
ಹೊಸಪೇಟೆ (ವಿಜಯನಗರ):
ಕರ್ನಾಟಕ ಎಂದು ನಾಮಕರಣ ಗೊಂಡು 50 ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜಿಸಲಾಗಿರುವ ‘ ಕರ್ನಾಟಕ ಸಂಭ್ರಮ -50’ ಯಶಸ್ವಿ ಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಜತೆ ನವೆಂಬರ್ 2 ರಂದು ಕಾರ್ಯಕ್ರಮ ನಡೆಯಲಿರುವ ಹಂಪಿ ದೇವಾಲಯ ಆವರಣ ಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಸಭೆ ನಡೆಸಿ, ಇದೊಂದು ಮಹತ್ವ ದ ಕಾರ್ಯಕ್ರಮ. ಎಲ್ಲರೂ ಜತೆಗೂಡಿ ಅರ್ಥ ಪೂರ್ಣ ವಾಗಿ ಆಚರಿಸಬೇಕು ಎಂದು ಹೇಳಿದರು.
ಒಂದು ವರ್ಷ ಕಾಲ ನಿರಂತರವಾಗಿ ಆಚರಿಸುತ್ತಿರುವ ಈ ಹೆಮ್ಮೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದು, ಎರಡನೇ ಬಾರಿ ಮುಖ್ಯಮಂತ್ರಿ ಆದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿ ಅವರಿಗೆ ಗೌರವ ಸನ್ಮಾನ ನೀಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸಂಭ್ರಮ ಸಂದರ್ಭಕ್ಕೆ ಸಾಕ್ಷಿ ಆಗುತ್ತಿರುವುದು ನಮ್ಮ ಪುಣ್ಯ. ನಾವೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಹೇಳಿದರು.
ಇದನ್ನು ನಮ್ಮ ಕಾರ್ಯಕ್ರಮ, ಪ್ರತಿಯೊಬ್ಬ ಕನ್ನಡಿಗರ ಕಾರ್ಯಕ್ರಮದಂತೆ ಹಬ್ಬದ ವಾತಾವರಣದಲ್ಲಿ ಮಾಡಬೇಕು. ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕರ್ನಾಟಕ ಸಂಭ್ರಮ 1973 ರ ಇತಿಹಾಸ ಹಂಪಿಯಲ್ಲಿ ಮತ್ತೆ ಮರುಕಳಿಸುವಂತೆ ಮಾಡಬೇಕು ಎಂದು ಹೇಳಿದರು.
ನವೆಂಬರ್ 2 ರಂದು ಹಂಪಿಯ ವಿರೂ ಪಕ್ಷ ದೇವಾಲಯ ಎದುರು ಬಸವಣ್ಣ ಮಂಟಪ ಪಕ್ಕ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಅಂದು ಕನ್ನಡ ಜ್ಯೋತಿ ಯನ್ನು ಹೊತ್ತ ಕನ್ನಡ ರಥ ಹಂಪಿ ಯಿಂದ ಕೊಪ್ಪಳ ಮಾರ್ಗ ವಾಗಿ ಗದಗ ತಲುಪಲಿದ್ದು ಸರ್ಕಾರಿ ಶಿಷ್ಟ ಚಾರ ದೊಂದಿಗೆ ತಲುಪಿಸಬೇಕು ಎಂದು ತಿಳಿಸಿದರು.
ಶಾಸಕರಾದ ಗವಿಯಪ್ಪ, ಗಣೇಶ್, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು ಉಪಸ್ಥಿತರಿದ್ದರು.