ಬೆಂಗಳೂರು: ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ಗೆ ಹೊಸ ಸಂಖ್ಯೆಯನ್ನು ನೀಡಲಾಗಿದೆ. ಬಳ್ಳಾರಿಯಲ್ಲಿ ನಟ ದರ್ಶನ್ಗೆ 511 ಸಂಖ್ಯೆ ನೀಡಲಾಗಿದೆ. ಇದು ದರ್ಶನ್ರ ಹೊಸ ಆರೋಪಿ ಸಂಖ್ಯೆ.
ದರ್ಶನ್ ಈ ಹಿಂದೆ ಯಾವುದೇ ಸಿನಿಮಾದಲ್ಲಿ ಕೈದಿಯಾಗಿ ನಟಿಸಿದಾಗಲೂ ಕೈದಿ ಸಂಖ್ಯೆಯನ್ನು 171 ಅನ್ನು ಹಾಕಿಸಿಕೊಳ್ಳುವುದು ಅಭ್ಯಾಸವಾಗಿತ್ತು. ದರ್ಶನ್ರ ಅದೃಷ್ಟ ಸಂಖ್ಯೆ ಒಂಬತ್ತು ಆಗಿದ್ದು, 171 ಅನ್ನು ಕೂಡಿದರೆ 9 ಸಂಖ್ಯೆ ಬರುವ ಕಾರಣ ಅದೇ ಸಂಖ್ಯೆಯನ್ನು ದರ್ಶನ್ ತನ್ನ ಎಲ್ಲ ಸಿನಿಮಾಗಳಲ್ಲಿಯೂ ಬಳಸುತ್ತಿದ್ದರು. ಆದರೆ ಈಗ ಬಳ್ಳಾರಿ ಜೈಲಿನಲ್ಲಿ ಅವರಿಗೆ 511 ಸಂಖ್ಯೆ ನೀಡಲಾಗಿದೆ.
ಹೊಸ ಕೈದಿಗಳು ಯಾರೇ ಬಂದರು ಅವರಿಗೆ ಹೊಸ ಸಂಖ್ಯೆ ನೀಡುವುದು ಜೈಲಿನ ನಿಯಮ ಆಗಿರುವ ಕಾರಣ ಹಾಗೂ ಕ್ರಮ ಸಂಖ್ಯೆ ಆಧಾರದಲ್ಲಿ ಕೈದಿಗಳಿಗೆ ಸಂಖ್ಯೆ ನೀಡುವ ಕಾರಣ. ಇದೀಗ ದರ್ಶನ್ಗೆ 511 ಸಂಖ್ಯೆಯನ್ನು ನೀಡಲಾಗಿದೆ.