ಜಪಾನ್ನ ನಿಲ್ದಾಣದಲ್ಲಿ ಕನ್ನಡ ಸಮುದಾಯದ ಸದಸ್ಯರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಡಿಐಪಿಆರ್
ಜಪಾನ್: ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಲ್ದಾಣದಲ್ಲಿ ಕನ್ನಡಿಗರು ಮತ್ತು ಅವರ ಕುಟುಂಬಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತ್ಮೀಯವಾಗಿ ಸಂವಾದ ನಡೆಸಿದರು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ (ಡಿಐಪಿಆರ್) ಪ್ರಕಟಣೆ ತಿಳಿಸಿದೆ.
ಕನ್ನಡ ಸಮುದಾಯದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು, ಶುಭಾಶಯ ವಿನಿಮಯ ಮಾಡಿಕೊಳ್ಳಲು ಹಾಗೂ ಜಪಾನ್ನಲ್ಲಿ ವಾಸಿಸುತ್ತಿರುವ ಅವರ ಅನುಭವಗಳನ್ನು ಆಲಿಸಲು ಈ ಸಂವಾದ ಅವಕಾಶ ಒದಗಿಸಿತು ಎಂದು ಪ್ರಕಟಣೆ ಹೇಳಿದೆ.
ಜಪಾನ್ನ ಅತ್ಯಂತ ವ್ಯವಸ್ಥಿತ ಶಿಂಕನ್ಸೆನ್ ಜಾಲ, ಸುಗಮ ಸಂಪರ್ಕ ಮತ್ತು ದಕ್ಷ ಸಾರಿಗೆ ಮೂಲಸೌಕರ್ಯದ ಬಗ್ಗೆ ಈ ಪ್ರಯಾಣ ಒಳನೋಟ ನೀಡಿತು; ಕರ್ನಾಟಕ ತನ್ನ ನಗರ ಸಂಚಾರ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುತ್ತಿರುವ ಹಿನ್ನೆಲೆಯಲ್ಲಿ ಇದು ಮೌಲ್ಯಯುತ ಎಂದು ಪ್ರಕಟಣೆ ವರ್ಣಿಸಿದೆ.
ಶಿಂಕನ್ಸೆನ್ನ ವೇಗ, ದಕ್ಷತೆ ಮತ್ತು ರೈಲ್ವೆ ಮೂಲಸೌಕರ್ಯದ ಬಗ್ಗೆ ಮುಖ್ಯಮಂತ್ರಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವಿಡಿಯೋವನ್ನೂ ಡಿಐಪಿಆರ್ ಹಂಚಿಕೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
