Home ಅಪರಾಧ ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ದಂಪತಿಯಿಂದ 1 ಸಾವಿರ ಸುಲಿಗೆ: ಇಬ್ಬರು ಪೇದೆಗಳು ಸೇವೆಯಿಂದಲೇ...

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ದಂಪತಿಯಿಂದ 1 ಸಾವಿರ ಸುಲಿಗೆ: ಇಬ್ಬರು ಪೇದೆಗಳು ಸೇವೆಯಿಂದಲೇ ವಜಾ

42
0
Bengaluru: Extortion of Rs 1,000 by a couple near Manyatha Tech Park: Two constables dismissed from service

ಬೆಂಗಳೂರು:

ಡಿಸೆಂಬರ್ 8ರಂದು ಮಾನ್ಯತಾ ಟೆಕ್ ಪಾರ್ಕ್ ಬಳಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು ಸುಲಿಗೆ ಮಾಡಿದ್ದ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. 

ಈಶಾನ್ಯ ವಿಭಾಗದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಮತ್ತು ಕಾನ್‌ಸ್ಟೆಬಲ್ ನಾಗೇಶ್ ರನ್ನು ವಜಾಗೊಳಿಸಲಾಗಿದೆ. 

ಘಟನೆ ಬೆಳಕಿಗೆ ಬಂದ ತಕ್ಷಣ ಇಲಾಖಾ ವಿಚಾರಣೆಗಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಯುಪಿಐ ಮೂಲಕ ದಂಪತಿಯಿಂದ 1000 ರೂಪಾಯಿ ಸುಲಿಗೆ ಮಾಡಿರುವುದು ಇಲಾಖಾ ವಿಚಾರಣೆಯಲ್ಲಿ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಇಬ್ಬರೂ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಡಿಸಿಪಿ(ಈಶಾನ್ಯ) ಅನೂಪ್ ಎ ಶೆಟ್ಟಿ TNIE ಗೆ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಸಂತ್ರಸ್ತ ಸುಲಿಗೆ ಕುರಿತು ಟ್ವೀಟ್ ಮಾಡಿದ್ದರು. ಇನ್ನು ಇದೀಗ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರು ನಗರ ಪೊಲೀಸರು ತಮ್ಮ ಸಿಬ್ಬಂದಿಯಿಂದ ವಿಕೃತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟ್ ಹ್ಯಾಂಡಲ್ ನಲ್ಲಿ ತಿಳಿಸಿದ್ದು ಈ ಮೂಲಕ ಇತರರಿಗೂ ಕಟು ಎಚ್ಚರಿಕೆ ನೀಡಿದೆ.

ಸಂತ್ರಸ್ತ ಕಾರ್ತಿಕ್ ಪಾತ್ರಿ, ಇಬ್ಬರು ಪೊಲೀಸರು ತಮ್ಮ ಮತ್ತು ಅವರ ಪತ್ನಿಯಿಂದ ಹೇಗೆ ಹಣ ಸುಲಿಗೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ದಂಪತಿಗಳು ಸ್ನೇಹಿತನ ಮನೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಹೊಯ್ಸಳ ಗಸ್ತು ತಿರುಗುವ ವಾಹನದಲ್ಲಿದ್ದ ಪೊಲೀಸರು ಮಧ್ಯರಾತ್ರಿ ರಸ್ತೆಯಲ್ಲಿ ನಡೆದಾಡುವ ಉದ್ದೇಶವನ್ನು ಕೇಳುವ ಮೂಲಕ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು.

ದಂಪತಿಗಳು ತಮ್ಮ ಸಂಬಂಧ, ಕುಟುಂಬದ ವಿವರಗಳು ಮತ್ತು ಅವರು ಎಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಕೇಳಿದ್ದರು ಎಂದು ಆರೋಪಿಸಿದ್ದರು. ರಾತ್ರಿ 11 ಗಂಟೆಯ ನಂತರ ರಸ್ತೆಯಲ್ಲಿ ಓಡಾಡಬಾರದು ಎಂದೆಲ್ಲ ಪೊಲೀಸರು ದಂಪತಿಗೆ ಹೇಳಿದ್ದರು. ಪಾತ್ರಿ ಪತ್ನಿ ಅಳಲು ತೋಡಿಕೊಳ್ಳುತ್ತಿದ್ದಂತೆ ಇಬ್ಬರು ಪೊಲೀಸರು ಆರಂಭದಲ್ಲಿ 3000 ರೂ.ಗೆ ಬೇಡಿಕೆಯಿಟ್ಟರು ಮತ್ತು ನಂತರ 1000 ರೂ.ಗೆ ಒಪ್ಪಿಕೊಂಡಿದ್ದರು.

ಈಗ ಸರ್ಕಾರಿ ಸೇವೆಯಿಂದ ವಜಾಗೊಂಡಿರುವ ಇಬ್ಬರು ಪೊಲೀಸರು ಬೇರೆ ಯಾವುದೇ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಗದ ಕಾರಣ ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವಲ್ಲಿಯೂ ಅವರಿಗೆ ತೊಂದರೆಯಾಗುತ್ತದೆ ಆಗಲಿದೆ.

LEAVE A REPLY

Please enter your comment!
Please enter your name here