ಬೆಂಗಳೂರು: ಪೀಣ್ಯದಲ್ಲಿರುವ ಭಾರತಿ ಚಿತ್ರಮಂದಿರದಲ್ಲಿ ಗುರುವಾರ ಮಳೆಯ ನಡುವೆ ಸಿನಿಮಾ ಪ್ರದರ್ಶನ ನಡೆಯುತ್ತಿದ್ದಾಗ ಮೇಲ್ಛಾವಣಿಯ ಒಂದು ಭಾಗ ಕುಸಿದಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸಿನಿಮಾ ಹಾಲ್ನೊಳಗೆ ಮೇಲ್ಛಾವಣಿಯ ಭಾಗ ಕುಸಿದ ಬಳಿಕ ಚಿತ್ರಮಂದಿರದ ಸಿಬ್ಬಂದಿ ಪ್ರದರ್ಶನವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದರು.
ಘಟನೆ ಹಾಗೂ ಗಾಯಗೊಂಡವರ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
