Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

The Bengaluru Live November 24, 2026 7:39 PM
ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ. ಚಿತ್ರ: ಒದಗಿಸಿದ್ದು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ನವದೆಹಲಿ: ವಾಟ್ಸಾಪ್ ಚಾಟ್ ಬಹಿರಂಗಪಡಿಸಿದ ದಿನವೇ ಚಾಟ್‌ನಲ್ಲಿ ಉಲ್ಲೇಖವಾಗಿದ್ದ ಅಧಿಕಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಲೀನ್ ಚಿಟ್ ನೀಡಿದ್ದರು ಎಂದು ತಮಗೆ ಹಾಸನ ಸೈಬರ್ ಕ್ರೈಂ ಪೊಲೀಸರು ನೀಡಿದ ನೋಟಿಸ್ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಪ್ರಶ್ನಿಸಿದರು ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದೆ ಎನ್ನಲಾದ ಲಂಚದ ಕುರಿತು ತಮಗೆ ದೊರೆತ ವಾಟ್ಸಾಪ್ ಚಾಟ್ ದಾಖಲೆಯ ಆಧಾರದ ಮೇಲೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಚಾಟ್‌ನಲ್ಲಿ ಉಲ್ಲೇಖವಾದ ವ್ಯಕ್ತಿಗಳ ಮೊಬೈಲ್ ಜಪ್ತಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದರು. “ಅದೇ ದಿನ ಚಾಟ್‌ನಲ್ಲಿದ್ದ ಅಧಿಕಾರಿಗೆ ಮುಖ್ಯಮಂತ್ರಿಯೇ ಕ್ಲೀನ್ ಚಿಟ್ ಕೊಟ್ಟರು. ಹಾಗಾದರೆ ಇನ್ನೇನು ತನಿಖೆ ಮಾಡುತ್ತೀರಿ?” ಎಂದು ಅವರು ಪ್ರಶ್ನಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಯಾವ ಆಧಾರದ ಮೇಲೆ ನೋಟಿಸ್ ನೀಡಲಾಗುತ್ತಿದೆ ಎಂದು ಕೇಳಿದರು. “ನನ್ನದು ಆರೋಪ ಅಲ್ಲ, ನನಗೆ ದೊರೆತ ದಾಖಲೆಯ ಬಗ್ಗೆ ತನಿಖೆ ಮಾಡಿ ಎಂದಷ್ಟೇ ಹೇಳಿದ್ದೇನೆ. ನನಗೆ ನೋಟಿಸ್ ಕೊಡಲು, ವಿಚಾರಣೆ ಮಾಡಲು ಅವರು ಯಾರು?” ಎಂದರು. ಯಾರಾದರೂ ₹10 ಲಂಚ ಕೇಳಿದರೂ ತಮ್ಮ ಗಮನಕ್ಕೆ ತನ್ನಿ ಎಂದು ಮುಖ್ಯಮಂತ್ರಿ ಹೇಳಿದ್ದು, ತಮಗೆ ಬಂದ ಮಾಹಿತಿಯನ್ನು ತಾವು ನೀಡಿದ್ದೇನೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಯ ಆಪ್ತ ಸಹಾಯಕನ ಮೊಬೈಲ್ ಜಪ್ತಿ ಮಾಡಿದರೆ ನಿಜಾಂಶ ಹೊರಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಹಾಲಿ ಗೃಹ ಸಚಿವರು ಪ್ರಕರಣದ ಬಗ್ಗೆ ತಮ್ಮ ಬಳಿ ಎಲ್ಲ ಮಾಹಿತಿ ಇದೆ ಎಂದಿದ್ದರು, ಮಾಹಿತಿ ಕೊಡಿ ಎಂದರೆ ಕೊಡಲಿಲ್ಲ ಎಂದ ಅವರು, ಅಧಿಕಾರಿಗಳನ್ನು ಬಳಸಿಕೊಂಡು ತಮ್ಮೊಂದಿಗೆ ಆಟವಾಡಲು ಬರುತ್ತಿದ್ದಾರೆ ಹಾಗೂ ನೋಟಿಸ್ ನೀಡಲು ಯಾರು ಕಳಿಸಿದ್ದರೆಂದು ತಮಗೆ ಗೊತ್ತಿದೆ ಎಂದು ಆರೋಪಿಸಿದರು.

2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಬಂದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ ಅವರು, ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದಂತೆ ಎಂದರು. ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಎನ್‌ಡಿಎ ಸರ್ಕಾರ ತರುವುದು ತಮ್ಮ ಗುರಿ ಎಂದರು.

ಹಿರಿಯೂರು ಉಪಚುನಾವಣೆ ಕುರಿತು ನವೆಂಬರ್ 24ರಂದು ಸಭೆ ನಡೆಯಲಿದ್ದು, ನಂತರ ತೀರ್ಮಾನವಾಗಲಿದೆ; ಚುನಾವಣೆ ಗೆಲ್ಲುವುದು ಮುಖ್ಯ ಉದ್ದೇಶವಾಗಿದ್ದು, ನೆಲಮಟ್ಟದ ವರದಿ ನೋಡಿ ಟಿಕೆಟ್ ನೀಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ:

  • ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಆರೋಪ: ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ಕುಮಾರಸ್ವಾಮಿ; ಅಧಿಕಾರಿಗಳ ಮೊಬೈಲ್ ಜಪ್ತಿಗೆ ಆಗ್ರಹ
  • ಕುಮಾರಸ್ವಾಮಿ ಲಂಚ ಆರೋಪ ಸುಳ್ಳು ಎಂದ ಹಾಸನ ಡಿಸಿ ಲತಾಕುಮಾರಿ; ವಾಟ್ಸಾಪ್ ಚಾಟ್ ಕುರಿತು ತನಿಖೆಗೆ ಆಗ್ರಹ
  • ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ

About the Author

The Bengaluru Live

Administrator

Visit Website View All Posts

Post navigation

Previous: ಬ್ಲೂ ಲೈನ್ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭ, 2027ರ ಮಧ್ಯಭಾಗದ ವೇಳೆಗೆ ಫೇಸ್ 2ಎ ಮುಕ್ತ ಗುರಿ: ಕೃಷ್ಣ ಬೈರೇಗೌಡ
Next: ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

Related Stories

ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

The Bengaluru Live November 24, 2026 8:16 PM

Latest Post

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

November 24, 2026 8:23 PM
ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

November 24, 2026 8:16 PM
ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ ಜಪಾನ್‌ನ ರೈಲು ನಿಲ್ದಾಣದ ಸಭಾಂಗಣದಲ್ಲಿ ಬಾಲಕಿಯೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

November 24, 2026 8:15 PM
ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

November 24, 2026 7:39 PM
ಬ್ಲೂ ಲೈನ್ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭ, 2027ರ ಮಧ್ಯಭಾಗದ ವೇಳೆಗೆ ಫೇಸ್ 2ಎ ಮುಕ್ತ ಗುರಿ: ಕೃಷ್ಣ ಬೈರೇಗೌಡ ಬ್ಲೂ ಲೈನ್ ಪರೀಕ್ಷಾರ್ಥ ಸಂಚಾರ ಪರಿಶೀಲನೆ ವೇಳೆ ಮೆಟ್ರೋ ರೈಲಿನೊಳಗೆ ಅಧಿಕಾರಿಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬ್ಲೂ ಲೈನ್ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭ, 2027ರ ಮಧ್ಯಭಾಗದ ವೇಳೆಗೆ ಫೇಸ್ 2ಎ ಮುಕ್ತ ಗುರಿ: ಕೃಷ್ಣ ಬೈರೇಗೌಡ

November 24, 2026 5:35 PM

ನೀವು ತಪ್ಪಿಸಿಕೊಂಡಿರಬಹುದು

ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

The Bengaluru Live November 24, 2026 8:16 PM
ಜಪಾನ್‌ನ ರೈಲು ನಿಲ್ದಾಣದ ಸಭಾಂಗಣದಲ್ಲಿ ಬಾಲಕಿಯೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

The Bengaluru Live November 24, 2026 8:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್
  • 11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ
  • ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ
  • ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ
©Copyright 2025 The Bengaluru Live All rights reserved. | MoreNews by AF themes.