ಒಟ್ಟಪಾಲಂನಲ್ಲಿ ಇಂಟರ್ಸಿಟಿ ನಿಲುಗಡೆ; ಯಶವಂತಪುರ ಸಮಯ ಪರಿಷ್ಕರಣೆ
ಬೆಂಗಳೂರು: ಕೆಎಸ್ಆರ್ ಬೆಂಗಳೂರು–ಎರ್ನಾಕುಲಂ ದೈನಂದಿನ ಇಂಟರ್ಸಿಟಿ ಎಕ್ಸ್ಪ್ರೆಸ್ಗೆ ಒಟ್ಟಪಾಲಂನಲ್ಲಿ ಪ್ರಾಯೋಗಿಕ ನಿಲುಗಡೆ ನೀಡಲಾಗಿದ್ದು, ಇನ್ನೆರಡು ರೈಲುಗಳ ಯಶವಂತಪುರ ಸಮಯವನ್ನು ನೈಋತ್ಯ ರೈಲ್ವೆ ಪರಿಷ್ಕರಿಸಿದೆ.
ಅಕ್ಟೋಬರ್ 15ರಿಂದ ರೈಲು ಸಂಖ್ಯೆ 16377 ಒಟ್ಟಪಾಲಂಗೆ ಮಧ್ಯಾಹ್ನ 2.30ಕ್ಕೆ ಬಂದು 2.31ಕ್ಕೆ ಹೊರಡಲಿದೆ. ವಿರುದ್ಧ ದಿಕ್ಕಿನ ರೈಲು ಸಂಖ್ಯೆ 16378 ಬೆಳಿಗ್ಗೆ 10.59ಕ್ಕೆ ಬಂದು 11ಕ್ಕೆ ಹೊರಡಲಿದೆ.
ಅಕ್ಟೋಬರ್ 20ರಿಂದ ರೈಲು ಸಂಖ್ಯೆ 16596 ಕಾರವಾರ–ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ಯಶವಂತಪುರಕ್ಕೆ ಬೆಳಿಗ್ಗೆ 6.48ಕ್ಕೆ ಬಂದು 6.50ಕ್ಕೆ ಹೊರಡಲಿದೆ. ಹಿಂದಿನ ಸಮಯ ಬೆಳಿಗ್ಗೆ 6.23 ಮತ್ತು 6.25 ಆಗಿತ್ತು.
ರೈಲು ಸಂಖ್ಯೆ 16536 ಪಂಢರಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್ಪ್ರೆಸ್ ಯಶವಂತಪುರಕ್ಕೆ ಬೆಳಿಗ್ಗೆ 7.13ಕ್ಕೆ ಬಂದು 7.15ಕ್ಕೆ ಹೊರಡಲಿದೆ. ಹಿಂದಿನ ಸಮಯ ಬೆಳಿಗ್ಗೆ 6.48 ಮತ್ತು 6.50 ಆಗಿತ್ತು.
