Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ವರ್ಗಾವಣೆ ದಂಧೆಯಲ್ಲಿ ₹1000 ಕೋಟಿ ವ್ಯವಹಾರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ
  • ಬೆಂಗಳೂರು ನಗರ

ವರ್ಗಾವಣೆ ದಂಧೆಯಲ್ಲಿ ₹1000 ಕೋಟಿ ವ್ಯವಹಾರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

Vighnesh Pawar August 5, 2023 6:00 PM
Karnataka: ₹1000 crore transaction in transfer racket: Ex-CM HD Kumaraswamy

Karnataka: ₹1000 crore transaction in transfer racket: Ex-CM HD Kumaraswamy

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಕೇರಳ ಘಟನೆ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿ

ಬೆಂಗಳೂರು:

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ವ್ಯವಹಾರದಲ್ಲಿ 1000 ಕೋಟಿ ರೂಪಾಯಿಗೂ ಮೀರಿ ಬಿಸ್ನೆಸ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆಯ ಬಗ್ಗೆ ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಈ ಸರಕಾರ ಲೆಕ್ಕಕ್ಕೆ ಇಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ದಿನದಿಂದ ದಿನಕ್ಕೆ ಅದರ ಅವ್ಯವಹಾರ ಮೇರೆ ಮೀರುತ್ತದೆ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ದಂಧೆಯಲ್ಲಿ 1000 ಕೋಟಿಗೂ ಮೀರಿ ಕೈ ಬದಲಾಗಿದೆ ಎಂದು ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಈ ಸರಕಾರ ಪ್ರತಿಯೊಂದು ಹುದ್ದೆಯನ್ನು ಮಾರಿಕೊಳ್ಳುತ್ತಿದೆ. ಪ್ರತಿ ಹುದ್ದೆಗೂ ಹಣ ಪಡೆದು ವರ್ಗಾವಣೆ ಮಾಡುತ್ತಿದೆ. ನಾನು ಹೇಳಿರುವಂತೆ ವೈ ಟಿ ಟ್ಯಾಕ್ಸ್ ನ ವೈಎಸ್ ಅಂದರೆ ಏನು ಎಂದು ಪತ್ತೆ ಮಾಡಿದರೆ, ಆ ಬಗ್ಗೆ ತನಿಖೆ ಮಾಡಿದರೆ ಈ ಸರಕಾರದ ಬುಡ ಅಲ್ಲಾಡುತ್ತದೆ ಎಂದರು ಅವರು.

ಒಂದೊಂದು ಫೋಸ್ಟ್ ಗೆ ಮೂರು ಮೂರು ಅಧಿಕಾರಿಗಳ‌ ನಿಯೋಜನೆ ಆಗಿದ್ದಾರೆ. ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಯ ಅಡಿ ಟಿಪ್ಪಣಿಗಳು ಹಾದಿಬೀದಿಯಲ್ಲಿ ಬಿಕರಿ ಆಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಮಂತ್ರಿಗೆ ಜೀವನ ಕಳೆಯುವಷ್ಟು ಹಣ ಇದೆ. ಐದಾರು ಜನ್ನಕ್ಕೆ ಆಗುವಷ್ಟು ಸಂಪತ್ತು ಇದೆ. ಆದರೆ ಆ ಸಚಿವ ಸಣ್ಣಸಣ್ಣ ಪೋಸ್ಟಿಗೂ 10 ರಿಂದ 15 ಲಕ್ಷ ಹಣ ಕೇಳ್ತಾ ಇದ್ದಾನೆ. ಇದಕ್ಕಿಂತ ಹೇಸಿಗೆಯ ವಿಷಯ ಬೇರೆ ಇದೆಯಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಡಾ.ಜಿ.ಪರಮೇಶ್ವರ್ ಅವರಿಗೆ ತಿರುಗೇಟು:

ವರ್ಗಾವಣೆ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ. ಇಡೀ ದೇಶದಲ್ಲಿ ಕರ್ನಾಟಕದ ಮಾನ ಮರ್ಯಾದೆ ಬೀದಿ ಬೀದಿಯಲ್ಲಿ ಹರಾಜಾಗುತ್ತಿದೆ ಎಂದ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ತಮ್ಮ ನೇತೃತ್ವದ ಮೈತ್ರಿ ಸರಕಾರದಲ್ಲಿ ಗೃಹ ಸಚಿವರೂ ಆಗಿದ್ದ ಪರಮೇಶ್ವರ್ ಅವರಿಗೆ ನಾನು ವರ್ಗಾವಣೆ ವಿಷಯದಲ್ಲಿ ಸಲಹೆ ಕೊಟ್ಟಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ನಾನು ಏನು ಸಲಹೆ ಕೊಟ್ಟಿದ್ದೀನಿ ಎಂದು ಅವರು ಜನರ ಮುಂದೆ ಬಂದು ಹೇಳಲಿ. ಪೊಲೀಸ್ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪ ಇತ್ತಾ? ನೀವು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿ ವರ್ಗ ಮಾಡಿದ್ದು, ಅಲ್ಲವೇ? ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಯಿತಾ? ಅಲ್ಲಿ ನಡೆದ ಅವಾಂತರಕ್ಕೆ ಯಾರು ಕಾರಣ? ಪರಮೇಶ್ವರ್ ಹೇಳಬಹುದು, ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ನುಡಿದರು.

ಗೃಹ ಸಚಿವರು ನನ್ನ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಕೇರಳದಲ್ಲಿ ನಿಮ್ಮ ಇಲಾಖೆಯ ಮಾನ ಮೂರಾಬಟ್ಟೆ ಆಗಿದೆ. ಕೇರಳಕ್ಕೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸ್ಕೊಂಡು ಬಂದ್ರಲ್ಲಾ? ಯಾವ ರೀತಿ ಆಡಳಿತ ಇದೆ ಎನ್ನುವುದಕ್ಕೆ ಈ ಉದಾಹರಣೆ ಸಾಕಲ್ಲವೇ? ಎಂದು ಪರಮೇಶ್ವರ್ ಅವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ.ಶರವಣ, ಮಾಜಿ ಸದಸ್ಯರಾದ ಶ್ರೀ ಚೌಡರೆಡ್ಡಿ ತೂಪಲ್ಲಿ, ಪಕ್ಷದ ನಗರ ಘಟಕದ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರಮೇಶ್ ಗೌಡ ಈ ಸಂದರ್ಭದಲ್ಲಿ ನನ್ನ ಜತೆಯಲ್ಲಿ ಇದ್ದರು.

About the Author

Vighnesh Pawar

Subscriber

View All Posts

Post navigation

Previous: ಕರ್ನಾಟಕದಲ್ಲಿ ಕರ್ನಾಟಕ ಮಾದರಿ ಪ್ರಾರಂಭ ಮಾಡುತ್ತೇವೆ
Next: Chikodi: ಚಿಕ್ಕೋಡಿ ಜೈನ ಮುನಿ ಹತ್ಯೆ ಪ್ರಕರಣ: ಸಿಐಡಿ ಡಿಜಿಪಿ ಎಂ.ಎ.ಸಲೀಮ್‌ ಭೇಟಿ

Related Stories

ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

The Bengaluru Live November 26, 2026 11:33 AM
ವಿಧಾನಸೌಧದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ

The Bengaluru Live November 26, 2026 10:43 AM
ಏರೋ ಇಂಡಿಯಾ ಪ್ರದರ್ಶನ ಸ್ಥಳದಲ್ಲಿ ಏರೋ ಇಂಡಿಯಾ ಲಾಂಛನದ ಚೀಲಗಳು ಮತ್ತು ರಾಷ್ಟ್ರಧ್ವಜಗಳು
  • ಬೆಂಗಳೂರು ನಗರ

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ

The Bengaluru Live November 25, 2026 10:03 PM

Latest Post

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

November 26, 2026 2:03 PM
ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಪಡಿತರ ವಿತರಣೆಯ ಪ್ರಾತಿನಿಧಿಕ ಎಐ ಚಿತ್ರ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

November 26, 2026 1:05 PM
ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಮಾರ್ಚ್ ಬ್ಯಾನರ್ ಹಿಡಿದು ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕರು
  • ಕರ್ನಾಟಕ

ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

November 26, 2026 11:55 AM
ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

November 26, 2026 11:33 AM
ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ ವಿಧಾನಸೌಧದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ

November 26, 2026 10:43 AM
ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ ಏರೋ ಇಂಡಿಯಾ ಪ್ರದರ್ಶನ ಸ್ಥಳದಲ್ಲಿ ಏರೋ ಇಂಡಿಯಾ ಲಾಂಛನದ ಚೀಲಗಳು ಮತ್ತು ರಾಷ್ಟ್ರಧ್ವಜಗಳು
  • ಬೆಂಗಳೂರು ನಗರ

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ

November 25, 2026 10:03 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

The Bengaluru Live November 26, 2026 2:03 PM
ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಪಡಿತರ ವಿತರಣೆಯ ಪ್ರಾತಿನಿಧಿಕ ಎಐ ಚಿತ್ರ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

The Bengaluru Live November 26, 2026 1:05 PM
ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಮಾರ್ಚ್ ಬ್ಯಾನರ್ ಹಿಡಿದು ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕರು
  • ಕರ್ನಾಟಕ

ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

The Bengaluru Live November 26, 2026 11:55 AM
ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

The Bengaluru Live November 26, 2026 11:33 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ
  • ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ
  • ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ
©Copyright 2025 The Bengaluru Live All rights reserved. | MoreNews by AF themes.