ಬೆಂಗಳೂರು:
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
2007ರಿಂದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿಎನ್ ಮಂಜುನಾಥ್ ಅವರ ಅಧಿಕಾರ ಅವಧಿ ಕಳೆದ ವರ್ಷವೇ ಮುಕ್ತಾಯವಾಗಿತ್ತು. ಆದರೆ ರೋಗಿಗಳು ಮತ್ತು ಸಿಬ್ಬಂದಿ ಒತ್ತಾಯದ ಮೇರೆಗೆ ಈ ಹಿಂದಿನ ಬಿಜೆಪಿ ಸರ್ಕಾರ ಮಂಜುನಾಥ್ ಅವರ ಅವಧಿಯನ್ನು 1 ವರ್ಷ ವಿಸ್ತರಣೆ ಮಾಡಿತ್ತು ಮತ್ತು ಜುಲೈ 19ಕ್ಕೆ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಮುಕ್ತಾಯಗೊಳ್ಳಲಿತ್ತು.
ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಲಬುರಗಿ ಜಯದೇವ ಆಸ್ಪತ್ರೆಯ ಕೆಲಸ ಜವಾಬ್ದಾರಿ ಹಿನ್ನಲೆಯಲ್ಲಿ ಜನವರಿ ತಿಂಗಳವರೆಗೆ ಡಾ.ಸಿಎನ್ ಮಂಜುನಾಥ್ ಅವರನ್ನು ನಿರ್ದೇಶಕರಾಗಿ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಡಾ.ಮಂಜುನಾಥ್ ಅವರು ಕಳೆದ 16 ವರ್ಷಗಳಿಂದ ನಿರ್ದೇಶಕರಾಗಿದ್ದಾರೆ. ಅವರು ನಿವೃತ್ತರಾದ ಬಳಿಕವೂ ಹಲವು ವರ್ಷಗಳಿಂದ ಅವನರನ್ನೇ ನಿರ್ದೇಶಕ ಹುದ್ದೆಯಲ್ಲಿ ವಿವಿಧ ಸರ್ಕಾರಗಳು ಮುಂದುವರೆಸುತ