Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ
  • ಆರೋಗ್ಯ
  • ರಾಮನಗರ

ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ

The Bengaluru Live February 10, 2021 2:00 PM 1 minute read
ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ

ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಸ್ಥಳ ಪರಿಶೀಲನೆ ನಡೆಸಿದ ಡಿಸಿಎಂ ಡಾ. ಅಶ್ವತ್ಥನಾರಾಯಣ

ವಿವಿ ಮತ್ತು ವೈದ್ಯಶಿಕ್ಷಣ ಇಲಾಖೆಗೆ ಭೂಮಿ ಹಸ್ತಾಂತರ

ರಾಮನಗರ:

ಇಲ್ಲಿಗೆ ಸಮೀಪದ ಅರ್ಚಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಬುಧವಾರ ಬೆಳಿಗ್ಗೆ ಅರ್ಚಕನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ಮಾಡಿದ ಅವರು; ಲಭ್ಯವಿರುವ ಜಾಗದಲ್ಲಿಯೇ ಆಡಳಿತಾತ್ಮಕ ಮಂಜೂರಾತಿ ಪಡೆದು ಕೂಡಲೇ ನಿರ್ಮಾಣ ಕೆಲಸಗಳನ್ನು ಆರಂಭಿಸುವಂತೆ ರಾಜೀವ್‌ ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

construction of Rajiv Gandhi Health university to begin soon in Ramanagara3

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ; ವಿವಿಗೆ ಅಗತ್ಯವಿರುವ ಇನ್ನಷ್ಟು ಭೂಮಿಯ ಬಗ್ಗೆ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ವಿಚಾರಣೆ ಮುಗಿದು ಆದೇಶ ಹೊರಬಿದ್ದ ಮೇಲೆ ಉಳಿದ ಪ್ರಕ್ರಿಯೆಗಳನ್ನು ವೇಗವಾಗಿ ಪೂರೈಸಬಹುದು. ಕೋರ್ಟ್‌ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ನೀಡಲಾಗುವುದು. ಅದುವರೆಗೂ ಸ್ವಾಧೀನದಲ್ಲಿರುವ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.

ಭೂಮಿ ವರ್ಗಾಯಿಸಲಾಗಿದೆ

ಈಗಾಗಲೇ 216 ಎಕರೆ ಭೂಮಿಯನ್ನು ಆರೋಗ್ಯ ವಿವಿಗಾಗಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಪೈಕಿ 40 ಎಕರೆ ಸರಕಾರಿ ಜಮೀನು. ಸ್ವಾಧೀನ ಮಾಡಿಕೊಂಡಿರವ ಕೆಲ ರೈತರ ಭೂಮಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಸುಮಾರು 70 ಎಕರೆಗೆ ಸಂಬಂಧಿಸಿದ ಪರಿಹಾರ ವಿವಾದ ನ್ಯಾಯಾಲಯದಲ್ಲಿ ಇದೆ. ಕೋರ್ಟ್ ಆದೇಶದ ಪ್ರಕಾರ ಪರಿಹಾರ ನೀಡುತ್ತೇವೆ. ಸ್ಬಾಧೀನದಲ್ಲಿ ಇರುವ ಜಮೀನಿನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

  • construction of Rajiv Gandhi Health university to begin soon in Ramanagara
  • construction of Rajiv Gandhi Health university to begin soon in Ramanagara1

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಲು ಅವರೂ ಉತ್ಸುಕರಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಾದ ಸಚಿವ ಸಿ.ಪಿ.ಯೋಗೀಶ್ವರ್‌, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಡಿ.ಕೆ.ಶಿವಕುಮಾರ್‌, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಎಲ್ಲರೂ ಈ ಯೋಜನೆಯನ್ನು ಬೇಗ ಕಾರ್ಯಗತ ಮಾಡುವಂತೆ ಹೇಳುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ರಾಮನಗರದ ಜನರ ಸೇವೆಗೆ ಕಲ್ಪಿಸಲು ಮುಖ್ಯಮಂತ್ರಿ ಶ್ರೀ @BSYBJP ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ.

2/2

— Dr. Ashwathnarayan C. N. (@drashwathcn) February 10, 2021

ಆರೋಗ್ಯ ವಿವಿ ಜತೆಯಲ್ಲಿಯೇ ಸುಸಜ್ಜಿತವಾದ ಹೆಲ್ತ್‌ ಸಿಟಿಯನ್ನೂ ಇಲ್ಲಿ ನಿರ್ಮಾಣ ಮಾಡುವುದು ಸರಕಾರದ ಉದ್ದೇಶವಾಗಿದೆ. ಈ ಎರಡು ಯೋಜನೆಗಳು ಕಾರ್ಯಗತವಾದರೆ ಈ ಭಾಗದ ಜನರಿಗೆ ರಾಮನಗರದಲ್ಲಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದರು ಡಾ.ಅಶ್ವತ್ಥನಾರಾಯಣ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಶಾಸಕಿ ಅನಿತಾ ಕುಮಾರಸ್ವಾಮ, ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ, ಕೆಐಎಡಿಬಿ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮಗ್ರ ವರದಿ ಸಲ್ಲಿಸಲು ಫೆಬ್ರವರಿ 15 ಗಡುವು
Next: ರೈತರು ಹೋರಾಟ ಪ್ರತಿಷ್ಠೆ ಆಗಬಾರದು: ದೇವೇಗೌಡ

Related Stories

ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

The Bengaluru Live November 14, 2026 10:05 PM
ತಪಾಸಣೆಯ ವೇಳೆ ರಸಗುಲ್ಲಾ ಪಾತ್ರೆಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ
  • ಆರೋಗ್ಯ
  • ರಾಷ್ಟ್ರೀಯ

ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ

The Bengaluru Live November 8, 2026 1:11 PM
ದಾವಣಗೆರೆಯ ಚಿಗಟೇರಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹೊರನೋಟ
  • ಆರೋಗ್ಯ
  • ಕರ್ನಾಟಕ

ಶಸ್ತ್ರಚಿಕಿತ್ಸಾ ಕೊಠಡಿ ಅಗ್ನಿ ಸುರಕ್ಷತೆ ಕುರಿತು ಚಿಗಟೇರಿ ಆಸ್ಪತ್ರೆಗೆ ಕರ್ನಾಟಕದ ಎಚ್ಚರಿಕೆ

The Bengaluru Live November 6, 2026 9:30 PM

Latest Post

ಮಹಿಳಾ ಸಚಿವೆ ಸೇರ್ಪಡೆ ನಿರ್ಧಾರ ಹೈಕಮಾಂಡ್‌ದ್ದು: ಸಿಎಂ ಶಿವಕುಮಾರ್; ಹಿರಿಯೂರು ಉಪಚುನಾವಣೆ ಸಿದ್ಧತೆ, ನಾಳೆ ದೆಹಲಿ ಪ್ರಯಾಣ ಭಾರತಿನಗರ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
  • Uncategorized

ಮಹಿಳಾ ಸಚಿವೆ ಸೇರ್ಪಡೆ ನಿರ್ಧಾರ ಹೈಕಮಾಂಡ್‌ದ್ದು: ಸಿಎಂ ಶಿವಕುಮಾರ್; ಹಿರಿಯೂರು ಉಪಚುನಾವಣೆ ಸಿದ್ಧತೆ, ನಾಳೆ ದೆಹಲಿ ಪ್ರಯಾಣ

November 15, 2026 7:55 PM
ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಫುಡ್ ಟ್ರಕ್ ಮೂಲಕ ಸ್ವಯಂ-ಉದ್ಯೋಗ ಅವಕಾಶ: ಸಚಿವ ರಘುಮೂರ್ತಿ ಸಚಿವ ಟಿ. ರಘುಮೂರ್ತಿ.
  • ಕರ್ನಾಟಕ

ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಫುಡ್ ಟ್ರಕ್ ಮೂಲಕ ಸ್ವಯಂ-ಉದ್ಯೋಗ ಅವಕಾಶ: ಸಚಿವ ರಘುಮೂರ್ತಿ

November 15, 2026 4:27 PM
ಬೆಂಗಳೂರು: ಪ್ರಜಾಪ್ರಭುತ್ವ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ ರಾಹುಲ್ ಗಾಂಧಿ: ಬಸವರಾಜ ಬೊಮ್ಮಾಯಿ ಆರೋಪ ಬಸವರಾಜ ಬೊಮ್ಮಾಯಿ ಅವರ ಎಕ್ಸ್ ಪೋಸ್ಟ್.
  • ರಾಜಕೀಯ

ಬೆಂಗಳೂರು: ಪ್ರಜಾಪ್ರಭುತ್ವ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ ರಾಹುಲ್ ಗಾಂಧಿ: ಬಸವರಾಜ ಬೊಮ್ಮಾಯಿ ಆರೋಪ

November 15, 2026 4:24 PM
ಬೆಂಗಳೂರು: ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ ಆಚರಿಸಿದ ಕರ್ನಾಟಕ ಬಿಜೆಪಿ ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದ ಕರ್ನಾಟಕ ಬಿಜೆಪಿ ಮುಖಂಡರು.
  • ರಾಜಕೀಯ

ಬೆಂಗಳೂರು: ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ ಆಚರಿಸಿದ ಕರ್ನಾಟಕ ಬಿಜೆಪಿ

November 15, 2026 3:50 PM
ಬೆಂಗಳೂರು ಹವಾಮಾನ: ಬಂಗಾಳ ಕೊಲ್ಲಿ ಡಿಪ್ರೆಶನ್ ಚಂಡಮಾರುತವಾಗಿ ಬಲಗೊಳ್ಳುವ ನಡುವೆ ಭಾಗಶಃ ಮೋಡ ಕವಿದ ವಾತಾವರಣ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಬೆಂಗಳೂರು

ಬೆಂಗಳೂರು ಹವಾಮಾನ: ಬಂಗಾಳ ಕೊಲ್ಲಿ ಡಿಪ್ರೆಶನ್ ಚಂಡಮಾರುತವಾಗಿ ಬಲಗೊಳ್ಳುವ ನಡುವೆ ಭಾಗಶಃ ಮೋಡ ಕವಿದ ವಾತಾವರಣ

November 15, 2026 3:24 PM
ಬೆಂಗಳೂರು: ಸಂಗಮೇಶ ಬಾದವಾಡಗಿ ಅವರ ‘ಜೋಳ ರಾಜನ ಕಥೆ’ ಪುಸ್ತಕ ಬಿಡುಗಡೆಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಶೇಷಾದ್ರಿಪುರಂನಲ್ಲಿ 'ಜೋಳ ರಾಜನ ಕಥೆ' ಬಿಡುಗಡೆಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಗಣ್ಯರು.
  • ಬೆಂಗಳೂರು

ಬೆಂಗಳೂರು: ಸಂಗಮೇಶ ಬಾದವಾಡಗಿ ಅವರ ‘ಜೋಳ ರಾಜನ ಕಥೆ’ ಪುಸ್ತಕ ಬಿಡುಗಡೆಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

November 15, 2026 3:21 PM

ನೀವು ತಪ್ಪಿಸಿಕೊಂಡಿರಬಹುದು

ಭಾರತಿನಗರ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
  • Uncategorized

ಮಹಿಳಾ ಸಚಿವೆ ಸೇರ್ಪಡೆ ನಿರ್ಧಾರ ಹೈಕಮಾಂಡ್‌ದ್ದು: ಸಿಎಂ ಶಿವಕುಮಾರ್; ಹಿರಿಯೂರು ಉಪಚುನಾವಣೆ ಸಿದ್ಧತೆ, ನಾಳೆ ದೆಹಲಿ ಪ್ರಯಾಣ

The Bengaluru Live November 15, 2026 7:55 PM
ಸಚಿವ ಟಿ. ರಘುಮೂರ್ತಿ.
  • ಕರ್ನಾಟಕ

ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಫುಡ್ ಟ್ರಕ್ ಮೂಲಕ ಸ್ವಯಂ-ಉದ್ಯೋಗ ಅವಕಾಶ: ಸಚಿವ ರಘುಮೂರ್ತಿ

The Bengaluru Live November 15, 2026 4:27 PM
ಬಸವರಾಜ ಬೊಮ್ಮಾಯಿ ಅವರ ಎಕ್ಸ್ ಪೋಸ್ಟ್.
  • ರಾಜಕೀಯ

ಬೆಂಗಳೂರು: ಪ್ರಜಾಪ್ರಭುತ್ವ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ ರಾಹುಲ್ ಗಾಂಧಿ: ಬಸವರಾಜ ಬೊಮ್ಮಾಯಿ ಆರೋಪ

The Bengaluru Live November 15, 2026 4:24 PM
ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದ ಕರ್ನಾಟಕ ಬಿಜೆಪಿ ಮುಖಂಡರು.
  • ರಾಜಕೀಯ

ಬೆಂಗಳೂರು: ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ ಆಚರಿಸಿದ ಕರ್ನಾಟಕ ಬಿಜೆಪಿ

The Bengaluru Live November 15, 2026 3:50 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಮಹಿಳಾ ಸಚಿವೆ ಸೇರ್ಪಡೆ ನಿರ್ಧಾರ ಹೈಕಮಾಂಡ್‌ದ್ದು: ಸಿಎಂ ಶಿವಕುಮಾರ್; ಹಿರಿಯೂರು ಉಪಚುನಾವಣೆ ಸಿದ್ಧತೆ, ನಾಳೆ ದೆಹಲಿ ಪ್ರಯಾಣ
  • ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಫುಡ್ ಟ್ರಕ್ ಮೂಲಕ ಸ್ವಯಂ-ಉದ್ಯೋಗ ಅವಕಾಶ: ಸಚಿವ ರಘುಮೂರ್ತಿ
  • ಬೆಂಗಳೂರು: ಪ್ರಜಾಪ್ರಭುತ್ವ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ ರಾಹುಲ್ ಗಾಂಧಿ: ಬಸವರಾಜ ಬೊಮ್ಮಾಯಿ ಆರೋಪ
  • ಬೆಂಗಳೂರು: ಜಗನ್ನಾಥ ಭವನದಲ್ಲಿ ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ ಆಚರಿಸಿದ ಕರ್ನಾಟಕ ಬಿಜೆಪಿ
©Copyright 2025 The Bengaluru Live All rights reserved. | MoreNews by AF themes.