Home ಆರೋಗ್ಯ ಅಪೊಲೊ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ದಾಖಲು

ಅಪೊಲೊ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ದಾಖಲು

38
0
Brahmins not insulted: Kumaraswamy
Advertisement
bengaluru

ಬೆಂಗಳೂರು:

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಕೊನೆಗೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಇಂದು ಬೆಳಗ್ಗೆ ಕೊರೋನಾ ಸೋಂಕು ದೃಢವಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್‌ ಇಲ್ಲದೇ ಖಾಸಗಿ ಹೋಟೆಲ್ ಲ್ಲಿಯೇ ಕ್ವಾರಂಟೈನ್ ಆಗಿದ್ದರು.

ಇದೀಗ ಬನ್ನೇರುಘಟ್ಟ ರಸ್ತೆ ಬಳಿಯಿರುವ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಬಗ್ಗೆ ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯಿಸಿರುವ ಎಚ್‌ಡಿಕೆ, ನನಗೆಇಂದು ಬೆಳಿಗ್ಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆ ಯ ಮುಖ್ಯಸ್ಥರಾದ ಡಾಕ್ಟರ್ ಮಂಜುನಾಥ ಹಾಗೂ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾಕ್ಟರ್ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಕಾಯ್ದಿರಿಸಿದ್ದರು. ತುರ್ತಾಗಿ ಸ್ಪಂದಿಸಿ ನನ್ನೊಂದಿಗೆ ಮಾತನಾಡಿದರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.

WhatsApp Image 2021 04 17 at 21.42.06

ನ್ಯಾಯಾಲಯದ ಪ್ರಕರಣವೊಂದರ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಗಿ ಆಗಬೇಕಾಗಿದ್ದರಿಂದ ಮಧ್ಯಾಹ್ನ ನಂತರ ಅಪೋಲೋ ಆಸ್ಪತ್ರೆಗೆ ದಾಖಲಾದೆ. ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲೇ ಕೊರೊನಾ ಚಿಕಿತ್ಸೆ ಪಡೆಯಲು ತೀರ್ಮಾನಿಸಿ, ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಎಲ್ಲರಿಗೂ ನನ್ನ ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ.

bengaluru bengaluru

ಮಣಿಪಾಲ್‌ನಲ್ಲಿ ಹಾಸಿಗೆ ಕೊರತೆಯಾಗಿಲ್ಲ: ಸುಧಾಕರ್ ಸ್ಪಷ್ಟನೆ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮಾಜಿ ಸಿಎಂ ಕುಮಾರಸ್ವಾಮಿಗೆ ಬೆಡ್ ಕೊರತೆಯುಂಟಾಗಿರುವ ಬಗ್ಗೆ ನಾನೇ ಖುದ್ದಾಗಿ ಅವರ ಹತ್ರ ಮಾತಾಡಿದ್ದೇನೆ. ಅಲ್ಲದೇ ಮಣಿಪಾಲ್ ಅವರ ಜತೆ ಕೂಡ ಮಾತಾಡಿದ್ದೇನೆ. ಕುಮಾರಸ್ವಾಮಿಗೆ ಹೃದಯದ ಸರ್ಜರಿಯಾಗಿರುವುದರಿಂದ ಅಪೋಲೊ ಆಸ್ಪತ್ರೆಯಲ್ಲಿ ಸಂಬಂಧಪಟ್ಡ ವೈದ್ಯರು ಇದ್ದಾರೆ. ಹೀಗಾಗಿ ಅವರೇ ಮಣಿಪಾಲ್ ಆಸ್ಪತ್ರೆ ಬಿಟ್ಟು ಅಪೋಲೋಗೆ ಹೋಗಿರುವುದಾಗಿ ಹೇಳಿದ್ದಾರೆ. ಅವರಿಗೆ ಅಪೋಲೊ ಆಸ್ಪತ್ರೆಯ ಸಿಇಒ ಬಳಿ ಸರ್ಕಾರದ ಪರವಾಗಿ ಮಾತಾಡಿದ್ದೇವೆ ಎಂದು ತಿಳಿಸಿದ್ದೇನೆ. ಆದಷ್ಟು ಬೇಗ ಕುಮಾರಸ್ವಾಮಿ ಗುಣಮುಖರಾಗಲಿ. ಅವರಿಗೆ ಈಗಲೂ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ.ಈ ಮಾಹಿತಿಯನ್ನು ತಾವರೆ ಖುದ್ದಾಗಿ ಹೆಚ್ ಡಿ ಕೆ ಯಿಂದ ಪಡೆದಿದ್ದು, ಅನಗತ್ಯವಾಗಿ ಈರೀತಿ ಯಾರೂ ಸಹ ಸುದ್ದಿ ಹಬ್ಬಿಸಬಾರದು ಎಂದರು.

ಇದನ್ನೂ ಓದಿ: ಎಚ್‌ಡಿ ಕುಮಾರಸ್ವಾಮಿಗೆ ಕೋವಿಡ್ ಪಾಸಿಟಿವ್ https://kannada.thebengalurulive.com/hd-kumaraswamy-contracts-with-covid19-positive/

ಇದನ್ನೂ ಓದಿ: ಕೊರೋನಾ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ https://kannada.thebengalurulive.com/manipal-hospital-says-no-bed-available-for-hd-kumaraswamy/

ಇದನ್ನೂ ಓದಿ: ಕುಮಾರಸ್ವಾಮಿಯ ನಂತರ, ಅವರ ಮಗ ನಿಖಿಲ್ ಗೆ ಕೋವಿಡ್ -19 https://kannada.thebengalurulive.com/after-kumaraswamy-son-nikhil-infected-with-covid-19/


bengaluru

LEAVE A REPLY

Please enter your comment!
Please enter your name here