Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ರಾಜಕೀಯ
  • ನುಡಿದಂತೆ ನಡೆಯುವುದು ನಮ್ಮ ಸಂಸ್ಕಾರ-ಜನಪರ ಯೋಜನೆಗಳನ್ನು ಗೇಲಿ ಮಾಡುವುದು ಬಿಜೆಪಿ ಸಂಸ್ಕಾರ
  • ರಾಜಕೀಯ

ನುಡಿದಂತೆ ನಡೆಯುವುದು ನಮ್ಮ ಸಂಸ್ಕಾರ-ಜನಪರ ಯೋಜನೆಗಳನ್ನು ಗೇಲಿ ಮಾಡುವುದು ಬಿಜೆಪಿ ಸಂಸ್ಕಾರ

Vighnesh Pawar June 11, 2023 3:30 PM 1 minute read
It is a tradition of BJP to make fun of our sanskara-popular plans to follow what is said

It is a tradition of BJP to make fun of our sanskara-popular plans to follow what is said

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಕನ್ನಡ ನಾಡಿನ 41 ಲಕ್ಷದ 86 ಸಾವಿರ ಮಹಿಳೆಯರು ಶೇ95 ರಷ್ಟು ಬಸ್ ಗಳಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಆರಂಭಿಸಿದ್ದಾರೆ

ಧರ್ಮ, ಜಾತಿ, ಅಂತಸ್ತಿನ ಮಿತಿ ಇಲ್ಲದೆ ಎಲ್ಲರೂ ಶಕ್ತಿ ಯೋಜನೆಯ ಅನುಕೂಲ ಪಡೆಯಲು ಶುರು ಮಾಡಿದ್ದಾರೆ

ಬಡವರು, ಮಧ್ಯಮವರ್ಗದವರ ಜೇಬಿನಲ್ಲಿ ಹಣ ಇದ್ದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ

ಬೆಂಗಳೂರು:

ಬಡವರ, ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ. ಶ್ರೀಮಂತರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆಗೆ ಅಷ್ಟು ಲಾಭ ಆಗುವುದಿಲ್ಲ. ಆದ್ದರಿಂದ ನಾವು ಬಡವರು, ಮಧ್ಯಮ ವರ್ಗದವರ ಜೇಬಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಸರ್ಕಾರದ ಮಹತ್ವದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಬಳಿಕ ವಿಧಾನಸೌಧದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬರೀ ಶ್ರೀಮಂತರ ಹಿತ ಕಾಯುವ ಬಿಜೆಪಿ ಯವರಿಗೆ ನಮ್ಮ ಕಾಳಜಿ ಸಹಿಸಲು ಆಗುತ್ತಿಲ್ಲ. ನಮ್ಮ ಗುರಿ ಜನರ ಸಂಕಷ್ಟ ತಗ್ಗಿಸುವುದು. ಪ್ರಮಾಣವಚನ ಸ್ವೀಕರಿಸಿ ಕೇವಲ 20 ದಿನಗಳಲ್ಲಿ ಮೊದಲ ಗ್ಯಾರಂಟಿ ಜಾರಿಯಾಗಿ ನಾಡಿನ ಸಮಸ್ತ ಮಹಿಳೆಯರು ಇದರ ಅನುಕೂಲ ಪಡೆಯಲು ಶುರು ಮಾಡಿದ್ದಾರೆ. ಇಡಿ ರಾಜ್ಯದಲ್ಲಿ ಏಕ ಕಾಲಕ್ಕೆ ಶಕ್ತಿ ಯೋಜನೆ ಜಾರಿ ಆಗಿದೆ.

ಈ 20 ದಿನಗಳಲ್ಲಿ ಬಿಜೆಪಿ ಪರಿವಾರ ಸುಳ್ಳಿನ ಮಹಾಪೂರವನ್ನೇ ಹರಿಸಿತು. ನಾವು ವಿಚಲಿತರಾಗಲಿಲ್ಲ. ನಮ್ಮ ಗುರಿ “ನುಡಿದಂತೆ ನಡೆಯುವುದಾಗಿತ್ತು”. ಅದನ್ನು ಮಾಡಿದ್ದೇವೆ. ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ಯೋಜನೆಗೆ “ಶಕ್ತಿ” ಎಂದು ಹೆಸರಿಡಲಾಗಿದೆ. ದೇಶದ ಅರ್ಧದಷ್ಟಿರುವ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲುದಾರರಾಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಭಾರತದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಕಡಿಮೆ ಆಗಿದೆ. ಈ ಪ್ರಮಾಣ ಹೆಚ್ಚಾಗಬೇಕು ಎಂದರು.

ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರ ಅನುಕೂಲ ಮಾಡಿದರೆ ಬಿಜೆಪಿಯವರು ಸುಳ್ಳುಗಳ ಮೂಲಕ ಗುಲ್ಲೆಬ್ಬಿಸಿ ಗೊಂದಲ ಸೃಷ್ಟಿಸುತ್ತಾರೆ. ಮಾಧ್ಯಮದವರು ಬಿಜೆಪಿಯವರ ಜತೆ ಸೇರಿ ಗೊಂದಲ ಹೆಚ್ಚಿಸಬಾರದು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಶಿಫಾರಸ್ಸಿನಂತೆ ಮೊನ್ನೆ ವಿದ್ಯುತ್ ದರ ಹೆಚ್ಚಳವಾಗಿದೆ. ಆದರೆ, ನಾವೇ ವಿದ್ಯುತ್ ದರ ಹೆಚ್ಚಿಸಿದೆವು ಎನ್ನುವ ಪರಮ ಸುಳ್ಳನ್ನು ಬಿಜೆಪಿ ಪರಿವಾರ ಹರಡಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಟೀಕಿಸಿದರು.

ಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಪರಿಷತ್ ಸದಸ್ಯ ನಾಗರಾಜ ಯಾದವ್, ಕಾಂಗ್ರೆಸ್ ಮುಖಂಡರಾದ ರೇವಣ್ಣ, ಯು.ಬಿ.ವೆಂಕಟೇಶ್ ಸೇರಿ ಇತರರು ಉಪಸ್ಥಿತರಿದ್ದರು.

About the Author

Vighnesh Pawar

Subscriber

View All Posts

Post navigation

Previous: ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ ಉದ್ಘಾಟಿಸಿದ ಮುಖ್ಯಮಂತ್ರಿಗಳು
Next: BBMP Reimagine: ಬೆಂಗಳೂರನ್ನು ಮರುರೂಪಿಸಲು ತ್ರಿಸದಸ್ಯ ಸಮಿತಿ ಮರುರಚನೆ

Related Stories

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

The Bengaluru Live November 24, 2026 7:39 PM
ಜಪಾನ್ ಪ್ರವಾಸದ ವೇಳೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಜಪಾನ್‌ನಿಂದಲೇ ವಿಡಿಯೋ ಕರೆ: ಪ್ರತಿಭಟನೆ ಕೈಬಿಡಿ, ಅಧಿವೇಶನದವರೆಗೆ ಸಮಯ ಕೊಡಿ ಎಂದು ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ

The Bengaluru Live November 24, 2026 1:19 PM

Latest Post

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ ನವೆಂಬರ್ ಪಡಿತರ ವಿತರಣೆಯ ತೊಂದರೆಗಳ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನವೆಂಬರ್ 26ರ ಟಿಪ್ಪಣಿಯ ಮೊದಲ ಪುಟ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

November 26, 2026 1:05 PM
ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

November 26, 2026 11:33 AM
ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ ವಿಧಾನಸೌಧದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ

November 26, 2026 10:43 AM
ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ ಏರೋ ಇಂಡಿಯಾ ಪ್ರದರ್ಶನ ಸ್ಥಳದಲ್ಲಿ ಏರೋ ಇಂಡಿಯಾ ಲಾಂಛನದ ಚೀಲಗಳು ಮತ್ತು ರಾಷ್ಟ್ರಧ್ವಜಗಳು
  • ಬೆಂಗಳೂರು ನಗರ

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ

November 25, 2026 10:03 PM
ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಉದ್ಘಾಟನೆಯಲ್ಲಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

November 25, 2026 9:46 PM
ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಲೋಪವಾಗಿಲ್ಲ: ಕೆಇಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಲೋಪವಾಗಿಲ್ಲ: ಕೆಇಎ

November 25, 2026 9:44 PM

ನೀವು ತಪ್ಪಿಸಿಕೊಂಡಿರಬಹುದು

ನವೆಂಬರ್ ಪಡಿತರ ವಿತರಣೆಯ ತೊಂದರೆಗಳ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನವೆಂಬರ್ 26ರ ಟಿಪ್ಪಣಿಯ ಮೊದಲ ಪುಟ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

The Bengaluru Live November 26, 2026 1:05 PM
ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

The Bengaluru Live November 26, 2026 11:33 AM
ವಿಧಾನಸೌಧದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ

The Bengaluru Live November 26, 2026 10:43 AM
ಏರೋ ಇಂಡಿಯಾ ಪ್ರದರ್ಶನ ಸ್ಥಳದಲ್ಲಿ ಏರೋ ಇಂಡಿಯಾ ಲಾಂಛನದ ಚೀಲಗಳು ಮತ್ತು ರಾಷ್ಟ್ರಧ್ವಜಗಳು
  • ಬೆಂಗಳೂರು ನಗರ

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ

The Bengaluru Live November 25, 2026 10:03 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ
  • ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ
  • ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ
  • ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ
©Copyright 2025 The Bengaluru Live All rights reserved. | MoreNews by AF themes.