Home Uncategorized IND vs NZ: ಭಾರತ ಪ್ರವಾಸಕ್ಕೆ ಕಿವೀಸ್ ತಂಡ ಪ್ರಕಟ; ಏಕದಿನ ಸರಣಿಯಿಂದ ವಿಲಿಯಮ್ಸನ್ ಔಟ್!

IND vs NZ: ಭಾರತ ಪ್ರವಾಸಕ್ಕೆ ಕಿವೀಸ್ ತಂಡ ಪ್ರಕಟ; ಏಕದಿನ ಸರಣಿಯಿಂದ ವಿಲಿಯಮ್ಸನ್ ಔಟ್!

5
0

ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ (India vs New Zealand) ತಂಡ ಇಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮೊದಲು ಡಿಸೆಂಬರ್ ಅಂತ್ಯದಲ್ಲಿ ಪಾಕ್ ಪ್ರವಾಸ ಮಾಡಲ್ಲಿರುವ ಕಿವೀಸ್ ಪಡೆ ಅಲ್ಲಿ ಮೊದಲು ಟೆಸ್ಟ್ ಸರಣಿಯನ್ನು ಆಡಲಿದೆ. ಬಳಿಕ ಜನವರಿ 10 ರಿಂದ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಈ ಎರಡೂ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡಿರುವ ಕಿವೀಸ್ ಮಂಡಳಿ, ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಉಭಯ ದೇಶಗಳ ಪ್ರವಾಸಕ್ಕೆ 17 ಸದಸ್ಯರ ತಂಡವನ್ನು ಪ್ರಕಟಿಸಿರುವ ಮಂಡಳಿ ಎರಡೂ ಪ್ರವಾಸಗಳಿಗೂ ಇಬ್ಬರೂ ಬೇರೆ ಬೇರೆ ಆಟಗಾರರಿಗೆ ನಾಯಕತ್ವ ಪಟ್ಟಕಟ್ಟಿದೆ.

ಕಿವೀಸ್ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ ಅಂತ್ಯದಲ್ಲಿ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಹೋಗಲಿರುವ ನ್ಯೂಜಿಲೆಂಡ್ ತಂಡ, ನಂತರ ಜನವರಿಯಲ್ಲಿ ಅಲ್ಲಿಯೇ ಏಕದಿನ ಸರಣಿಯನ್ನು ಆಡಲಿದೆ. ಬಳಿಕ ಜನವರಿಯಲ್ಲಿಯೇ ಏಕದಿನ ಮತ್ತು ಟಿ20 ಸರಣಿಗಾಗಿ ಕಿವೀಸ್ ತಂಡ ಭಾರತಕ್ಕೆ ಬರಲಿದೆ. ಆದರೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಕಿವೀಸ್ ಖಾಯಂ ನಾಯಕ ವಿಲಿಯಮ್ಸನ್, ಪಾಕಿಸ್ತಾನದಿಂದ ತಮ್ಮ ದೇಶಕ್ಕೆ ಹಿಂತಿರುಗಲಿದ್ದು, ಭಾರತದಲ್ಲಿ ನಡೆಯುವ ಏಕದಿನ ಸರಣಿಗೆ ಗೈರಾಗಲಿದ್ದಾರೆ.

2. ವಿಲಿಯಮ್ಸನ್-ಸೌದಿ ಭಾರತಕ್ಕೆ ಬರುವುದಿಲ್ಲ

ವಿಲಿಯಮ್ಸನ್ ಅವರ ಕೆಲಸದ ಹೊರೆ ನಿರ್ವಹಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿಲಿಯಮ್ಸನ್ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮಾತ್ರ ತಂಡದ ನಾಯಕತ್ವ ವಹಿಸಲಿದ್ದು, ಅಲ್ಲಿಂದ ತವರಿಗೆ ಮರಳಲಿದ್ದಾರೆ. ಅವರ ಸ್ಥಾನದಲ್ಲಿ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಾಮ್ ಲ್ಯಾಥಮ್ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿಗಾಗಿ ಕಿವೀಸ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ  

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಮುಂದಿನ ವರ್ಷ ಅಂದರೆ 2023ರ ಜನವರಿ 18ರಿಂದ ಪ್ರಾರಂಭವಾಗಲಿದೆ. ಇದರ ನಂತರ, 3 ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಾಗುತ್ತದೆ.

ವಿಲಿಯಮ್ಸನ್ ಮಾತ್ರವಲ್ಲದೆ ಟೆಸ್ಟ್ ತಂಡದ ನೂತನ ನಾಯಕ ಹಾಗೂ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಕೂಡ ಪಾಕಿಸ್ತಾನ ಪ್ರವಾಸ ಮುಗಿಸಿ ವಾಪಸಾಗಲಿದ್ದು, ಅವರೂ ಕೂಡ ಭಾರತಕ್ಕೆ ಬರುವುದಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೇಡ್ ಕೂಡ ಭಾರತ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದಾರೆ. ಅವರ ಸ್ಥಾನದಲ್ಲಿ ಲ್ಯೂಕ್ ರೊಂಚಿ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3. ಈ ಆಟಗಾರರಿಗೆ ಅವಕಾಶ

ಭಾರತ ಪ್ರವಾಸಕ್ಕಾಗಿ ಏಕದಿನ ಸರಣಿಯಲ್ಲಿ ವಿಲಿಯಮ್ಸನ್ ಮತ್ತು ಸೌಥಿ ಬದಲಿಗೆ ಮಾರ್ಕ್ ಚಾಪ್ಮನ್ ಮತ್ತು ಜಾಕೋಬ್ ಡಫಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದೇ ಸಮಯದಲ್ಲಿ, ಆಲ್ ರೌಂಡರ್ ಹೆನ್ರಿ ಶಿಪ್ಲಿಗೆ ಕಿವೀ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಕೈಲ್ ಜೇಮಿಸನ್ ಬೆನ್ನುನೋವಿನಿಂದ ಇನ್ನೂ ಚೇತರಿಸಿಕೊಂಡಿಲ್ಲದ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತ ಲೆಗ್ ಸ್ಪಿನ್ನರ್ ಇಶ್ ಸೋಧಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರ ಹೊರತಾಗಿ ಎಡಗೈ ಬ್ಯಾಟ್ಸ್‌ಮನ್ ಮಾರ್ಕ್ ನಿಕೋಲ್ಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Squad News | The ODI Series against Pakistan starts on the 10th of January in Karachi with the first match against India on the 18th in Hyderabad. More | https://t.co/I20Xhe1t7Z #PAKvNZ #INDvNZ pic.twitter.com/JZbP5VSPOK

— BLACKCAPS (@BLACKCAPS) December 18, 2022

4. ನ್ಯೂಜಿಲೆಂಡ್ ಏಕದಿನ ತಂಡ

ಕೇನ್ ವಿಲಿಯಮ್ಸನ್ (ನಾಯಕ – ಪಾಕಿಸ್ತಾನ ಪ್ರವಾಸ), ಟಾಮ್ ಲ್ಯಾಥಮ್ (ಕ್ಯಾಪ್ಟನ್ – ಭಾರತ ಪ್ರವಾಸ), ಟಿಮ್ ಸೌಥಿ (ನಾಯಕ- ಪಾಕಿಸ್ತಾನ ಪ್ರವಾಸ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಜಿ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಮಾರ್ಕ್ ಚಾಪ್ಮನ್ (ಭಾರತ ಪ್ರವಾಸ) ಮತ್ತು ಜಾಕೋಬ್ ಡಫ್ಫಿ (ಭಾರತ ಪ್ರವಾಸ)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here