ಡಿಆರ್ಯುಸಿಸಿ ಸಭೆಯಲ್ಲಿ ಬೆಂಗಳೂರು ರೈಲ್ವೆ ವಿಭಾಗದ ಸಾಧನೆಗಳ ಪ್ರಸ್ತುತಿ; ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಏರಿಕೆ
ಬೆಂಗಳೂರು, ಮೇ 20: ಬೆಂಗಳೂರು ರೈಲ್ವೆ ವಿಭಾಗದ 2024–2026ನೇ ಅವಧಿಯ ನಾಲ್ಕನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (DRUCC) ಸಭೆ ಬುಧವಾರ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ರೈಲು ನಿಲುಗಡೆ, ರೈಲು ಸೇವೆಗಳ ವಿಸ್ತರಣೆ, ಸ್ವಚ್ಛತೆ, ಆಹಾರ ಪೂರೈಕೆ, ಭದ್ರತೆ ಮತ್ತು ಇತರೆ ಪ್ರಯಾಣಿಕರ ಸೌಲಭ್ಯಗಳ ಕುರಿತು ಸದಸ್ಯರು ಮಹತ್ವದ ಸಲಹೆಗಳನ್ನು ನೀಡಿದರು.
ಸಭೆಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಅಶುತೋಷ್ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರಿಕ್ಷಿತ್ ಮೋಹನ್ಪುರಿಯಾ ಮತ್ತು ಪ್ರವೀಣ್ ಕಟಾರಕಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೆ. ಕೃಷ್ಣ ಚೈತನ್ಯ ಹಾಗೂ ವಿಭಾಗದ ವಿವಿಧ ಶಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 6.05ರಷ್ಟು ಏರಿಕೆ
ಸಭೆಯಲ್ಲಿ ಮಾತನಾಡಿದ DRM ಅಶುತೋಷ್ ಕುಮಾರ್ ಸಿಂಗ್, ಬೆಂಗಳೂರು ರೈಲ್ವೆ ವಿಭಾಗದ ಸಾಧನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
2025–26ನೇ ಹಣಕಾಸು ವರ್ಷದಲ್ಲಿ ಬೆಂಗಳೂರು ವಿಭಾಗವು 109.99 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದ್ದು, ಇದು ಹಿಂದಿನ ವರ್ಷದಿಗಿಂತ ಶೇ. 6.05ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.
ಡಿಜಿಟಲ್ ಟಿಕೆಟ್ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, QR ಕೋಡ್ ಆಧಾರಿತ ಅನರಕ್ಷಿತ ಟಿಕೆಟ್ ಬುಕ್ಕಿಂಗ್ ಪ್ರಮಾಣವು 2024–25ರಲ್ಲಿ ಶೇ. 11.19ರಿಂದ 2025–26ರಲ್ಲಿ ಶೇ. 29.94ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
₹2,428 ಕೋಟಿ ಪ್ರಯಾಣಿಕರ ಆದಾಯ
ಬೆಂಗಳೂರು ರೈಲ್ವೆ ವಿಭಾಗವು ವಿವಿಧ ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ತಮ ಆದಾಯ ಸಾಧಿಸಿದೆ ಎಂದು DRM ತಿಳಿಸಿದರು.
2025–26ರ ಹಣಕಾಸು ವರ್ಷದ ಆದಾಯ ವಿವರಗಳು ಹೀಗಿವೆ:
- ಪ್ರಯಾಣಿಕರ ಆದಾಯ: ₹2,428.60 ಕೋಟಿ
(ಹಿಂದಿನ ವರ್ಷಕ್ಕಿಂತ ಶೇ. 9.41ರಷ್ಟು ಹೆಚ್ಚಳ) - ಸರಕು ಸಾಗಣೆ ಆದಾಯ: ₹351.45 ಕೋಟಿ
(ಶೇ. 7.24ರಷ್ಟು ಹೆಚ್ಚಳ) - ಪಾರ್ಸೆಲ್ ಆದಾಯ: ₹140.32 ಕೋಟಿ
(ಶೇ. 4.56ರಷ್ಟು ಏರಿಕೆ) - ಕ್ಯಾಟರಿಂಗ್ ಆದಾಯ: ₹17.38 ಕೋಟಿ
(ಶೇ. 5.27ರಷ್ಟು ಹೆಚ್ಚಳ) - ಜಾಹೀರಾತು ಆದಾಯ: ₹15.75 ಕೋಟಿ
(ಶೇ. 10.55ರಷ್ಟು ಏರಿಕೆ) - ಟಿಕೆಟ್ ಪರಿಶೀಲನಾ ಆದಾಯ: ₹39.68 ಕೋಟಿ
(ಶೇ. 39.13ರಷ್ಟು ಹೆಚ್ಚಳ)
M-UTS ಸಹಾಯಕರನ್ನು ಆರಂಭಿಸಿದ ಮೊದಲ ವಿಭಾಗ
ಬೆಂಗಳೂರು ವಿಭಾಗವು ಭಾರತೀಯ ರೈಲ್ವೆಯಲ್ಲಿ ಮೊದಲ ಬಾರಿಗೆ M-UTS ಸಹಾಯಕರು ಯೋಜನೆ ಆರಂಭಿಸಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ಮತ್ತು ಪ್ರಯಾಣಿಕರ ಸೌಲಭ್ಯ ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು DRM ಹೇಳಿದರು.
ಸಭೆಯಲ್ಲಿ ಕೆಳಕಂಡ ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತೂ ವಿವರಿಸಲಾಯಿತು:
- nammanakshe.com ಮೂಲಕ ಡಿಜಿಟಲ್ ಸ್ಟೇಷನ್ ಮ್ಯಾಪ್
- ಬೆಂಗಳೂರು ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿ
- ಯಶವಂತಪುರ ರೈಲು ನಿಲ್ದಾಣ ಆಧುನೀಕರಣ
- ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕಾಮಗಾರಿಗಳು
- ರೈಲು ಮಾರ್ಗಗಳ ಡಬ್ಲಿಂಗ್ ಮತ್ತು ಕ್ವಾಡ್ರಪ್ಲಿಂಗ್ ಯೋಜನೆಗಳು
ಸಭೆಯಲ್ಲಿ ಪಾಲ್ಗೊಂಡ ಸದಸ್ಯರು
ಸಭೆಯಲ್ಲಿ ಡಿಆರ್ಯುಸಿಸಿ ಸದಸ್ಯರಾದ: ಜಿ. ವೇಣು, ಟಿ.ಜೆ. ಗಿರೀಶ್, ರಾಮಾವತ್ ಮಿಸ್ರಿಮಲ್, ಕರ್ಣಂ ರಮೇಶ್, ಅಶ್ವಿನ್ ಸೆಮ್ಲಾನಿ, ಸತೀಶ ಎಸ್.ಸಿ., ನಟರಾಜನ್, ಬಿ.ವಿ. ವೆಂಕಟೇಶ್ ಲಾಡ್, ಚಿನ್ನಗುಟ್ಟಪ್ಪ, ಮೊಹಮ್ಮದ್ ಬೇಗ್, ಲಕ್ಷ್ಮೀನಾರಾಯಣ ಹಾಗೂ ವೀರಕ್ಯಾತರಾಯ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಭಾಗವಹಿಸಿದರು.
