Home ಬೆಂಗಳೂರು ನಗರ ಬೆಂಗಳೂರು: ಮರುಜೀವ ಪಡೆದುಕೊಂಡ ನಾಯಂಡಹಳ್ಳಿ ಕೆರೆ

ಬೆಂಗಳೂರು: ಮರುಜೀವ ಪಡೆದುಕೊಂಡ ನಾಯಂಡಹಳ್ಳಿ ಕೆರೆ

78
0
Bangalore Nayandahalli lake revived
Advertisement
bengaluru

ಬೆಂಗಳೂರು:

15 ಎಕರೆ ವಿಸ್ತೀರ್ಣದಲ್ಲಿರುವ ನಾಯಂಡಹಳ್ಳಿ‌ ಕೆರೆ ಪುನಶ್ಚೇತನ ನೀಡುವ ಉದ್ದೇಶದಿಂದ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡುವ ಯೋಜನೆಗೆ ಗುರುವಾರ ದೊರೆತಿದ್ದು, ಇದರಿಂದ ನಾಯಂಡಹಳ್ಳಿ ಕೆರೆ ಮರುಜೀವ ನೀಡಿದಂತಾಗಿದೆ.

ಕೆರೆ ಮರುಜೀವ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಂತರಪಾಳ್ಯ, ನಾಯಂಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ನೀರಿನ ಸಮಸ್ಯೆ ದೂರಾದಂತಾಗುತ್ತದೆ. ಕೆರೆ ಪುನಶ್ಚೇತನದಿಂದ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುವ ನಿರೀಕ್ಷೆಗಳಿದ್ದು, ಈ ಪ್ರದೇಶದಲ್ಲಿ ಪ್ರತ್ಯೇಕ ಬೋರ್‌ವೆಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಧನಸಹಾಯ ಮಾಡಿದ್ದೇ ಆದರೆ, ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕಾರ್ಯಗತಗೊಳಿಸಲಿದೆ.

bengaluru bengaluru

ಗುರುವಾರ ಬೆಳಗ್ಗೆ ಸ್ಥಳೀಯ ಶಾಸಕರೂ ಆದ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಬಿಡಬ್ಲ್ಯೂಎಸ್‌ಎಸ್‌ಬಿ ತ್ಯಾಜ್ಯ ನೀರು ನಿರ್ವಹಣೆಯ ಮುಖ್ಯ ಇಂಜಿನಿಯರ್ ಎಂ ದೇವರಾಜು ಅವರು ಮಾತನಾಡಿ, ವೃಷಭಾವತಿ ಕಣಿವೆಯ ತ್ಯಾಜ್ಯ ನೀರನ್ನು ದಿನಕ್ಕೆ 60 ಮಿಲಿಯನ್ ಲೀಟರ್ (ಎಂಎಲ್‌ಡಿ) ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸುತ್ತೇವೆ. ಕಾರ್ಯ ನಿರ್ವಹಣೆಗೆ ಬಿಬಿಎಂಪಿ ರೂ.2.52 ಕೋಟಿ ನೀಡಿದೆ. ಇದು ಐದು ವರ್ಷಗಳ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಕೆಲಸವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆರೆಯು ಒಟ್ಟು 120 ಮಿಲಿಯನ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಎಸ್’ಟಿಪಿ ಗರಿಷ್ಠ ಪ್ರಮಾಣದ ನೀರನ್ನು ಇಲ್ಲಿಗೆ ಸರಬರಾಜು ಮಾಡುವುದನ್ನು ಖಚಿತಪಡಿಸುತ್ತದೆ. ಆವಿಯಾಗುವಿಕೆ ಅಥವಾ ಇತರ ಕಾರಣಗಳಿಂದ ನೀರು ಖಾಲಿಯಾದಾಗ, ಅದನ್ನು ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಬಳಸಿ ತುಂಬಿಸಲಾಗುತ್ತದೆ ಎಂದು ತಿಳಿಸಿದರು.

ಬಿಬಿಎಂಪಿಯ ಕೆರೆಗಳ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ಮಾತನಾಡಿ, ‘ಕೆರೆಯ ಪಕ್ಕದಲ್ಲೇ ಮಳೆನೀರು ಚರಂಡಿಯಿಂದ್ದು, ಈ ನೀರು ಕೆರೆದೆ ಸೇರುತ್ತಿದೆ. ಕೂಡಲೇ ಅದನ್ನು ನಿಲ್ಲಿಸುವ ಕೆಲಸಗಳನ್ನು ಮಾಡಲಾಗುತ್ತದೆ. ಕೆರೆಗೆ ಸಂಸ್ಕರಿಸಿದ ನೀರನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಕೆರೆಯನ್ನು ಪುನರುಜ್ಜೀವನಗೊಳಿಸಿದಾಗ ಇಡೀ ಪರಿಸರ ವ್ಯವಸ್ಥೆಗೆ ಪ್ರಯೋಜನವಾಗುತ್ತದೆ ಎಂದರು.


bengaluru

LEAVE A REPLY

Please enter your comment!
Please enter your name here