Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು, ವಿಳಂಬ ಮಾಡಿದರೆ ಆಸ್ಪತ್ರೆಗಳ ಮೇಲೆ ಕ್ರಮ: ಡಿಸಿಎಂ ಎಚ್ಚರಿಕೆ
  • ಬೆಂಗಳೂರು ನಗರ

ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು, ವಿಳಂಬ ಮಾಡಿದರೆ ಆಸ್ಪತ್ರೆಗಳ ಮೇಲೆ ಕ್ರಮ: ಡಿಸಿಎಂ ಎಚ್ಚರಿಕೆ

The Bengaluru Live April 23, 2021 7:45 PM
ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು, ವಿಳಂಬ ಮಾಡಿದರೆ ಆಸ್ಪತ್ರೆಗಳ ಮೇಲೆ ಕ್ರಮ: ಡಿಸಿಎಂ ಎಚ್ಚರಿಕೆ

ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು, ವಿಳಂಬ ಮಾಡಿದರೆ ಆಸ್ಪತ್ರೆಗಳ ಮೇಲೆ ಕ್ರಮ: ಡಿಸಿಎಂ ಎಚ್ಚರಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಮೆಡಿಕಲ್‌ ಕಿಟ್‌ ಪೂರೈಕೆ, ಚಿತಾಗಾರ ಸಮಸ್ಯೆ, ರೆಮಿಡಿಸ್ವೀರ್‌ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜತೆ ಡಿಸಿಎಂ ಚರ್ಚೆ

ಬೆಂಗಳೂರು:

ನಗರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಅಥವಾ ಕೋವಿಡ್‌ಯೇತರ ಕಾರಣದಿಂದ ಯಾರೇ ಮೃತಪಟ್ಟರೂ ಕೂಡಲೇ ಮೃತ ದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಸುವ ಕೆಲಸ ತ್ವರಿತವಾಗಿ ಆಗಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒಂದು ವೇಳೆ ಮೃತದೇಹಗಳನ್ನು ನೀಡುವುದು ತಡ ಮಾಡಿದರೆ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಅವರು ಆದೇಶಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್‌ ನಿರ್ವಹಣೆ ಸಂಬಂಧ ಸಭೆ ನಡೆಸಿದ ಡಿಸಿಎಂ, ಆಸ್ಪತ್ರೆಗಳಿಂದ ಮೃತದೇಹಗಳನ್ನು ಸಂಬಂಧಿಕರಿಗೆ ತಡವಾಗಿ ನೀಡುತ್ತಿರುವುದರಿಂದ ಚಿತಾಗಾರಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಒಮ್ಮೆಗೇ ಮೃತದೇಹಗಳನ್ನು ತರುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಆಗುತ್ತಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರಿಗೆ ಸೂಚಿಸಿದರು.

ಮೃತರ ಸಂಬಂಧಿಕರು ಮೊದಲೇ ದುಃಖದಲ್ಲಿರುತ್ತಾರೆ. ಅವರ ನೋವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಆಗಬಾರದು. ಕೂಡಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಹಸ್ತಾಂತರ ಮಾಡಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಚರ್ಚೆ ನಡೆಸಲಾದ ಅಂಶಗಳ ಬಗ್ಗೆ ತದನಂತರ ಡಿಸಿಎಂ ಮಾಧ್ಯಮಗಳಿಗೆ ವಿವರಿಸಿದರು.

ಗ್ಯಾಸ್‌ ಚಿತಾಗಾರ:

ನಗರದ 13 ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವ ಕಾರಣ ಶವಸಂಸ್ಕಾರ ತಡ ಆಗುತ್ತಿದೆ. ತುರ್ತಾಗಿ ಮಾಡಬೇಕಾಗಿದೆ. ಹೀಗಾಗಿ ಪ್ರಾಯೋಗಿಕವಾಗಿ ಸುಮನಹಳ್ಳಿ ಮತ್ತು ಗಿಡ್ಡ ಹಳ್ಳಿಯಲ್ಲಿ ಗ್ಯಾಸ್ ಚಿತಾಗಾರಗಳನ್ನು ತುರ್ತಾಗಿ ತೆರೆಯಲು ಉದ್ದೇಶಿಸಲಾಗಿದೆ. ಇದು ಯಶಸ್ವಿಯಾದರೆ ಇತರೆ ಕಡೆಯೂ ಆ ವ್ಯವಸ್ಥೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪ್ರತಿ ಚಿತಾಗಾರಕ್ಕೂ 15 ಸ್ಟ್ರೆಚರ್‌ಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಚಿತಾಗಾರಕ್ಕೂ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಗಳಿದ್ದರೆ ಬಗೆಹರಿಸಬೇಕು ಎಂದು ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಆರೋಗ್ಯ ಸೇವಾ ಕೇಂದ್ರಕ್ಕೂ ಅನುದಾನ

ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರಿಗೆ, ಅದರಲ್ಲೂ ಮನೆಯಲ್ಲೇ ಕ್ವಾರೆಂಟೈನ್‌ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಮಾಡುವ ಮೆಡಿಕಲ್‌ ಕಿಟ್‌ ಕೊರತೆ ಉಂಟಾಗಿದೆ. ಕೂಡಲೇ ಈ ಕಿಟ್‌ಗಳನ್ನು ಖರೀದಿ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತಲಾ 2 ಲಕ್ಷ ರೂ. ನೀಡಲಾಗಿದೆ. ಇದು ಸಾಕಾಗುವುದಿಲ್ಲ. ಹೀಗಾಗಿ ವಿಧಾನಸಭಾ ಕ್ಷೇತ್ರವಾರು, ಬಿಬಿಎಂಪಿ ವಿಭಾಗವಾರು ಇನ್ನೂ ಹೆಚ್ವಿನ ಅನುದಾನ ಅಗತ್ಯ ಇದೆ. ತಕ್ಷಣ ಒದಗಿಸಬೇಕು ಎಂದು ಗೌರವ ಗುಪ್ತ ಅವರಿಗೆ ಸೂಚಿಸಿದರು. ಹಣ ಒದಗಿಸುವ ಭರವಸೆಯನ್ನು ಗುಪ್ತ ನೀಡಿದರು.

ಎಲ್ಲಿಯೂ ಕೋವಿಡ್‌ ಪೀಡಿತ ಜನರಿಗೆ ರೆಮಿಡಿಸ್ವೀರ್‌ ಸೇರಿ ಯಾವುದೇ ಔಷಧ ಅಥವಾ ಕಿಟ್‌ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ ಸಹಾಯವಾಣಿ 1912 ಸಂಖ್ಯೆಗೆ ಕೆರೆಗಳು ಹೆಚ್ಚಾಗಿವೆ. ಸಹಾಯವಾಣಿ ಕೇಂದ್ರದಲ್ಲಿ ಸದ್ಯಕ್ಕೆ ಕರೆ ಸ್ವೀಕರಿಸಲು 30 ಜನರಿದ್ದು, ಇನ್ನೂ 30 ಜನರನ್ನು ನಿಯೋಜಿಸುವಂತೆ ಸೂಚಿಸಿದ್ದೇನೆ. ಕರೆ ಮಾಡುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ತಿಳಿಸಲಾಗುವುದು.

ರಾಜ್ಯದಲ್ಲಿ 7 ಕಡೆ ಕೋವಿಡ್‌ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಅಲ್ಲಿಂದ ಲಸಿಕೆ ಬಂದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು. ದೆಹಲಿಯಲ್ಲಿ ಆದಂತೆ ಯಾವುದೇ ರೀತಿಯಲ್ಲೂ ವ್ಯತ್ಯಯ ಆಗಬಾರದು. ಇನ್ನೂ ರಾಜ್ಯದಲ್ಲಿ 280 ಆಸ್ಪತ್ರೆಗಳಿಂದ ರೆಮಿಡಿಸ್ವೀರ್‌ ಔಷಧಿಗೆ ಬೇಡಿಕೆ ಬಂದಿದೆ. ಆ ಬೇಡಿಕೆ ಅನುಸಾರ ಒದಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಸಭೆಯಲ್ಲಿ ಗೌರವ ಗುಪ್ತ ಜತೆ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.‌ಆರ್.ವಿಶ್ವನಾಥ್‌, ಔಷಧ ನಿಯಂತ್ರಣ ಇಲಾಖೆಯ ಉಪ‌ ನಿರ್ದೇಶಕ ಸುರೇಶ್‌ ಮುಂತಾದವರು ಇದ್ದರು.

About the Author

The Bengaluru Live

Administrator

Visit Website View All Posts

Post navigation

Previous: ವಾಗ್ವಾದಕ್ಕಿಂತ ತಿಳುವಳಿಕೆ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು- ಡಾ.ನಾರಾಯಣಗೌಡ
Next: ರೆಡ್ ಅಲರ್ಟ್: ಬೆಂಗಳೂರಿನಲ್ಲಿ ಅತಿ ಹೆಚ್ಚು 16,662 ಕೋವಿಡ್ ಪ್ರಕರಣಗಳು, 124 ಸಾವುಗಳು ವರದಿ

Related Stories

ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

The Bengaluru Live November 21, 2026 2:34 AM
ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

The Bengaluru Live November 20, 2026 10:24 PM
ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

The Bengaluru Live November 20, 2026 9:35 PM

Latest Post

ಗ್ರಾಮೀಣ ಕೆರೆಗಳ 11,671 ಎಕರೆ ಒತ್ತುವರಿ ತೆರವಿಗೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ, 15 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ ಸರ್ಕಾರಿ ಕಾರ್ಯಕ್ರಮದಲ್ಲಿ ಬ್ಯಾನರ್‌ನ ಮುಂದೆ ಹೂಗಳಿಂದ ಅಲಂಕರಿಸಿದ ವೇದಿಕೆಯಲ್ಲಿ, ಹಸಿರು ಶಲ್ಯ ಧರಿಸಿದವರು ಸೇರಿದಂತೆ ಹಲವರು ಒಟ್ಟಾಗಿ ದೀಪ ಬೆಳಗುತ್ತಿರುವುದು
  • ಕರ್ನಾಟಕ

ಗ್ರಾಮೀಣ ಕೆರೆಗಳ 11,671 ಎಕರೆ ಒತ್ತುವರಿ ತೆರವಿಗೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ, 15 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ

November 21, 2026 11:55 AM
ಯುಜಿ ಆಯುಷ್ 3ನೇ ಸುತ್ತಿನ ಕೌನ್ಸೆಲಿಂಗ್, ಪಿಜಿ ದಂತ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತು ಆರಂಭ: ಆಯುಷ್‌ಗೆ ನ.22ರವರೆಗೆ ಆಯ್ಕೆ ದಾಖಲಿಸಲು ಅವಕಾಶ, 69 ದಂತ ಸೀಟು ಬಾಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಕೈ ಸನ್ನೆ ಮಾಡುತ್ತಾ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಯುಜಿ ಆಯುಷ್ 3ನೇ ಸುತ್ತಿನ ಕೌನ್ಸೆಲಿಂಗ್, ಪಿಜಿ ದಂತ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತು ಆರಂಭ: ಆಯುಷ್‌ಗೆ ನ.22ರವರೆಗೆ ಆಯ್ಕೆ ದಾಖಲಿಸಲು ಅವಕಾಶ, 69 ದಂತ ಸೀಟು ಬಾಕಿ

November 21, 2026 11:14 AM
ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ ಗಾಳಿಯಂತ್ರಗಳ ಚಿತ್ರವಿರುವ ಕ್ರೆಡಲ್ ಹಿನ್ನೆಲೆಯ ಮುಂದೆ ಹಾರ ಧರಿಸಿದ ಪೇಟಧಾರಿ ವ್ಯಕ್ತಿ ಮತ್ತು ಗುಲಾಬಿ ಸೀರೆಯುಟ್ಟ ಮಹಿಳೆ ಉಡುಗೊರೆ ವಿನಿಮಯ ಮಾಡುತ್ತಿರುವುದು
  • ಕರ್ನಾಟಕ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ

November 21, 2026 9:40 AM
ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್

November 21, 2026 9:36 AM
ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

November 21, 2026 2:34 AM
₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಲಿ ಜಾಕೆಟ್ ಧರಿಸಿ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ, 20-11 ದಿನಾಂಕದ ಕನ್ನಡ ವೇದಿಕೆ ಬ್ಯಾನರ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ

November 21, 2026 2:28 AM

ನೀವು ತಪ್ಪಿಸಿಕೊಂಡಿರಬಹುದು

ಸರ್ಕಾರಿ ಕಾರ್ಯಕ್ರಮದಲ್ಲಿ ಬ್ಯಾನರ್‌ನ ಮುಂದೆ ಹೂಗಳಿಂದ ಅಲಂಕರಿಸಿದ ವೇದಿಕೆಯಲ್ಲಿ, ಹಸಿರು ಶಲ್ಯ ಧರಿಸಿದವರು ಸೇರಿದಂತೆ ಹಲವರು ಒಟ್ಟಾಗಿ ದೀಪ ಬೆಳಗುತ್ತಿರುವುದು
  • ಕರ್ನಾಟಕ

ಗ್ರಾಮೀಣ ಕೆರೆಗಳ 11,671 ಎಕರೆ ಒತ್ತುವರಿ ತೆರವಿಗೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ, 15 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ

The Bengaluru Live November 21, 2026 11:55 AM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಕೈ ಸನ್ನೆ ಮಾಡುತ್ತಾ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಯುಜಿ ಆಯುಷ್ 3ನೇ ಸುತ್ತಿನ ಕೌನ್ಸೆಲಿಂಗ್, ಪಿಜಿ ದಂತ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತು ಆರಂಭ: ಆಯುಷ್‌ಗೆ ನ.22ರವರೆಗೆ ಆಯ್ಕೆ ದಾಖಲಿಸಲು ಅವಕಾಶ, 69 ದಂತ ಸೀಟು ಬಾಕಿ

The Bengaluru Live November 21, 2026 11:14 AM
ಗಾಳಿಯಂತ್ರಗಳ ಚಿತ್ರವಿರುವ ಕ್ರೆಡಲ್ ಹಿನ್ನೆಲೆಯ ಮುಂದೆ ಹಾರ ಧರಿಸಿದ ಪೇಟಧಾರಿ ವ್ಯಕ್ತಿ ಮತ್ತು ಗುಲಾಬಿ ಸೀರೆಯುಟ್ಟ ಮಹಿಳೆ ಉಡುಗೊರೆ ವಿನಿಮಯ ಮಾಡುತ್ತಿರುವುದು
  • ಕರ್ನಾಟಕ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ

The Bengaluru Live November 21, 2026 9:40 AM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್

The Bengaluru Live November 21, 2026 9:36 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಗ್ರಾಮೀಣ ಕೆರೆಗಳ 11,671 ಎಕರೆ ಒತ್ತುವರಿ ತೆರವಿಗೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ, 15 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ
  • ಯುಜಿ ಆಯುಷ್ 3ನೇ ಸುತ್ತಿನ ಕೌನ್ಸೆಲಿಂಗ್, ಪಿಜಿ ದಂತ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತು ಆರಂಭ: ಆಯುಷ್‌ಗೆ ನ.22ರವರೆಗೆ ಆಯ್ಕೆ ದಾಖಲಿಸಲು ಅವಕಾಶ, 69 ದಂತ ಸೀಟು ಬಾಕಿ
  • ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ
  • ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್
©Copyright 2025 The Bengaluru Live All rights reserved. | MoreNews by AF themes.