Home ಬೆಂಗಳೂರು ನಗರ ಭಾರತೀಯ ಸಂಸ್ಕೃತಿ ವಿಶ್ವಶಾಂತಿ ಸ್ಥಾಪನೆಗೆ ಸಹಕಾರಿ: ರಾಜ್ಯಪಾಲ

ಭಾರತೀಯ ಸಂಸ್ಕೃತಿ ವಿಶ್ವಶಾಂತಿ ಸ್ಥಾಪನೆಗೆ ಸಹಕಾರಿ: ರಾಜ್ಯಪಾಲ

14
0
Indian culture contributes to world peace Karnataka Governor
bengaluru

ಬೆಂಗಳೂರು:

ಭಾರತೀಯ ಸಂಸ್ಕೃತಿಯು ಯಾವಾಗಲೂ ಲೋಕಕಲ್ಯಾಣ ಮತ್ತು ವಿಶ್ವಶಾಂತಿಯ ಮಾತನ್ನು ಪ್ರೇರೇಪಿಸುತ್ತದೆ. ವಸುಧೈವ ಕುಟುಂಬಕಂ (ವಿಶ್ವವೇ ಕುಟುಂಬ), ಸರ್ವೇ ಭವಂತು ಸುಖಿನೋ ಎಂಬ ಚಿಂತನೆ ಮತ್ತು ತತ್ವಗಳು ವಿಶ್ವಶಾಂತಿಯನ್ನು ಸ್ಥಾಪಿಸಲು ಮತ್ತು ಲೋಕಕಲ್ಯಾಣಕ್ಕೆ ಸಹಾಯ ಮಾಡಲಿದೆ ಎಂದು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೊಟ್ ಅವರು ಅಭಿಪ್ರಾಯಪಟ್ಟರು.

ಶ್ರೀ ಸಿವಂಚಿ ಓಸ್ವಾಲ್ ಜೈನ ಸಂಘ ಸಮಿತಿಯು ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಸಿವಾಂಚಿ ಪ್ರದೇಶದ ಅನೇಕ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಯಶಸ್ವಿಯಾಗಿ ವ್ಯಾಪಾರ ಮಾಡುತ್ತಿವೆ ಎಂದು ತಿಳಿದು ಸಂತೋಷವಾಗಿದೆ. ಸಿವಂಚಿ ಓಸ್ವಾಲ್ ಜೈನ ಸಮಾಜವು ವ್ಯಾಪಾರ, ಕೈಗಾರಿಕಾ ಕೆಲಸಗಳ ಜೊತೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸ ಮತ್ತು ಮಾನವೀಯ ಸೇವೆ, ಲೋಕೋಪಕಾರವನ್ನು ಮಾಡುವಲ್ಲಿ ಯಾವಾಗಲೂ ಪ್ರವರ್ತಕವಾಗಿದೆ ಎಂದರು.

bengaluru
Indian culture contributes to world peace Karnataka Governor

ಈ ಸಮಾಜವು ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಸ್ವಯಂ ವ್ಯಾಪಾರಕ್ಕಾಗಿ ಮುಂದೆ ಬರುವ ಮೂಲಕ ಅವರಿಗೆ ಸಹಾಯ ಮಾಡಿದೆ. ಅಲ್ಲದೇ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಸಮಾಜದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ, ಶ್ರೀ ಶಿವಂಚಿ ಓಸ್ವಾಲ್ ಜೈನ್ ಸಂಘವು ಮಾನವೀಯತೆಯಿಂದ ಸಹಕರಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಇಂತಹ ಘಟನೆಗಳು ಪರಸ್ಪರ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ನಾನು ನಂಬುತ್ತೇನೆ ಎಂದರು.

ಸಮಾರಂಭದಲ್ಲಿ  ಶ್ರೀ ಸಿವಂಚಿ ಓಸ್ವಾಲ್ ಜೈನ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಜೈನ್ ಎಸ್, ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಸಲೇಚಾ , ಶ್ರೀ ಬಾಬುಲಾಲ್ ಮೆಹ್ತಾ ಮತ್ತು ಶ್ರೀ ದಿನೇಶ್ ಸೋಲಂಕಿ, ಶ್ರೀ ಪ್ರಕಾಶಕರನ್ ಮೆಹ್ತಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here