Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ರೈತರ ಭೂ ಪರಿಹಾರ ಸರಳೀಕರಣ: ಸಚಿವ ನಿರಾಣಿ
  • ಬೆಂಗಳೂರು ನಗರ

ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ರೈತರ ಭೂ ಪರಿಹಾರ ಸರಳೀಕರಣ: ಸಚಿವ ನಿರಾಣಿ

The Bengaluru Live March 25, 2022 2:00 PM
Murugesh Nirani in Karnataka Assembly

ಫೈಲ್ ಚಿತ್ರಗಳು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ
  • ವಿಳಂಬವಾಗದಂತೆ ರೈತರಿಗೆ ಭೂ ಪರಿಹಾರ ವಿತರಣೆ
  • ಅಭಿವೃದ್ಧಿಪಡಿಸಿದ ಜಮೀನನ್ನು ನೀಡುವ ಮುದ್ರಾಂಕ ಶುಲ್ಕ ಶೇ.50ರಷ್ಟು ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ

ಬೆಂಗಳೂರು:

ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಶಾಸಕ ಎನ್.ಎ.ಹ್ಯಾರಿಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚೆಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಹೊಸ ಭೂ ಸ್ವಾದೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಾವು ಯಾವುದೇ ವಿಳಂಬವಾಗದಂತೆ ಪರಿಹಾರವನ್ನು ವಿತರಣ ಮಾಡಲಿದ್ದೇವೆ ಎಂದರು.

ಕೆಐಎಡಿಬಿ ಕಾಯ್ದೆ ಕಾಲಂ 28/4 ಅಡಿ ಅಂತಿಮ ಅಸೂಚನೆ ಹೊರಡಿಸಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ದರ ನಿಗದಿ ಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ / ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರದೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಪಡಿಸುತ್ತಾರೆ ಎಂದು ನಿರಾಣಿ ಮಾಹಿತಿ ನೀಡಿದರು.

ಕೆಐಎಡಿಬಿ ವತಿಯಿಂದ ಭೂ ಸ್ವಾಧೀನಪಡಿಸಿದ ಜಮೀನಿಗೆ ಪಡೆಯುವ ಪರಿಹಾರ ಮೊತ್ತಕ್ಕೆ ಮೀರದ ಮೊತ್ತದಲ್ಲಿ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ರಿಯಾಯ್ತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕೆಐಎಡಿಬಿಯಿಂದ ಭೂ ಸ್ವಾಧೀನ ಪಡಿಸಿ ಕೊಳ್ಳುತ್ತಿರುವ ಕೈಗಾರಿಕಾ ಪ್ರದೇಶದ ಜಮೀನುಗಳಿಗೆ ಭೂ ಪರಿಹಾರದ ಬದಲಾಗಿ ಪ್ರತಿ ಎಕರೆ ಜಮೀನಿಗೆ ನೀಡುತ್ತಿರುವ ಅಭಿವೃದ್ಧಿಪಡಿಸಿದ 9,583 ಚದರಡಿ ವಿಸ್ತೀರ್ಣದಿಂದ 10,781 ಚದರಿ ವಿಸ್ರ್ತೀಣಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಅಭಿವೃದ್ಧಿಪಡಿಸಿದ ಜಮೀನನ್ನು ನೀಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿ ಇರುತ್ತದೆ ಎಂದರು.

ಜಮೀನುಗಳಿಗೆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾತೆದಾರರು/ಹಿತಾಸಕ್ತದಾರರಿಗೆ ಆರ್‍ಟಿಜಿಎಸ್ ಮುಖಾಂತರ ಭೂಮಾಲೀಕರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ನಿರಾಣಿ ಅವರು ಸ್ಪಷ್ಟಪಡಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಕೆಎಎಸ್‌ ಅಧಿಕಾರಿ ಕೆ. ರಂಗನಾಥ್‌ ಮೇಲೆ ಎಸಿಬಿ ದಾಳಿ
Next: ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ 16 ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ‘ಕಡಗೊಂಡನಹಳ್ಳಿ’ ಹೆಸರಿಗೆ ಸ್ಥಳೀಯರ ಮನವಿ; ‘ಅರೇಬಿಕ್ ಕಾಲೇಜು’ ಎಂದು ಬದಲಿಸಲು ಬಿಡುವುದಿಲ್ಲ ಎಂದ ಸಂಸದ ಪಿ.ಸಿ. ಮೋಹನ್ ಸಭೆಯಲ್ಲಿ ಕೊಠಡಿಯೊಂದರಲ್ಲಿ ಕುಳಿತಿರುವ ಜನರ ಗುಂಪು
  • ಬೆಂಗಳೂರು

ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ‘ಕಡಗೊಂಡನಹಳ್ಳಿ’ ಹೆಸರಿಗೆ ಸ್ಥಳೀಯರ ಮನವಿ; ‘ಅರೇಬಿಕ್ ಕಾಲೇಜು’ ಎಂದು ಬದಲಿಸಲು ಬಿಡುವುದಿಲ್ಲ ಎಂದ ಸಂಸದ ಪಿ.ಸಿ. ಮೋಹನ್

November 12, 2026 7:17 AM
ಮೈಸೂರಿನಲ್ಲಿ ಕರ್ನಾಟಕ ಕಂಚಿನ ವಸ್ತುಗಳ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ಸಾಂಪ್ರದಾಯಿಕ ಕರಕುಶಲ ಉಳಿಸಲು ಕರೆ ಮೈಸೂರಿನ ಪ್ರದರ್ಶನದಲ್ಲಿ ಕೆತ್ತನೆಯ ಕಂಚು ಮತ್ತು ಮರದ ಪೀಠೋಪಕರಣಗಳನ್ನು ವೀಕ್ಷಿಸುತ್ತಿರುವ ಸಂದರ್ಶಕರು
  • ಕರ್ನಾಟಕ

ಮೈಸೂರಿನಲ್ಲಿ ಕರ್ನಾಟಕ ಕಂಚಿನ ವಸ್ತುಗಳ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ಸಾಂಪ್ರದಾಯಿಕ ಕರಕುಶಲ ಉಳಿಸಲು ಕರೆ

November 12, 2026 7:17 AM
ನ.14ರಂದು ತಿಕೋಟಾದಲ್ಲಿ ಮಕ್ಕಳ ದಿನಾಚರಣೆ ವಿಜ್ಞಾನ ಜಾತ್ರೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ ಎಂದ ಎಂ.ಬಿ. ಪಾಟೀಲ ರಾತ್ರಿ ವೇಳೆ ಬಯಲಿನಲ್ಲಿ ಉಕ್ಕಿನ ಚೌಕಟ್ಟು ಮತ್ತು ಕ್ರೇನ್ ಬಳಸಿ ಸ್ಥಳ ಸಿದ್ಧಪಡಿಸುತ್ತಿರುವ ಕಾರ್ಮಿಕರು
  • ಕರ್ನಾಟಕ

ನ.14ರಂದು ತಿಕೋಟಾದಲ್ಲಿ ಮಕ್ಕಳ ದಿನಾಚರಣೆ ವಿಜ್ಞಾನ ಜಾತ್ರೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ ಎಂದ ಎಂ.ಬಿ. ಪಾಟೀಲ

November 12, 2026 7:17 AM
ಚಿನ್ನದ ಸಾಲ ವಂಚನೆ: ರಾಜಾನುಕುಂಟೆ ಪೊಲೀಸರಿಂದ ಬ್ಯಾಂಕ್ ಗೋಲ್ಡ್ ಅಪ್ರೈಸರ್ ಬಂಧನ; ₹1.80 ಕೋಟಿ ಮೌಲ್ಯದ ಚಿನ್ನಾಭರಣ ವಶ
  • ಬೆಂಗಳೂರು

ಚಿನ್ನದ ಸಾಲ ವಂಚನೆ: ರಾಜಾನುಕುಂಟೆ ಪೊಲೀಸರಿಂದ ಬ್ಯಾಂಕ್ ಗೋಲ್ಡ್ ಅಪ್ರೈಸರ್ ಬಂಧನ; ₹1.80 ಕೋಟಿ ಮೌಲ್ಯದ ಚಿನ್ನಾಭರಣ ವಶ

November 12, 2026 7:17 AM
ನ.16ರಿಂದ ಬೆಂಗಳೂರಿನಲ್ಲಿ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್; ಲೋಗೋ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಚಾಂಪಿಯನ್‌ಶಿಪ್ ಲೋಗೋ ಪೋಸ್ಟರ್ ಹಿಡಿದಿರುವ ಅಧಿಕಾರಿಗಳು
  • ಬೆಂಗಳೂರು

ನ.16ರಿಂದ ಬೆಂಗಳೂರಿನಲ್ಲಿ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್; ಲೋಗೋ ಬಿಡುಗಡೆ

November 12, 2026 7:17 AM
ಬಂಟ್ವಾಳದ ಎಸ್‌ಎಚ್-300 ರಸ್ತೆ ಗುಂಡಿ ದುರಸ್ತಿ: ಸಿಎಂ ಕಚೇರಿ ಮಧ್ಯಸ್ಥಿಕೆ ನಂತರ ಕ್ರಮ; ₹12 ಕೋಟಿ ಅನುದಾನದ ಪ್ರಸ್ತಾವನೆ
  • ಕರ್ನಾಟಕ

ಬಂಟ್ವಾಳದ ಎಸ್‌ಎಚ್-300 ರಸ್ತೆ ಗುಂಡಿ ದುರಸ್ತಿ: ಸಿಎಂ ಕಚೇರಿ ಮಧ್ಯಸ್ಥಿಕೆ ನಂತರ ಕ್ರಮ; ₹12 ಕೋಟಿ ಅನುದಾನದ ಪ್ರಸ್ತಾವನೆ

November 12, 2026 7:17 AM

ನೀವು ತಪ್ಪಿಸಿಕೊಂಡಿರಬಹುದು

ಸಭೆಯಲ್ಲಿ ಕೊಠಡಿಯೊಂದರಲ್ಲಿ ಕುಳಿತಿರುವ ಜನರ ಗುಂಪು
  • ಬೆಂಗಳೂರು

ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ‘ಕಡಗೊಂಡನಹಳ್ಳಿ’ ಹೆಸರಿಗೆ ಸ್ಥಳೀಯರ ಮನವಿ; ‘ಅರೇಬಿಕ್ ಕಾಲೇಜು’ ಎಂದು ಬದಲಿಸಲು ಬಿಡುವುದಿಲ್ಲ ಎಂದ ಸಂಸದ ಪಿ.ಸಿ. ಮೋಹನ್

The Bengaluru Live November 12, 2026 7:17 AM
ಮೈಸೂರಿನ ಪ್ರದರ್ಶನದಲ್ಲಿ ಕೆತ್ತನೆಯ ಕಂಚು ಮತ್ತು ಮರದ ಪೀಠೋಪಕರಣಗಳನ್ನು ವೀಕ್ಷಿಸುತ್ತಿರುವ ಸಂದರ್ಶಕರು
  • ಕರ್ನಾಟಕ

ಮೈಸೂರಿನಲ್ಲಿ ಕರ್ನಾಟಕ ಕಂಚಿನ ವಸ್ತುಗಳ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ಸಾಂಪ್ರದಾಯಿಕ ಕರಕುಶಲ ಉಳಿಸಲು ಕರೆ

The Bengaluru Live November 12, 2026 7:17 AM
ರಾತ್ರಿ ವೇಳೆ ಬಯಲಿನಲ್ಲಿ ಉಕ್ಕಿನ ಚೌಕಟ್ಟು ಮತ್ತು ಕ್ರೇನ್ ಬಳಸಿ ಸ್ಥಳ ಸಿದ್ಧಪಡಿಸುತ್ತಿರುವ ಕಾರ್ಮಿಕರು
  • ಕರ್ನಾಟಕ

ನ.14ರಂದು ತಿಕೋಟಾದಲ್ಲಿ ಮಕ್ಕಳ ದಿನಾಚರಣೆ ವಿಜ್ಞಾನ ಜಾತ್ರೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ ಎಂದ ಎಂ.ಬಿ. ಪಾಟೀಲ

The Bengaluru Live November 12, 2026 7:17 AM
  • ಬೆಂಗಳೂರು

ಚಿನ್ನದ ಸಾಲ ವಂಚನೆ: ರಾಜಾನುಕುಂಟೆ ಪೊಲೀಸರಿಂದ ಬ್ಯಾಂಕ್ ಗೋಲ್ಡ್ ಅಪ್ರೈಸರ್ ಬಂಧನ; ₹1.80 ಕೋಟಿ ಮೌಲ್ಯದ ಚಿನ್ನಾಭರಣ ವಶ

The Bengaluru Live November 12, 2026 7:17 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ‘ಕಡಗೊಂಡನಹಳ್ಳಿ’ ಹೆಸರಿಗೆ ಸ್ಥಳೀಯರ ಮನವಿ; ‘ಅರೇಬಿಕ್ ಕಾಲೇಜು’ ಎಂದು ಬದಲಿಸಲು ಬಿಡುವುದಿಲ್ಲ ಎಂದ ಸಂಸದ ಪಿ.ಸಿ. ಮೋಹನ್
  • ಮೈಸೂರಿನಲ್ಲಿ ಕರ್ನಾಟಕ ಕಂಚಿನ ವಸ್ತುಗಳ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ಸಾಂಪ್ರದಾಯಿಕ ಕರಕುಶಲ ಉಳಿಸಲು ಕರೆ
  • ನ.14ರಂದು ತಿಕೋಟಾದಲ್ಲಿ ಮಕ್ಕಳ ದಿನಾಚರಣೆ ವಿಜ್ಞಾನ ಜಾತ್ರೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ ಎಂದ ಎಂ.ಬಿ. ಪಾಟೀಲ
  • ಚಿನ್ನದ ಸಾಲ ವಂಚನೆ: ರಾಜಾನುಕುಂಟೆ ಪೊಲೀಸರಿಂದ ಬ್ಯಾಂಕ್ ಗೋಲ್ಡ್ ಅಪ್ರೈಸರ್ ಬಂಧನ; ₹1.80 ಕೋಟಿ ಮೌಲ್ಯದ ಚಿನ್ನಾಭರಣ ವಶ
©Copyright 2025 The Bengaluru Live All rights reserved. | MoreNews by AF themes.