Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಬೆಂಗಳೂರು ನಗರ

ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Vighnesh Pawar July 7, 2023 1:03 PM
Chief Minister Siddaramaiah claims he has fulfilled promises made by party

Chief Minister Siddaramaiah claims he has fulfilled promises made by party

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಯಾವ ಭರವಸೆಗಳನ್ನೂ ಈಡೇರಿಸದ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ: ತಕ್ಕ ಉತ್ತರ ಕೊಡಿ

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸೂಚನೆ ನೀಡಿದ ಸಿಎಂ

ಬೆಂಗಳೂರು:

ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ 45 ದಿನಗಳ ಒಳಗೇ ಜಾರಿ ಮಾಡಿದ್ದೇವೆ. ಇದನ್ನು ಪ್ರತಿಯೊಬ್ಬ ಮತದಾರರಿಗೆ ಅರ್ಥ ಮಾಡಿಸಿ, ವಿಧಾನಸಭೆ ಅಧಿವೇಶನದಲ್ಲಿ ಎದೆ ಎತ್ತಿ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರಿಗೆ ಹುರಿದುಂಬಿಸಿದರು.

ಸಂಪುಟ ಸಭೆಗೂ ಮುನ್ನ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದರು.

ನಾವು 2013 ಚುನಾವಣೆ ವೇಳೆ ನೋಡಿದ್ದ ಭರವಸೆಗಳನ್ನು ಸರ್ಕಾರ ನಡೆಸಿದ ಐದು ವರ್ಷಗಳಲ್ಲಿ ಈಡೇರಿಸಿ “ನುಡಿದಂತೆ ನಡೆದ ಸರ್ಕಾರ” ಎನ್ನುವ ಹೆಗ್ಗಳಿಕೆ ಗಳಿಸಿದ್ದೇವೆ. ಬಿಜೆಪಿ 2018 ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 608 ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಲೇ ಇಲ್ಲ. ಹೀಗಾಗಿ ಬಿಜೆಪಿಗೆ ನಮ್ಮ ಕಡೆ ಬೊಟ್ಟು ಮಾಡುವ ನೈತಿಕತೆಯೇ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಸುಳ್ಳುಗಳಿಗೆ ಅವರು ಜೋತು ಬೀಳುತ್ತಾರೆ. ನೀವು ಸರಿಯಾಗಿ ಖಚಿತವಾದ ಧ್ವನಿಯಲ್ಲಿ ಸತ್ಯವನ್ನು ಮಾತನಾಡಿ ಎಂದು ತಿಳಿಸಿದರು.

WhatsApp Image 2023 07 07 at 12.29.06 PM

2023ರ ಚುನಾವಣೆ ವೇಳೆ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನೂ ನಾವು ಈಡೇರಿಸಲು ಶುರು ಮಾಡಿದ್ದೇವೆ. ಕೋಟಿಗಟ್ಟಲೆ ಕನ್ನಡಿಗರು ಈಗಾಗಲೇ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೂ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕು. ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರು ತಲೆ ಎತ್ತಿ ಹೆಮ್ಮೆ ಪಡುವ ಸಂದರ್ಭವನ್ನು ನಮ್ಮ ಸರ್ಕಾರ ಸೃಷ್ಟಿಸಿದೆ ಎಂದರು.

ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಮತ್ತು ಆಯವ್ಯಯ ಮಂಡಿಸುವುದು ಈ ಬಾರಿ ಸವಾಲಿನದ್ದಾಗಿತ್ತು. ಹೀಗಾಗಿ ನಾನು ಸರಣಿ ಸಭೆಗಳನ್ನು ಅಧಿಕಾರಿಗಳ ಜತೆ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಶಾಸಕರುಗಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಈ ಅಧಿವೇಶನವನ್ನು ಹಳಬರು ಮತ್ತು ನೂತನ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಿಷಯ ತಜ್ಞರಾಗಿ, ಅಧ್ಯಯನಶೀಲರಾಗಿ ಸಕಲ ಸಿದ್ದತೆಗಳೊಂದಿಗೆ ಬಂದು ಬಿಜೆಪಿಯವರ ಸುಳ್ಳುಗಳಿಗೆ, ಜೆಡಿಎಸ್ ನವರ ಡ್ರಾಮಾಗಳಿಗೆ ಅರ್ಥಪೂರ್ಣವಾಗಿ ಉತ್ತರಿಸಿ ಎಂದು ಸಲಹೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾ ಸಚಿವರು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿದ್ದರು.

About the Author

Vighnesh Pawar

Subscriber

View All Posts

Post navigation

Previous: ಪ್ರಜಾಪ್ರಭುತ್ವದ ಕಗ್ಗೊಲೆ, ನ್ಯಾಯಕ್ಕೆ ಜಯ ಸಿಗದಿರುವುದು ದುರದೃಷ್ಟಕರ: ಡಿ ಕೆ ಶಿವಕುಮಾರ್
Next: Karnataka Budet 2023: ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ ಎಂದ ಹೆಚ್.ಡಿ.ಕುಮಾರಸ್ವಾಮಿ

Related Stories

ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM
ಆರ್‌ಎಂವಿ 2ನೇ ಹಂತದಲ್ಲಿ ಸೀಲ್ ಮಾಡಿದ ವಾಣಿಜ್ಯ ಸಂಸ್ಥೆಯ ಗೇಟ್ ಮೇಲೆ ಜಾರಿ ನೋಟಿಸ್
  • ಬೆಂಗಳೂರು ನಗರ

ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್

The Bengaluru Live November 24, 2026 9:08 PM

Latest Post

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

November 24, 2026 10:00 PM
ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

November 24, 2026 9:49 PM
ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

November 24, 2026 9:09 PM
ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್ ಆರ್‌ಎಂವಿ 2ನೇ ಹಂತದಲ್ಲಿ ಸೀಲ್ ಮಾಡಿದ ವಾಣಿಜ್ಯ ಸಂಸ್ಥೆಯ ಗೇಟ್ ಮೇಲೆ ಜಾರಿ ನೋಟಿಸ್
  • ಬೆಂಗಳೂರು ನಗರ

ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್

November 24, 2026 9:08 PM
11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

November 24, 2026 8:23 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM
ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

The Bengaluru Live November 24, 2026 9:09 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ
  • ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ
  • ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್
  • ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ
©Copyright 2025 The Bengaluru Live All rights reserved. | MoreNews by AF themes.