Home ರಾಜಕೀಯ ಅಮಿತ್ ಶಾ ಅವರಿಗೆ ಅದ್ದೂರಿ ಸ್ವಾಗತ

ಅಮಿತ್ ಶಾ ಅವರಿಗೆ ಅದ್ದೂರಿ ಸ್ವಾಗತ

67
0

ಬೆಂಗಳೂರು:

ಬೆಂಗಳೂರಿನ ಎಚ್‍ಎಎಲ್ ವಿಮಾನನಿಲ್ದಾಣಕ್ಕೆ ಶನಿವಾರ ಸಂಜೆ ಆಗಮಿಸಿದ ಕೇಂದ್ರ ಗೃಹ ಸಚಿವರು ಮತ್ತು ಭಾರತೀಯ ಜನತಾ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ಶ್ರೀ ಅಮಿತ್ ಶಾ ಅವರನ್ನು ಕಾರ್ಯಕರ್ತರು ಸಂಭ್ರಮೋಲ್ಲಾಸದಿಂದ ಅದ್ದೂರಿಯಾಗಿ ಸ್ವಾಗತಿಸಿದರು.

ಬಿಜೆಪಿ ಬಾವುಟ ಹಿಡಿದಿದ್ದ ಕಾರ್ಯಕರ್ತರು ಭಾರತ್ ಮಾತಾಕಿ ಜೈ, ವಂದೇ ಮಾತರಂ, ಜೈ ಶ್ರೀರಾಮ್, ಬಿಜೆಪಿಗೆ ಜೈ ಎಂದು ಜಯಕಾರದ ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಅಲ್ಲದೆ ಶ್ರೀ ಅಮಿತ್ ಶಾ ಅವರಿಗೆ ಬೃಹತ್ ಹಾರವನ್ನು ಸಮರ್ಪಿಸಲಾಯಿತು.

WhatsApp Image 2021 01 16 at 19.33.05

ರಾಜ್ಯ ಉಸ್ತುವಾರಿಗಳು ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಸಿಂಗ್, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ, ರಾಜ್ಯದ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಅರವಿಂದ ಲಿಂಬಾವಳಿ, ಶ್ರೀ ಭೈರತಿ ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಶ್ರೀ ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥನಾರಾಯಣ್, ಶಾಸಕರಾದ ಶ್ರೀ ರಘು, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್, ಗಣ್ಯರು, ಪದಾಧಿಕಾರಿಗಳು ಇದ್ದರು.

ಬಳಿಕ ವಿಧಾನಸೌಧಕ್ಕೆ ತೆರಳುವ ಮಾರ್ಗದಲ್ಲಿ ಕುಂಬ್ಳೆ ವೃತ್ತದ ವರೆಗೂ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎಂದು ಕೂಗುವ ಮೂಲಕ ಶ್ರೀ ಅಮಿತ್ ಶಾ ಅವರನ್ನು ಸ್ವಾಗತಿಸಿದರು.

BJP workers Bengaluru

LEAVE A REPLY

Please enter your comment!
Please enter your name here