
ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು
  • ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ
  • ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ
  • ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ
©Copyright 2025 The Bengaluru Live All rights reserved. | MoreNews by AF themes.