Home Uncategorized Gold Bonds: ಸವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್​ಬಿಐ; ಆನ್​ಲೈನ್​ನಲ್ಲಿ ಹೀಗೆ ಖರೀದಿಸಿ

Gold Bonds: ಸವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್​ಬಿಐ; ಆನ್​ಲೈನ್​ನಲ್ಲಿ ಹೀಗೆ ಖರೀದಿಸಿ

4
0

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸವರಿನ್ ಗೋಲ್ಡ್ ಬಾಂಡ್​(Sovereign Gold Bond) ಹೊಸ ಕಂತನ್ನು ಬಿಡುಗಡೆ ಮಾಡಿದೆ. 2022-23ನೇ ಸಾಲಿನ ಈ ಕಂತಿನ ಸವರಿನ್ ಗೋಲ್ಡ್ ಬಾಂಡ್ ಅನ್ನು ಖರೀದಿಸಲು ಡಿಸೆಂಬರ್ 19ರಿಂದ ಮೊದಲ್ಗೊಂಡು 5 ದಿನಗಳ ಅವಕಾಶವಿದೆ. ಒಂದು ಗ್ರಾಂ ಚಿನ್ನಕ್ಕೆ 5,409 ರೂ.ನಂತೆ ದರ ನಿಗದಿಪಡಿಸಲಾಗಿದೆ. 2022-23ನೇ ಸಾಲಿನ ಮೂರನೇ ಕಂತು ಇದಾಗಿದ್ದು, ಆನ್​ಲೈನ್ ಮೂಲಕ ಖರೀದಿಗೆ ಆರ್​ಬಿಐ ಅವಕಾಶ ಮಾಡಿಕೊಟ್ಟಿದೆ. ಪ್ರತಿ ಗ್ರಾಂ ಚಿನ್ನಕ್ಕ 50 ರೂ.ನಂತೆ ರಿಯಾಯಿತಿ ದರದ (Discount) ಆಫರ್ ಸಹ ನೀಡಲಾಗಿದೆ. ಅಂದರೆ, ಪ್ರತಿ ಗ್ರಾಂ 5,359 ರೂ.ನಂತೆ ದೊರೆಯಲಿದೆ.

ಸವರಿನ್ ಗೋಲ್ಡ್ ಬಾಂಡ್ ಮೂಲ ಅಥವಾ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಈ ಬಾಂಡ್​ಗಳಿಗೆ ದೊರೆಯುವ ಬಡ್ಡಿಯನ್ನು ಇತರ ಮೂಲಗಳಿಂದ ದೊರೆಯುವ ಆದಾಯ ಎಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯ ನಂತರ ವಾಪಸ್ ಪಡೆಯುವುದಾದರೆ ತೆರಿಗೆ ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ: Gold Bonds: ಸವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?

ಸವರಿನ್ ಗೋಲ್ಡ್ ಬಾಂಡ್​ ಅನ್ನು ಆನ್​ಲೈನ್ ಮೂಲಕ ಖರೀದಿಸುವುದು ಹೇಗೆ? ಅದಕ್ಕಾಗಿ ಏನೇನು ಪ್ರಕ್ರಿಯೆಗಳನ್ನು ಅನುಸರಿಸಬೇಕು? ಪೂರ್ತಿ ವಿವರವನ್ನು ಇಲ್ಲಿ ನೀಡಲಾಗಿದೆ.

ಆನ್​ಲೈನ್​ನಲ್ಲಿ ನೋಂದಣಿ ಮಾಡುವುದು ಹೀಗೆ…

ಎಸ್​ಬಿಐ ನೆಟ್​ ಬ್ಯಾಂಕಿಂಗ್ ಲಾಗಿನ್ ಆಗಿ
ಮೈನ್ ಮೆನುವಿನಲ್ಲಿ ‘ಇ-ಸರ್ವೀಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
‘ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್’ ಮೇಲೆ ಕ್ಲಿಕ್ ಮಾಡಿ
ಮೊದಲ ಬಾರಿಯ ಹೂಡಿಕೆದಾರರಾದರೆ ನೀವು ನೋಂದಣಿ ಮಾಡಬೇಕು. ಇದಕ್ಕಾಗಿ ‘ರಿಜಿಸ್ಟರ್’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಹಾಗೂ ‘ಪ್ರೊಸೀಡ್’ ಕ್ಲಿಕ್ ಮಾಡಿ
ಎಲ್ಲ ವಿವರಗಳನ್ನು ನಮೂದಿಸಿ. ನಾಮನಿರ್ದೇಶನ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ
ಎನ್​ಎಸ್​ಡಿಎಲ್ ಅಥವಾ ಸಿಡಿಎಸ್​ಎಲ್ ಈ ಪೈಕಿ ನಿಮ್ಮ ಡಿಮ್ಯಾಟ್ ಖಾತೆ ಎಲ್ಲಿದೆಯೋ ಅಲ್ಲಿಂದ ಡೆಪಾಸಿಟರಿ ಪಾರ್ಟಿಸಿಪೆಂಟ್ ಅನ್ನು ಆಯ್ಕೆ ಮಾಡಿ
ಡಿಪಿ ಐಡಿ, ಕ್ಲಿಯೆಂಟ್ ಐಡಿ ನಮೂದಿಸಿ ‘ಸಬ್​ಮಿಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
ವಿವರಗಳನ್ನು ದೃಢೀಕರಿಸಿ ‘ಸಬ್​ಮಿಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಎಸ್​ಬಿಐ ಮೂಲಕ ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಖರೀದಿ ಹೇಗೆ?

ಎಸ್​ಬಿಐ ನೆಟ್​ ಬ್ಯಾಂಕಿಂಗ್ ಲಾಗಿನ್ ಆಗಿ
ಮೈನ್ ಮೆನುವಿನಲ್ಲಿ ‘ಇ-ಸರ್ವೀಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
‘ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್’ ಮೇಲೆ ಕ್ಲಿಕ್ ಮಾಡಿ
ಹೆಡರ್ ಟ್ಯಾಬ್​ನಲ್ಲಿ ‘ಪರ್ಚೇಸ್’ ಅನ್ನು ಆಯ್ಕೆ ಮಾಡಿ
‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಆಯ್ಜೆ ಮಾಡಿ ಹಾಗೂ ನಂತರ ‘ಪ್ರೊಸೀಡ್’ ಕ್ಲಿಕ್ ಮಾಡಿ
ಖರೀದಿಸಬೇಕಾದ ಪ್ರಮಾಣ ಮತ್ತು ನಾಮನಿರ್ದೇಶನದ ವಿವರ ಭರ್ತಿ ಮಾಡಿ
‘ಸಬ್​ಮಿಟ್’ ಕ್ಲಿಕ್ ಮಾಡಿ
ಒಟಿಪಿ ನಮೂದಿಸಿ ‘ಕನ್​ಫರ್ಮ್’ ಕ್ಲಿಕ್ ಮಾಡಿ
ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಸವರಿನ್ ಗೋಲ್ಡ್ ಬಾಂಡ್ ಹೂಡಿಕೆ ಕುರಿತ ಎಲ್ಲ ವಿವರಗಳು ಅದರಲ್ಲಿ ಕಾಣಿಸುತ್ತವೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here