Home ಬೆಂಗಳೂರು ನಗರ ಸವಾಲುಗಳ ನಡುವೆಯೂ ಅಭಿವೃದ್ಧಿ ಕಾರ್ಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸವಾಲುಗಳ ನಡುವೆಯೂ ಅಭಿವೃದ್ಧಿ ಕಾರ್ಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

49
0
Karnataka Chief Minister Basavaraj Bommai led government completes six month - Watch Live
Advertisement
bengaluru

ಬೆಂಗಳೂರು (ಕರ್ನಾಟಕ ವಾರ್ತೆ):

ಜನತೆಯ ಹಿತ ಕಾಪಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶ. ಜನ ಕಲ್ಯಾಣವೇ ನಮ್ಮ ಧ್ಯೇಯ. ಜನರ ಹಿತಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಸರ್ಕಾರವನ್ನು ಮುನ್ನೆಡೆಸುವುದು ನನ್ನ ಮತ್ತು ನಮ್ಮ ಸಂಪುಟ ಸದಸ್ಯರ ಆಶಯವಾಗಿದೆ. ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ತಿಳಿಸಿದರು.

ಸರ್ಕಾರದ 6 ತಿಂಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಳ್ಳಲಾದ ಸರ್ಕಾರವು ಕಳೆದ ಆರು ತಿಂಗಳಲ್ಲಿ ಸಾಧಿಸಿರುವ ಯೋಜನೆ, ಕಾರ್ಯಕ್ರಮಗಳ ಪ್ರಗತಿ ಚಿತ್ರಣವನ್ನೊಳಗೊಂಡ “ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು” – ತಿಂಗಳು ಆರು.. ನಿರ್ಣಯಗಳು ನೂರು ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳು, ಮಾನವೀಯ ಗುಣಗಳನ್ನು ನಮ್ಮ ಸಚಿವ ಸಂಪುಟ ಎಂದಿಗೂ ಬಿಟ್ಟುಕೊಡುವುದಿಲ್ಲ. ಸಾಮಾಜಿಕ ನ್ಯಾಯದ ಜೊತೆಗೆ ಸ್ವಾವಲಂಬನೆಯ ಬದ್ದತೆ ಕೊಡುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ನಮ್ಮದು ಒಂದು ಉತ್ತಮವಾದ ಸದಸ್ಯರೊನ್ನೊಳಗೊಂಡ ತಂಡವಾಗಿದೆ. ಆ ತಂದದಲ್ಲಿ ನಾನೂ ಒಬ್ಬ ಸದಸ್ಯ ಮಾತ್ರ. ನಮ್ಮ ಸರ್ಕಾರ ಜನಪರವಾದ ನಿರ್ಣಯಗಳನ್ನು ಕೈಗೊಂಡು ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಮುನ್ನೆಡೆಯುತ್ತಿದೆ.

bengaluru bengaluru
Karnataka Chief Minister Basavaraj Bommai led government completes six month - Watch Live

ಸ್ವಷ್ಟವಾಗಿ ಹೇಳಬೇಕೆಂದರೆ, ನಾವೆಲ್ಲ ಬಹಳ ಅದೃಷ್ಟವಂತರು. ಕನ್ನಡದ ನೆಲದಲ್ಲಿ ಹುಟ್ಟಿರುವುದು, ನಮ್ಮ ಅದೃಷ್ಟವೇ ಸರಿ. ಅಂತ ಒಂದು ಸುಂದರವಾದ ನಾಡು ನಮ್ಮ ಕನ್ನಡ ನಾಡು. ಅಷ್ಟೇ ಅಲ್ಲ ನಾವು ಇಲ್ಲಿ ಬದುಕಿ ಬಾಳಿ ನಮ್ಮ ಮುಂದಿನ ಜನಾಂಗವನ್ನು ಕಟ್ಟುವಂತಹ ಕೆಲಸ ನಮ್ಮ ಮುಂದಿದೆ. ಕನ್ನಡ ನಾಡಲ್ಲಿ ಇರುವಂತಹ ವಾತವರಣ ಬೇರೆ ಯಾವ ರಾಜ್ಯದಲ್ಲೂ ಸಹ ಇಲ್ಲ. ನಮ್ಮ ಕನ್ನಡ ನಾಡಿನಲ್ಲಿರುವಂತಹ ಸಂಸ್ಕøತಿ ಎಲ್ಲರನ್ನೂ ಒಳಗೊಂಡಂತೆ, ಎಲ್ಲರನ್ನೂ ಅಪ್ಪಿಕೊಂಡಂತೆ, ಎಲ್ಲರಲ್ಲಿಯೂ ತಾನು ಒಂದಾಗುವಂತಹ ವಿಶಿಷ್ಟವಾದ ಸಂಸ್ಕøತಿ ಹೊಂದಿದೆ. ನಮ್ಮ ಕನ್ನಡ ನಾಡು ಬಹಳ ಹೃದಯ ವೈಶಾಲ್ಯದಿಂದ ಕೂಡಿರುವ ನಾಡು. ಇಲ್ಲಿ ಇರುವಂತಹ ಪ್ರತಿಯೊಬ್ಬ ಕನ್ನಡಿಗನ ಮನಸ್ಸು ಬಹಳ ಹೃದಯ ವೈಶಾಲ್ಯದಿಂದ, ಸಹಾನುಭೂತಿಗುಣದಿಂದ ಕೂಡಿರುವ ಗುಣ ಹೊಂದಿದೆ ಎಂದು ತಿಳಿಸಿದರು.

ಭಾರತದಲ್ಲಿರುವ ಯಾವುದೇ ರಾಜ್ಯಗಳನ್ನು ನೋಡಿದಾಗ ಕರ್ನಾಟಕಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರ್ನಾಟಕದ ನೆಲ, ಜಲ, ಜನ, ಇಲ್ಲಿ ಬೆಳೆಯುವಂತಹ ಆಹಾರ ಧಾನ್ಯಗಳು, ಇಲ್ಲಿ ಇರುವಂತಹ ವಿವಿಧ ಸಾಂಸ್ಕøತಿಕ ಕಲೆಗಳು ಬಹಳ ವಿಶಿಷ್ಟತೆಯಿಂದ ಕೂಡಿವೆ. ನಮ್ಮ ಕನ್ನಡ ನಾಡಿನ ಕಲೆ, ಸಂಸ್ಕøತಿ, ಸಾಹಿತ್ಯ, ಜ್ಞಾನ, ವಿಜ್ಞಾನ ಎಲ್ಲವನ್ನು ನಾವು ಮುಂದಿನ ಪೀಳಿಗೆಗೂ ತೋರಿಸಿಕೊಡಬೇಕಾಗಿದೆ. ಆ ಕಾರಣದಿಂದಾಗಿ ನಾವು ಇಂದು ಎಲ್ಲವನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಶ್ರಮಿಸಬೇಕಾದ ಹಾದಿ ಬಹಳಷ್ಟಿದೆ.

ರಾಜ್ಯದ ಒಂದು ನಕ್ಷೆಯನ್ನು ನೋಡಿದರೆ, ಹಲವಾರು ನದಿಗಳು ನಮ್ಮ ರಾಜ್ಯದಲ್ಲಿ ಹರಿಯತ್ತಿವೆ. ಕಾರಂಜಾ ನದಿಯಿಂದ ಹಿಡಿದು, ತುಂಗಭದ್ರ, ಘಟಪ್ರಭ, ಮಲಪ್ರಭ, ದೂದ್‍ಗಂಗಾ, ಕೃಷ್ಣಾ, ಕಾವೇರಿ ಮಧ್ಯದಲ್ಲಿ ಪೆನ್ನಾರ್ ನದಿ, ಕಬಿನಿ ಹೀಗೆ ಹಲವಾರು ನದಿಗಳು ಉಪನದಿಗಳು ಇವೆ. ಇವೆಲ್ಲವೂ ಪಶ್ಚಿಮದಿಂದ ಪೂರ್ವಕ್ಕೆ ಹರಿಯುವಂತಹ ನದಿಗಳು. ಇವು ಕರ್ನಾಟಕದ ಅತಿ ಹೆಚ್ಚು ಪ್ರದೇಶವನ್ನು ಅಕ್ರಮಿಸಿವೆ. ಈ ನದಿಗಳು ಹರಿಯುತ್ತಾ ಹರಿಯುತ್ತಾ ಮುಂದಿನ ರಾಜ್ಯಗಳನ್ನು ತಲುಪುತ್ತಿವೆ.

ತುಂಗ ಮತ್ತು ಭದ್ರ ನದಿಗಳು ಮತ್ತು ಅದರ ಉಪ ನದಿಗಳು ಸಹ ಪಶ್ಚಿಮದಿಂದ ಪೂರ್ವಕ್ಕೆ ಹರಿಯವ ನದಿಗಳು. ಇದು ಹರಿದು ಮುಂದೆ ಸಾಗುತ್ತಾ ಕೃಷ್ಣಾ ನದಿಯನ್ನು ತಲುಪುತ್ತದೆ. ಈ ತುಂಗಭದ್ರ ನದಿ ತೀರದಿಂದ ಹಿಡಿದು, ಕೃಷ್ಣಾ ನದಿ ತೀರದವರೆಗೂ ಸುಮಾರು ಏಳು ಲಕ್ಷ ಎಕರೆ ಜಮೀನಿಗೆ ಹನಿ ನೀರಾವರಿ ಮಾಡುವ ಅವಕಾಶವಿದೆ. ಗಂಗಾ ಮಾತೆ ನಮ್ಮನ್ನು ಹರಿಸಿದ್ದಾಳೆ. ಇದರಿಂದಾಗಿ ನಮ್ಮ ರೈತಾಪಿ ಜನ 365 ದಿನ ಕೃಷಿ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಹತ್ತು ಕೃಷಿ ಹವಾಮಾನ ವಲಯಗಳಿವೆ (Agro Climate Zones) ಇಷ್ಟೊಂದು ಕೃಷಿ ಹವಮಾನ ವಲಯಗಳು ಬೇರೆ ಯಾವ ರಾಜ್ಯದಲ್ಲೂ ಸಹ ಇಲ್ಲ. ಈ ಹತ್ತು ಕೃಷಿ ಹವಾಮಾನ ವಲಯಗಳಲ್ಲಿ ನಾವು ವಿವಿಧ ಬೆಳೆಗಳನ್ನು ಬೆಳೆಯುವಂತಹದ್ದು, ವಿವಿಧ ಗಿಡ ಮರಗಳನ್ನು ಬೆಳೆಯುವಂತಹದ್ದು, ವಿವಿಧ ತೋಟಗಾರಿಕೆ ಮಾಡುವಂತಹದ್ದು. ನಮ್ಮ ನಾಡು ಕೃಷಿ ಸಂಪದ್ಬರಿತವಾಗಿದೆ. ಕೃಷಿ ಬೆಳೆಗಳ ರಕ್ಷಣೆಗಾಗಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಇದರಿಂದ ಹಲವಾರು ಜನರಿಗೆ ಉದ್ಯೋಗ ಸಹ ಸಿಗುತ್ತದೆ.

. ಕೈಗಾರಿಕೋದ್ಯಮದಲ್ಲಿ, ಹೆಚ್.ಎ.ಎಲ್, ಬಿ.ಎಚ್.ಇ.ಎಲ್, ಬಿ.ಎ.ಎಂ.ಎಲ್, ಹೆಚ್.ಎಂ.ಟಿ, ಎನ್.ಎ.ಎಲ್ ಹೀಗೆ ಹಲವಾರು ಬೇರೆ ಬೇರೆ ಅತ್ಯಂತ ಆಧುನಿಕ ಕ್ಷೇತ್ರಗಳನ್ನು ಅಂದರೆ ಏರೋನಾಟಿಕ್ಸ್‍ನಿಂದ ಹಿಡಿದು ಹೆಚ್.ಎಂ.ಟಿ ವರೆಗೂ ಹಾಗೂ ದೊಡ್ಡ ಪ್ರಮಾಣದ ಯಂತ್ರೋಪಕರಣ ಹೊಂದಿದ ಬಿ.ಇ.ಎಂ.ಎಲ್ ಎಲ್ಲವೂ ನಮ್ಮ ರಾಜ್ಯದಲ್ಲಿದೆ. ನಮಗೆ ನುರಿತ ಮಾನವ ಶಕ್ತಿ, ಕಲಿಯುವ ಮತ್ತು ಕಲಿತ ಮಾನವ ಶಕ್ತಿ, ವೈಜ್ಞಾನಿಕ ಮಾನವ ಶಕ್ತಿ ((Skilled Man Power, Learned Man power, Scientific Man Power) ) ಇದೆ. ಹೀಗಾಗಿ ವಿವಿಧ ಖಾಸಗಿ ವಲಯಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಐ.ಟಿ, ಬಿ.ಟಿ ಬೆಳೆದಿರುವಂತದ್ದು, ಇಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯಿಂದಾಗಿ (Research and Development). ಈ ಖಾಸಗಿ ವಲಯದವರು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅಗತ್ಯವಾದ ಮಾನವ ಶಕ್ತಿ ಬಳಸಿಕೊಂಡು, ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿಕೊಂಡು ಅವರು ಬೆಳೆದಿದ್ದಾರೆ. 180ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ದಿ ವಲಯಗಳು ಕರ್ನಾಟಕದಲ್ಲಿವೆ. ವಿವಿಧ ಕ್ಷೇತ್ರಗಳಲ್ಲಿ ನಾವು ನಾವು ಇದನ್ನು ಊಹೆ ಸಹಿತ ಮಾಡಲು ಸಾಧ್ಯವಿಲ್ಲ. ಜೆನೆಟಿಕ್ಸ್‍ನಿಂದ ಹಿಡಿದು ಬಾಹ್ಯಕಾಶದವರೆಗೂ ಯಾವ ಯಾವ ಕ್ಷೇತ್ರಗಳಿವೆ ಅಂದರೆ, ಐ.ಟಿ, ಬಿ.ಟಿ, ಫಾರ್ಮಾ ಕೆಮಿಕಲ್ಸ್, ಆಹಾರ ಕಾರ್ಖಾನೆಗಳು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಸಹ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರಗಳು ಬೆಂಗಳೂರು ನಗರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿದೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನಾನು ಈಗಾಗಲೇ ಪ್ರಾರಂಭಿಸಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಇರುವ ಮಕ್ಕಳನ್ನು ನೋಡಿದಾಗ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಡುವಂತಹದು ನಾವು ಕಾಣುತ್ತೇವೆ. ಕಾರಣ ಸರಿಯಾದ ಆರ್ಥಿಕ ವ್ಯವಸ್ಥೆಗಳಿಲ್ಲದೆ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅಂತವರಿಗೆ ಉತ್ತೇಜನ ನೀಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ನಮ್ಮ ಯುವಕರು ವಿದ್ಯಾವಂತರಾಗಿ ಕೈಯಲ್ಲಿ ಕೆಲಸ ಇಲ್ಲದಿದ್ದರೆ, ವಿದ್ಯಾವಂತ ನಿರುದ್ಯೋಗಿಗಳ ಬಹಳ ದೊಡ್ಡ ಸಮಸ್ಯೆಯನ್ನು ನಾವು ಕಾಣುವ ಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಶಿಕ್ಷಣ ನೀತಿಯಲ್ಲಿ ಸಹ ವಿದ್ಯಾವಂತ ಯುವಕ / ಯುವತಿಯರಿಗೆ ಸರಿಯಾದ ಉದ್ಯೋಗ ರೂಪಿಸುವ ವ್ಯವಸ್ಥೆ ಮಾಡಲಾಗಿದೆ.
ರೈತರ ಹಿತ ರಕ್ಷಣೆ, ಸಂತ್ರಸತ ರೈತರ ನೆರವಿಗೆ ಮಹತ್ತರವಾದ ನಿಲುವುಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿ ರೈತರಿಗೆ ಹೆಚ್ಚುವರಿಯಾಗಿ ರೂ. 4000/- ನೆರವನ್ನು ನೀಡಲಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಗೆ ಪರಿಹಾರವಾಗಿ 16.99 ಲಕ್ಷ ರೈತರಿಗೆ ಈ ವರೆಗೆ 1,181 /- ಕೋಟಿ ಪರಿಹಾರ ನೀಡಲಾಗಿದೆ.

Also Read: Bommai seeks public support as he completes six months in office on his 62nd birthday

ರೈತ ವಿದ್ಯಾನಿಧಿ – ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೂ ರೈತ ವಿದ್ಯಾನಿಧಿಯ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಯುವಕರು, ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತ ವರ್ಗದ ದುಡಿಯುವಂತಹ ವರ್ಗ ಏನಿದೆ ಅವರಿಗೆ ಅವಕಾಶಗಳನ್ನು ನೀಡುವಂತಹದು. ಅದರಲ್ಲೂ ಮಹಿಳೆಯರಿಗೆ ಅವಕಾಶಗಳನ್ನು ನೀಡುವುದರ ಮುಖಾಂತರ ಅವರು ತಮ್ಮ ದುಡಿಮೆ ಮಾಡಿ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಮಹಿಳೆಯರ ಸಬಲೀಕರಣಕ್ಕಾಗಿ 7500 ಸ್ತ್ರೀಶಕ್ತಿ ಸಂಘಕ್ಕೆ ತಲಾ ಒಂದು ಲಕ್ಷ ರೂ ನಂತೆ ಒಟ್ಟು 75 ಕೋಟಿ ರೂಗಳ ಧನ ಸಹಾಯ ಒದಗಿಸಲಾಗಿದೆ. ನಮ್ಮ ಸರ್ಕಾರ ದುರ್ಬಲರ ಬಗ್ಗೆ ಅಂತಃಕರಣ ಹೊಂದಿದೆ. ವಿಶೇಷ ಚೇತನರ ಮಾಸಿಕ ಪೋಷಣಾ ಭತ್ಯೆರೂ 600 ರಿಂದ 800 ಗಳಿಗೆ ಹೆಚ್ಚಿಸಲಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಮೊತ್ತವನ್ನು 1000 ದಿಂದ 1200ಕ್ಕೆ ಹೆಚ್ಚಳ ಮಾಡಲಾಗಿದೆ. ವಿಧವಾ ವೇತನವನ್ನು ರೂ 600 ರಿಂದ ರೂ 800ಕ್ಕೆ ಹೆಚ್ಚಳ ಮಾಡಲಾಗಿದೆ. ಪಿಂಚಣಿ ಹೆಚ್ಚಳದಿಂದಾಗಿ 58 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಸಿಷ್ಟ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗಿದೆ.

ವಸತಿ ಯೋಜನೆಯಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ. 6.5 ಲಕ್ಷ ನೆನೆಗುದಿಗೆ ಮನೆಗಳು ಬಿದ್ದಿದ್ದವು. ಮಾನ್ಯ ಪ್ರಧನ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಆ ಎಲ್ಲಾ ಮನೆಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಹೊಸ ಮನೆಗಳ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ವಿವಿಧ ವಸತಿ ಯೋಜನೆಗಳಡಿ ಒಟ್ಟು 48714 ಮನೆಗಳನ್ನು ನಿರ್ಮಿಸಲಾಗಿದೆ.

ಕಾರ್ಮಿಕರ ಕಲ್ಯಾಣ ಯೋಜನೆಯಡಿ 89 ಸಾವಿರ ಕಟ್ಟಡ ಕಾರ್ಮಿಕರ ಮಕ್ಕಳಿಗೆ 150 ಕೋಟಿ ರೂ ವಿದ್ಯಾರ್ಥಿ ವೇತನ ವರ್ಗಾವಣೆ ಮಾಡಲಾಗಿದೆ. ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹಿಸಲು ಇ-ಶ್ರಮ್‍ಗೆ ಚಾಲನೆ ನೀಡಲಾಗಿದೆ. ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೊಳಗಾದ ಅಸಂಗಟಿತ ಕಾರ್ಮಿಕರಿಗೆ ತಲಾ ರೂ 200ಗಳಂತೆ ಈ ವರೆಗೆ 1189258 ಕಾರ್ಮಿಕರಿಗೆ ಒಟ್ಟು 237 ಕೋಟಿ ಮೊತ್ತದ ನೆರವು ನೀಡಲಾಗಿದೆ.

ಕೋವಿಡ್ -19ನ್ನು ಯಶಶ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಲಸಿಕೆ ನೀಡಿಕೆಯಲ್ಲಿ ರಾಜ್ಯದ ಸಾಧನೆ ಮಹತ್ತರ. ಮೊಲನೆ ಡೋಸ್ ನಲ್ಲಿ ಶೇಕಡ 100%ರಷ್ಟು ಪ್ರಗತಿ ಹಾಗೂ ಎರಡನೇ ಡೋಸ್ ನೀಡಿಕೆಯಲ್ಲಿ ಶೇಕಡ 86% ರಷ್ಟು ಗುರಿ ಸಾಧನೆ ಮಾಡಲಾಗಿದೆ. ಮೂರನೇ ಅಲೆ ನಿಯಂತ್ರಣಕ್ಕೆ ರೂ 2.240 ಕೋಟಿ ಪೂರಕ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ನಾಗರೀಕ ಸ್ನೇಹಿ ಸೇವೆಗಳ ಯೋಜನೆಗಳಾದ “ಗ್ರಾಮ ಒನ್” ಸೇವೆಯಲ್ಲಿ ಮಹತ್ತರ ಕ್ರಾಂತಿಯಾಗಿದೆ. ಈ ತಿಂಗಳು ಈ ಸೇವೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಚಾಲನೆ ಮಾಡಲಾಗಿದೆ. ಗ್ರಾಮ ಒನ್ – ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಚಟುವಟಿಕೆಗಳ ಏಕಗವಾಕ್ಷಿ ನೆರವಿನ ಕೇಂದ್ರ ಜಾರಿಗೆ ತರಲಾಗಿದೆ. ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಲ್ಯಾಣ ಕರ್ನಾಟಕ ಸಮತೋಲನಕ್ಕೆ ಒತ್ತು ನೀಡಲಾಗಿದೆ. ಡಾ. ನಂಜುಂಡಪ್ಪ ಸಮಿತಿಯ ವರದಿಯನ್ನು ಇನ್ನೂ ಐದು ವರ್ಷಗಳ ವರೆಗೆ ಮುಂದುವರಿಎಸಲು ಕ್ರಮ ವಹಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 300 ಕೋಟಿ ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಆರು ತಿಂಗಳ ಅವಧಿ ಪೂರ್ಣ — Watch Live

ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ “ಮನೆಮನೆಗೆ ಗಂಗೆ” – ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ 11.27 ಲಕ್ಷ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪಕ್ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮಗಾಂಧಿ ರಾಷಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 31.97 ಲಕ್ಷ ಕುಟುಂಬಗಳಿಗೆ ಉದ್ಯೋಗವಕಾಶ ಕಲ್ಪಸಲಾಗಿದೆ. ಸ್ವಚ್ಛಭಾರತ್ ಅಭಿಯಾನದಡಿ ಗ್ರಾಮೀನ ಪ್ರದೇಶದ 54562 ವೈಯಕ್ತಿಕ ಗೃಹ ಶೌಚಾಲಯ ಹಾಗೂ 163 ಸಮುದಾಯ ಶೌಚಾಲಯ ನೀರ್ಮಾಣ ಮಾಡಲಾಗಿದೆ, ಆಬಾಕಾರಿ ಇಲಾಖೆಯಲ್ಲಿ ಗಣನೀಯವಾಗಿ ಪ್ರಗತಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರದ ಮುಂದಿರುವ ಸವಾಲುಗಳಿಗೆ, ಸಮಸ್ಯೆಗಳಿಗೆ ಎಲ್ಲಾ ಇಲಾಖೆಗಳು ಸ್ಪಂದನೆ ನೀಡುತ್ತಾ ಬಂದಿವೆ. ನಿರ್ಣಯಗಳನ್ನು ತೆಗೆದುಕೊಳ್ಳುವ ಸರ್ಕಾರ, ನಿರ್ಣಯಗಳನ್ನು ಮಾಡುವ ಸರ್ಕಾರ ನಮ್ಮದು. ಇದು ನಮ್ಮ ಗುಣ ಧರ್ಮ. ಸರ್ಕಾರವನ್ನು ಜನರು ಗಮನಿಸುತ್ತಿದ್ದಾರೆ, ಅವರೆಲ್ಲರೂ ನಮ್ಮನ್ನು ಹರೆಸುತ್ತಿದ್ದಾರೆ ಅವರು ಮೆಚ್ಚುವಂತ ರೀತಿಯಲ್ಲಿ ನಮ್ಮ ಸಂಪುಟದ ಸದಸ್ಯರು, ನಮ್ಮ ಶಾಸಕರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಾಡಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಗೃಹ ಇಲಾಖೆ ಕಾಪಾಡುತ್ತಾ ಬಂದಿದೆ. ಎಲ್ಲಾ ಸಂದರ್ಭಗಳಳ್ಳಿಯೂ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಹೋಮ್‍ಗಾಡ್ರ್ಸ್, ಸ್ವಯಂಸೇವಕರು, ಪಕ್ಷದ ಕಾರ್ಯಕರ್ತರು ಪರಿಶ್ರಮ ಪಟ್ಟು ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಕರ್ನಾಟಕದಲ್ಲಿ ಸಂಪದ್ಬರಿತವಾದ, ಸುರಕ್ಷತೆ ಇರುವ ಮತ್ತು ವಿಪ್ಲ ಅವಕಾಶಗಳಿರುವಂತಹ ಒಂದು ಸುಂದರ ನಾಡು ಮತ್ತು ಎಲ್ಲರನ್ನೂ ಆಕರ್ಷಿಸುವ ಸುಂದರ ಬೀಡಾಗಬೇಕು ನಮ್ಮ ಕರ್ನಾಟಕ. ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಅಗ್ರಸ್ಥಾನ ಸಿಗಬೇಕು.

ಕಟ್ಟ ಕಡೆಯ ವ್ಯಕ್ತಿಗೂ ಉದ್ಯೋಗ ದೊರೆಯುವಂತಾಗಬೇಕು. ನೈಸರ್ಗಿಕ ಸ್ನೇಹಿಯಾದ ಉದ್ಯೋಗಗಳು ಸ್ಥಾಪನೆಯಾಗಬೇಕು. ಒಳ್ಳೆಯ ಬೆಳೆ ಬೆಳೆಯಲು ಉತ್ತೇಜನ, ಜಲ ಸಂಪನ್ಮೂಲ ಬಳಸಿಕೊಳ್ಳುವ ಬಗ್ಗೆ ಯೋಜನೆಗಳು, ಶಿಕ್ಷಣಕ್ಕೆ ಒತ್ತು, ತಲಾವಾರು ಆದಾಯ ಹೆಚ್ಚಳ, ಪ್ರತಿಭೆಗಳನ್ನು, ವಿಜ್ಞಾನಿಗಳನ್ನು ರೂಪಿಸುವ ಪ್ರಯತ್ನ, ಕ್ರೀಡೆಗೆ ಪ್ರೋತ್ಸಾಹ ಹೀಗೆ ಹಲಾವರು ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಬೇಕಾಗಿದೆ.

5 ಜನ ಮುಖ್ಯಮಂತ್ರಿಗಳ ಒಟ್ಟಿಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ಆಡಳಿತ ನಡೆಸುವುದನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ನಮ್ಮ ಸರ್ಕಾರ ಮುಕ್ತವಾದ ಸರ್ಕಾರ. ಹಲವಾರು ಸವಾಲುಗಳು ನಮ್ಮ ಮುಂದಿದೆ. ಅವುಗಳನ್ನು ಎಂತಹ ಸವಾಲುಗಳನ್ನು ನಾವು ಎದುರಿಸಲು ಸಿದ್ದರಿದ್ದೇವೆ. ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ:ಪಿ.ಎಸ್. ಹರ್ಷ, ಐ.ಪಿ.ಎಸ್ ಅವರು ವಂದಿಸಿದರು.

ಸಮಾರಂಭದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಸಚಿವರುಗಳಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಬಿ.ಇ.ಪಾಟೀಲ್, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಶಂಕರಪಾಟೀಲ, ಮುನೇನಕೊಪ್ಪ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಅರಗಜ್ಞಾನೇಂದ್ರ, ಬಿ.ಸಿ.ನಾಗೇಶ್, ಆರ್.ಅಶೋಕ್, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ, ಎನ್.ನಾಗರಾಜ್ (ಎಮ್‍ಟಿಬಿ), ಮುನಿರತ್ನ, ಆನಂದ್ ಸಿಂಗ್ ಸೇರಿದಂತೆ, ಸಂಸದರು, ಶಾಸಕರುಗಳು, ಸರ್ಕಾರದಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here