Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಪ್ರತಿಯೊಬ್ಬ ಕಾಂಗ್ರೆಸಿಗನೂ ಐತಿಹಾಸಿಕ ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ
  • ಬೆಳಗಾವಿ

ಪ್ರತಿಯೊಬ್ಬ ಕಾಂಗ್ರೆಸಿಗನೂ ಐತಿಹಾಸಿಕ ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

The Bengaluru Live December 14, 2024 6:50 PM 1 minute read
ಪ್ರತಿಯೊಬ್ಬ ಕಾಂಗ್ರೆಸಿಗನೂ ಐತಿಹಾಸಿಕ ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಯೊಬ್ಬ ಕಾಂಗ್ರೆಸಿಗನೂ ಐತಿಹಾಸಿಕ ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು, ಡಿ.14: “ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಡೆಸುತ್ತಿರುವ ಐತಿಹಾಸಿಕ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಸಾಕ್ಷಿಯಾಗಬೇಕು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸ ಆಚರಣೆ ಕುರಿತು ಕೆಪಿಸಿಸಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“1924ರಲ್ಲಿ ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವಹಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿದರು. ಈ ಹೆಮ್ಮೆಯ ಕ್ಷಣವನ್ನು ಆಚರಿಸುವ ಅವಕಾಶ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸಿಗರಿಗೆ ಮಾತ್ರ ಸಿಕ್ಕಿದೆ. ಹೀಗಾಗಿ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು” ಎಂದು ತಿಳಿಸಿದರು.

IMG 20241214 WA0154 scaled

“ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ಜಾಗದಿಂದಲೇ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಪ್ರಜಾಧ್ವನಿಯಾತ್ರೆ ಆರಂಭಿಸಿದೆ. ಗಾಂಧಿ ಬಾವಿಯಿಂದ ನೀರು ತೆಗೆದು ರಸ್ತೆ ತೊಳೆದು ಸ್ವಚ್ಛ ಮಾಡಿ ನಮ್ಮ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಮ್ಮ ಹೋರಾಟ ಆರಂಭಿಸಿ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರಲು ಯಶಸ್ವಿಗಿದ್ದೇವೆ. ಈ ಶತಮಾನೋತ್ಸವದ ಕ್ಷಣದಲ್ಲಿ ಇತಿಹಾಸವನ್ನು ಮೆಲುಕು ಹಾಕುವ ಅದೃಷ್ಟ ನಮ್ಮದಾಗಿದೆ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ಸಂಭ್ರಮ ಆಚರಿಸುತ್ತಿದ್ದೇವೆ. ಗಾಂಧೀಜಿ ಅವರು ಅಂದು ಕುಳಿತ ಸ್ಥಾನದಲ್ಲಿ ಇಂದು ನಮ್ಮವರೇ ಆದ ಖರ್ಗೆ ಅವರು ಕೂತಿದ್ದಾರೆ. ನಾವು ಯಾವ ರೀತಿ ಪಕ್ಷ ಕಟ್ಟಬೇಕು ಎಂದು ಹೊಸ ಅಧ್ಯಾಯ ಆರಂಭಿಸಿ 2028ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಮುನ್ನುಡಿ ಬರೆಯಬೇಕಿದೆ” ಎಂದರು.

“ಇದು ಪಕ್ಷದ ಜತೆಗೆ ಸರ್ಕಾರದ ಕಾರ್ಯಕ್ರಮವೂ ಆಗಿದೆ. ಹೆಚ್.ಕೆ. ಪಾಟೀಲ್, ವೀರಪ್ಪ ಮೋಯ್ಲಿ, ಬಿ.ಎಲ್ ಶಂಕರ್ ಅವರ ನೇತೃತ್ವದಲ್ಲಿ ಸರ್ಕಾರದ ಸಚಿವರು ಹಾಗೂ ಪಕ್ಷದ ಮುಖಂಡರನ್ನೊಳಗೊಂಡ 60 ಸದಸ್ಯರ ಸಮಿತಿ ರಚಿಸಲಾಗಿದೆ. ಸರ್ಕಾರ ಹಾಗೂ ಪಕ್ಷದ ವತಿಯಿಂದ ಹೇಗೆ ಕಾರ್ಯಕ್ರಮ ಮಾಡಬೇಕು ಎಂದು ಈ ಸಮಿತಿ ರೂಪುರೇಷೆ ಸಿದ್ಧಪಡಿಸಲಿದೆ. ಸರ್ಕಾರದ ವತಿಯಿಂದ ಈಗಾಗಲೇ ಗಾಂಧಿ ಜಯಂತಿ ದಿನದಂದು ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ಗಾಂಧಿ ನಡಿಗೆ ಕಾರ್ಯಕ್ರಮ ಮಾಡಲಾಗಿದೆ. ನಂತರ ಶಾಲಾ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಮಾಡಲಾಗಿದೆ. ಪಕ್ಷದವತಿಯಿಂದ ಗಾಂಧಿ ವೃತ್ತದಿಂದ ಭಾರತ ಜೋಡೋ ಭವನದವರೆಗೂ ಹೆಜ್ಜೆ ಹಾಕಿದ್ದೇವೆ” ಎಂದರು.

“ಬೆಳಗಾವಿಯಲ್ಲಿ ಗಾಂಧಿಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಜಾಗದಲ್ಲಿ ಇದೇ ತಿಂಗಳು 26ರಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಿಎಲ್ ಪಿ ನಾಯಕರು, 150 ಸಂಸದರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಹಾತ್ಮಾ ಗಾಂಧಿ ಅವರ ಪ್ರತಿಮೆ ಉದ್ಘಾಟನೆ ನಡೆಯಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮುಖ್ಯಮಂತ್ರಿಗಳು ಅತಿಥಿಗಳಿಗೆ ಭೋಜನ ಕೂಟ ಆಯೋಜಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.

“27ರಂದು ಬೆಳಗ್ಗೆ 11 ಗಂಟೆಗೆ ಐತಿಹಾಸಿಕ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ನೀವು ಪಾಲ್ಗೊಂಡು ಸಾಕ್ಷಿಯಾಗಬೇಕು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಮುಖಂಡರನ್ನು ನಿನ್ನೆ ಆಹ್ವಾನ ನೀಡಿದ್ದೇನೆ. ಸಚಿವ ಸಂಪುಟ ಸಭೆಯಲ್ಲಿ ನಾನು ಹಾಗೂ ಮುಖ್ಯಮಂತ್ರಿಗಳು ಎಲ್ಲರ ಜವಾಬ್ದಾರಿ ಹಂಚಿದ್ದೇವೆ. ಕೆಪಿಸಿಸಿ ಪದಾಧಿಕಾರಿಗಳಿಗೆ ನೀಡಲಾಗಿರುವ ಪಟ್ಟಿ ಸಿದ್ಧಪಡಿಸಲಾಗಿದೆ.

ದೇಶಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಮ್ಮ ಪಕ್ಷದ ವತಿಯಿಂದ ಸ್ವಾತಂತ್ರ್ಯ ನಡಿಗೆ ಎಂಬ ಕಾರ್ಯಕ್ರಮ ಮಾಡಲಾಯಿತು. ಸುಮಾರು 3 ಲಕ್ಷ ಜನ ಹೆಜ್ಜೆ ಹಾಕಿದ್ದರು. ಆಮೂಲಕ ಇತಿಹಾಸ ಪುಟಕ್ಕೆ ಸೇರಿದ್ದಿರಿ. ಈ ಕಾರ್ಯಕ್ರಮ ಮತ್ತಷ್ಟು ಪವಿತ್ರವಾದ ಕಾರ್ಯಕ್ರಮವಾಗಿದ್ದು, ಇದು ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಬಾರದು. ಅಖಂಡ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು” ಎಂದು ತಿಳಿಸಿದರು.

“ಪ್ರತಿಯೊಬ್ಬ ಶಾಸಕರಿಗೆ ಶಿಷ್ಟಾಚಾರದ ಜವಾಬ್ದಾರಿ ನೀಡಲಾಗಿರುತ್ತದೆ. ಸಕ್ರಿಯರಾಗಿರುವ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಿಗೆ ನಾವು ಜವಾಬ್ದಾರಿ ಹಂಚುತ್ತಿದ್ದೇವೆ. ನಾವು ಯಾರಿಗೂ ಉಳಿದುಕೊಳ್ಳುವ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಪ್ರತಿ ಬ್ಲಾಕ್ ಹಾಗೂ ವಿಧಾನಸಭಾ ಕ್ಷೇತ್ರಗಳಿಂದ ಹಣ ಕೊಟ್ಟು ಜನರನ್ನು ಕರೆತರುವುದು ಬೇಡ. ಪಂಚಾಯ್ತಿ ಚುನಾವಣೆಯಲ್ಲಿ ನಿಂತು ಗೆದ್ದವರು, ಸೋತವರು, ವಿವಿಧ ಸಂಸ್ಥೆಗಳಲ್ಲಿ ನಾಮನಿರ್ದೇಶನವಾಗಿರುವವರು, ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಮಿತಿ ಸದಸ್ಯರು, ಪಾಲಿಕೆ ಸದಸ್ಯರುಗಳನ್ನು ಕರೆತರಬೇಕು. ಬೆಂಗಳೂರು ವಲಯದಿಂದ ಕನಿಷ್ಠ 100 ಜನರನ್ನಾದರೂ ನಿಮ್ಮ ನಿಮ್ಮ ವಾಹನಗಳಲ್ಲಿ ಆಗಮಿಸಬೇಕು” ಎಂದು ತಿಳಿಸಿದರು.

ಮೈಸೂರು ದಸರಾವನ್ನು ಹೇಗ ನಾವು ವಿಜೃಂಭಣೆಯಿಂದ ಆಚರಣೆ ಮಾಡಿದ್ದೆವೋ ಅದೇ ರೀತಿ ಬೆಳಗಾವಿಯಲ್ಲೂ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ಸುಮಾರು 8 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ದೀಪಾಲಂಕಾರ ಮಾಡಲಾಗುವುದು. ನೀವೆಲ್ಲರೂ ಕಾಂಗ್ರೆಸಿಗರು, ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಿಮಗೆ ಮಾತ್ರ ಇದೆ. ಈ ಕಾರ್ಯಕ್ರಮಕ್ಕಾಗಿ ನಾವು ಅನೇಕ ಸಮಿತಿಗಳನ್ನು ಆಯೋಜಿಸುತ್ತಿದ್ದೇವೆ” ಎಂದರು.

“ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕ ಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಇದೇ 20-21ರಂದು ಪಕ್ಷದವತಿಯಿಂದ ಕಾರ್ಯಕರ್ತರ ಜಾಗೃತಿ ಸಭೆ ಮಾಡಿ ಈ ಕಾರ್ಯಕ್ರಮದ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರುಗಳು ಈ ಸಭೆಗಳಿಗೆ ವೀಕ್ಷಕರಾಗಿ ತೆರಳಿ ಯಾವ ಕ್ಷೇತ್ರದಿಂದ ಎಷ್ಟು ಜನರನ್ನು ಹೊರಡಿಸುತ್ತಿದ್ದಾರೆ ಎಂದು ಮಾಹಿತಿ ಕಲೆಹಾಕಬೇಕು. ಈ ಭಾಗದ ಪ್ರತಿ ಕ್ಷೇತ್ರದಿಂದ ಕನಿಷ್ಠ 5000 ಜನರನ್ನು ಸಮಾವೇಶಕ್ಕೆ ಕರೆತರಬೇಕು. ಇದೊಂದು ದೊಡ್ಡ ಸಮಾವೇಶವಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು” ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಒಂದು ದೇಶ ಒಂದು ಚುನಾವಣೆ ಸಣ್ಣ ಪಕ್ಷಗಳನ್ನು ಮುಗಿಸುವ ಹುನ್ನಾರ: ಡಿಸಿಎಂ ಡಿ.ಕೆ. ಶಿವಕುಮಾರ್
Next: ಆತ್ಮಹತ್ಯೆ ಪ್ರಕರಣದಲ್ಲಿ ಅತುಲ್ ಸುಭಾಷ್ ಪತ್ನಿ, ಆಕೆಯ ತಾಯಿ, ಸಹೋದರನನ್ನು ಬಂಧಿಸಿದ ಬೆಂಗಳೂರು ಪೊಲೀಸರು

Related Stories

ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಕೈಯಲ್ಲಿ ದಾಖಲೆಗಳನ್ನು ಹಿಡಿದು ಮೈಕ್ರೊಫೋನ್‌ಗಳ ಮುಂದೆ ಮಾತನಾಡುತ್ತಿರುವ ರಿಜ್ವಾನ್ ಅರ್ಷದ್.
  • ಕರ್ನಾಟಕ
  • ರಾಜಕೀಯ

ಪಂಪ್‌ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನ, ಇ20 ಪರಿಹಾರ ನಿಧಿಗೆ ರಿಜ್ವಾನ್ ಅರ್ಷದ್ ಆಗ್ರಹ; ಹರ್ದೀಪ್ ಸಿಂಗ್ ಪುರಿಗೆ ಪತ್ರ

The Bengaluru Live November 19, 2026 8:31 AM
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ಶೃಂಗಸಭೆ ಎಂದು ಬರೆದ ಹಿನ್ನೆಲೆಯ ಮುಂದೆ ಪ್ರತಿನಿಧಿ ಬ್ಯಾಡ್ಜ್ ಧರಿಸಿ ನಿಂತಿರುವ ನಾಲ್ವರು ಪುರುಷರು
  • ಕರ್ನಾಟಕ

ನವದೆಹಲಿಯಲ್ಲಿ ಕೇಂದ್ರ ಸಚಿವಾಲಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಶೃಂಗಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಭಾಗಿ

The Bengaluru Live November 19, 2026 8:26 AM
ಅಲಂಕೃತ ವಾಹನದ ಪಕ್ಕದ ಪರದೆಯಲ್ಲಿ ರಿಬ್ಬನ್ ಕತ್ತರಿಸುತ್ತಿರುವ ವಾಯುಪಡೆ ಅಧಿಕಾರಿ; ಇನ್ನೊಬ್ಬ ಅಧಿಕಾರಿ ನೋಡುತ್ತಿರುವುದು
  • ಕರ್ನಾಟಕ

ಕರ್ನಾಟಕದಾದ್ಯಂತ ಅಗ್ನಿವೀರವಾಯು, ಏರ್‌ಮನ್ ವೃತ್ತಿ ಪ್ರಚಾರಕ್ಕೆ ಐಎಎಫ್ ತರಬೇತಿ ಕಮಾಂಡ್‌ನಿಂದ ಸಂಚಾರಿ ಪ್ರಚಾರ ವಾಹನಕ್ಕೆ ಚಾಲನೆ

The Bengaluru Live November 19, 2026 8:20 AM

Latest Post

ಪಂಪ್‌ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನ, ಇ20 ಪರಿಹಾರ ನಿಧಿಗೆ ರಿಜ್ವಾನ್ ಅರ್ಷದ್ ಆಗ್ರಹ; ಹರ್ದೀಪ್ ಸಿಂಗ್ ಪುರಿಗೆ ಪತ್ರ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಕೈಯಲ್ಲಿ ದಾಖಲೆಗಳನ್ನು ಹಿಡಿದು ಮೈಕ್ರೊಫೋನ್‌ಗಳ ಮುಂದೆ ಮಾತನಾಡುತ್ತಿರುವ ರಿಜ್ವಾನ್ ಅರ್ಷದ್.
  • ಕರ್ನಾಟಕ
  • ರಾಜಕೀಯ

ಪಂಪ್‌ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನ, ಇ20 ಪರಿಹಾರ ನಿಧಿಗೆ ರಿಜ್ವಾನ್ ಅರ್ಷದ್ ಆಗ್ರಹ; ಹರ್ದೀಪ್ ಸಿಂಗ್ ಪುರಿಗೆ ಪತ್ರ

November 19, 2026 8:31 AM
ನವದೆಹಲಿಯಲ್ಲಿ ಕೇಂದ್ರ ಸಚಿವಾಲಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಶೃಂಗಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಭಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ಶೃಂಗಸಭೆ ಎಂದು ಬರೆದ ಹಿನ್ನೆಲೆಯ ಮುಂದೆ ಪ್ರತಿನಿಧಿ ಬ್ಯಾಡ್ಜ್ ಧರಿಸಿ ನಿಂತಿರುವ ನಾಲ್ವರು ಪುರುಷರು
  • ಕರ್ನಾಟಕ

ನವದೆಹಲಿಯಲ್ಲಿ ಕೇಂದ್ರ ಸಚಿವಾಲಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಶೃಂಗಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಭಾಗಿ

November 19, 2026 8:26 AM
ಕರ್ನಾಟಕದಾದ್ಯಂತ ಅಗ್ನಿವೀರವಾಯು, ಏರ್‌ಮನ್ ವೃತ್ತಿ ಪ್ರಚಾರಕ್ಕೆ ಐಎಎಫ್ ತರಬೇತಿ ಕಮಾಂಡ್‌ನಿಂದ ಸಂಚಾರಿ ಪ್ರಚಾರ ವಾಹನಕ್ಕೆ ಚಾಲನೆ ಅಲಂಕೃತ ವಾಹನದ ಪಕ್ಕದ ಪರದೆಯಲ್ಲಿ ರಿಬ್ಬನ್ ಕತ್ತರಿಸುತ್ತಿರುವ ವಾಯುಪಡೆ ಅಧಿಕಾರಿ; ಇನ್ನೊಬ್ಬ ಅಧಿಕಾರಿ ನೋಡುತ್ತಿರುವುದು
  • ಕರ್ನಾಟಕ

ಕರ್ನಾಟಕದಾದ್ಯಂತ ಅಗ್ನಿವೀರವಾಯು, ಏರ್‌ಮನ್ ವೃತ್ತಿ ಪ್ರಚಾರಕ್ಕೆ ಐಎಎಫ್ ತರಬೇತಿ ಕಮಾಂಡ್‌ನಿಂದ ಸಂಚಾರಿ ಪ್ರಚಾರ ವಾಹನಕ್ಕೆ ಚಾಲನೆ

November 19, 2026 8:20 AM
72 ಎನ್‌ಸಿಸಿ ಕೆಡೆಟ್‌ಗಳಿಂದ ಕಾರವಾರದಿಂದ ಗೋವಾವರೆಗೆ 220 ಕಿ.ಮೀ ಸಾಗರಯಾನ; ನ.24ರಿಂದ ಆರಂಭ ಸಾಗರಯಾನ ಅಭಿಯಾನ ಎಂಬ ಶೀರ್ಷಿಕೆಯಡಿ ಸಮುದ್ರದಲ್ಲಿ ನೌಕೆಯಲ್ಲಿರುವ ಕೆಡೆಟ್‌ಗಳನ್ನು ತೋರಿಸುವ ಪೋಸ್ಟರ್
  • ಕರ್ನಾಟಕ

72 ಎನ್‌ಸಿಸಿ ಕೆಡೆಟ್‌ಗಳಿಂದ ಕಾರವಾರದಿಂದ ಗೋವಾವರೆಗೆ 220 ಕಿ.ಮೀ ಸಾಗರಯಾನ; ನ.24ರಿಂದ ಆರಂಭ

November 19, 2026 8:18 AM
ರಕ್ಷಣಾ ಪಿಂಚಣಿದಾರರಿಗಾಗಿ ಪಿಸಿಡಿಎ ಬೆಂಗಳೂರಿನಿಂದ ಎರಡು ದಿನಗಳ ಸ್ಪರ್ಶ್ ಜನಸಂಪರ್ಕ ಕಾರ್ಯಕ್ರಮ; ಮೊದಲ ದಿನ 1,000ಕ್ಕೂ ಹೆಚ್ಚು ಮಂದಿ ಭಾಗಿ ಜನಸಂಪರ್ಕ ಕಾರ್ಯಕ್ರಮದಲ್ಲಿ ಅಧಿಕಾರಿಗಳು ನೋಡುತ್ತಿರುವಾಗ ಗಾಲಿಕುರ್ಚಿಯಲ್ಲಿ ಕುಳಿತು ದಾಖಲೆಗಳ ಕಡತ ಪರಿಶೀಲಿಸುತ್ತಿರುವ ಪಿಂಚಣಿದಾರ
  • ಕರ್ನಾಟಕ

ರಕ್ಷಣಾ ಪಿಂಚಣಿದಾರರಿಗಾಗಿ ಪಿಸಿಡಿಎ ಬೆಂಗಳೂರಿನಿಂದ ಎರಡು ದಿನಗಳ ಸ್ಪರ್ಶ್ ಜನಸಂಪರ್ಕ ಕಾರ್ಯಕ್ರಮ; ಮೊದಲ ದಿನ 1,000ಕ್ಕೂ ಹೆಚ್ಚು ಮಂದಿ ಭಾಗಿ

November 19, 2026 8:15 AM
ಸತ್ಯ ಸಾಯಿ ಬಾಬಾ 101ನೇ ಜನ್ಮದಿನ ಹಿನ್ನೆಲೆ: ಪ್ರಶಾಂತಿ ನಿಲಯಂ ಮೂಲಕ 40 ರೈಲುಗಳ ಮಾರ್ಗ ಬದಲಾವಣೆ, ಹೆಚ್ಚುವರಿ ನಿಲುಗಡೆ ಕೆಎಸ್‌ಆರ್ ಬೆಂಗಳೂರಿನಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮದಲ್ಲಿ ಚರ್ಚೆಯಲ್ಲಿ ತೊಡಗಿರುವ ಪ್ರಯಾಣಿಕರು ಮತ್ತು ನೈಋತ್ಯ ರೈಲ್ವೆ ಅಧಿಕಾರಿಗಳು
  • ಕರ್ನಾಟಕ

ಸತ್ಯ ಸಾಯಿ ಬಾಬಾ 101ನೇ ಜನ್ಮದಿನ ಹಿನ್ನೆಲೆ: ಪ್ರಶಾಂತಿ ನಿಲಯಂ ಮೂಲಕ 40 ರೈಲುಗಳ ಮಾರ್ಗ ಬದಲಾವಣೆ, ಹೆಚ್ಚುವರಿ ನಿಲುಗಡೆ

November 19, 2026 8:11 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಕೈಯಲ್ಲಿ ದಾಖಲೆಗಳನ್ನು ಹಿಡಿದು ಮೈಕ್ರೊಫೋನ್‌ಗಳ ಮುಂದೆ ಮಾತನಾಡುತ್ತಿರುವ ರಿಜ್ವಾನ್ ಅರ್ಷದ್.
  • ಕರ್ನಾಟಕ
  • ರಾಜಕೀಯ

ಪಂಪ್‌ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನ, ಇ20 ಪರಿಹಾರ ನಿಧಿಗೆ ರಿಜ್ವಾನ್ ಅರ್ಷದ್ ಆಗ್ರಹ; ಹರ್ದೀಪ್ ಸಿಂಗ್ ಪುರಿಗೆ ಪತ್ರ

The Bengaluru Live November 19, 2026 8:31 AM
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ಶೃಂಗಸಭೆ ಎಂದು ಬರೆದ ಹಿನ್ನೆಲೆಯ ಮುಂದೆ ಪ್ರತಿನಿಧಿ ಬ್ಯಾಡ್ಜ್ ಧರಿಸಿ ನಿಂತಿರುವ ನಾಲ್ವರು ಪುರುಷರು
  • ಕರ್ನಾಟಕ

ನವದೆಹಲಿಯಲ್ಲಿ ಕೇಂದ್ರ ಸಚಿವಾಲಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಶೃಂಗಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಭಾಗಿ

The Bengaluru Live November 19, 2026 8:26 AM
ಅಲಂಕೃತ ವಾಹನದ ಪಕ್ಕದ ಪರದೆಯಲ್ಲಿ ರಿಬ್ಬನ್ ಕತ್ತರಿಸುತ್ತಿರುವ ವಾಯುಪಡೆ ಅಧಿಕಾರಿ; ಇನ್ನೊಬ್ಬ ಅಧಿಕಾರಿ ನೋಡುತ್ತಿರುವುದು
  • ಕರ್ನಾಟಕ

ಕರ್ನಾಟಕದಾದ್ಯಂತ ಅಗ್ನಿವೀರವಾಯು, ಏರ್‌ಮನ್ ವೃತ್ತಿ ಪ್ರಚಾರಕ್ಕೆ ಐಎಎಫ್ ತರಬೇತಿ ಕಮಾಂಡ್‌ನಿಂದ ಸಂಚಾರಿ ಪ್ರಚಾರ ವಾಹನಕ್ಕೆ ಚಾಲನೆ

The Bengaluru Live November 19, 2026 8:20 AM
ಸಾಗರಯಾನ ಅಭಿಯಾನ ಎಂಬ ಶೀರ್ಷಿಕೆಯಡಿ ಸಮುದ್ರದಲ್ಲಿ ನೌಕೆಯಲ್ಲಿರುವ ಕೆಡೆಟ್‌ಗಳನ್ನು ತೋರಿಸುವ ಪೋಸ್ಟರ್
  • ಕರ್ನಾಟಕ

72 ಎನ್‌ಸಿಸಿ ಕೆಡೆಟ್‌ಗಳಿಂದ ಕಾರವಾರದಿಂದ ಗೋವಾವರೆಗೆ 220 ಕಿ.ಮೀ ಸಾಗರಯಾನ; ನ.24ರಿಂದ ಆರಂಭ

The Bengaluru Live November 19, 2026 8:18 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪಂಪ್‌ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನ, ಇ20 ಪರಿಹಾರ ನಿಧಿಗೆ ರಿಜ್ವಾನ್ ಅರ್ಷದ್ ಆಗ್ರಹ; ಹರ್ದೀಪ್ ಸಿಂಗ್ ಪುರಿಗೆ ಪತ್ರ
  • ನವದೆಹಲಿಯಲ್ಲಿ ಕೇಂದ್ರ ಸಚಿವಾಲಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಶೃಂಗಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಭಾಗಿ
  • ಕರ್ನಾಟಕದಾದ್ಯಂತ ಅಗ್ನಿವೀರವಾಯು, ಏರ್‌ಮನ್ ವೃತ್ತಿ ಪ್ರಚಾರಕ್ಕೆ ಐಎಎಫ್ ತರಬೇತಿ ಕಮಾಂಡ್‌ನಿಂದ ಸಂಚಾರಿ ಪ್ರಚಾರ ವಾಹನಕ್ಕೆ ಚಾಲನೆ
  • 72 ಎನ್‌ಸಿಸಿ ಕೆಡೆಟ್‌ಗಳಿಂದ ಕಾರವಾರದಿಂದ ಗೋವಾವರೆಗೆ 220 ಕಿ.ಮೀ ಸಾಗರಯಾನ; ನ.24ರಿಂದ ಆರಂಭ
©Copyright 2025 The Bengaluru Live All rights reserved. | MoreNews by AF themes.