ಕಾಡುಗೋಡಿಯಲ್ಲಿ ರಸ್ತೆ ಬದಿಗೆ ತ್ಯಾಜ್ಯ ಸುರಿದ ಬಿರಿಯಾನಿ ಅಂಗಡಿಗೆ ₹5,000 ದಂಡ
ಬೆಂಗಳೂರು: ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಬದಿಯಲ್ಲಿ ಕಸ ಸುರಿದ ಆರೋಪದ ಮೇಲೆ ಕಾಡುಗೋಡಿಯ ದೇವರಾಜ್ ಬಿರಿಯಾನಿ ಅಂಗಡಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಅಧಿಕಾರಿಗಳು ₹5,000 ದಂಡ ವಿಧಿಸಿದ್ದಾರೆ.
ಕಾಡುಗೋಡಿಯ ವಾರ್ಡ್ ಸಂಖ್ಯೆ 83ರಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ದೂರು ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಬದಿಯಲ್ಲಿ ಕಂಡುಬಂದ ತ್ಯಾಜ್ಯವನ್ನು ಸಂಬಂಧಿಸಿದ ಬಿರಿಯಾನಿ ಅಂಗಡಿಯಿಂದಲೇ ಸುರಿಯಲಾಗಿದೆ ಎಂಬುದು ಪರಿಶೀಲನೆ ವೇಳೆ ದೃಢಪಟ್ಟಿದೆ ಎಂದು ಪಾಲಿಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಅಂಗಡಿ ಮಾಲೀಕರಿಗೆ ₹5,000 ದಂಡ ವಿಧಿಸಲಾಗಿದೆ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಲಾಗಿದೆ.
