Karnataka Bhavan construction at Ayodhya once land is allotted: Karnataka Minister Ramalinga Reddy| ಭೂಮಿ ಮಂಜೂರು ಮಾಡಿದ ನಂತರ ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣ: ಕರ್ನಾಟಕ ಸಚಿವ ರಾಮಲಿಂಗಾ ರೆಡ್ಡಿ
ಕಲಬುರಗಿ:
ಅಯೋಧ್ಯೆಯಲ್ಲಿ (Ayodhya) ಕರ್ನಾಟಕ ಭವನ (Karnataka Bhavan) ಕಟ್ಟಲು ನಾಲ್ಕು ಎಕರೆ ಭೂಮಿ ಕೊಡುವಂತೆ ಯುಪಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಅಂತ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ರಾಮಲಿಂಗಾ ರೆಡ್ಡಿ ಈ ಹಿಂದೆ ಬೊಮ್ಮಾಯಿ ಸಹ ಪತ್ರ ಬರೆದಿದ್ದರು. ನಾನೂ ಸಹ ಪತ್ರ ಬರೆದಿರುವೆ. ಭೂಮಿ ಕೊಟ್ಟ ನಂತ್ರ ಕಟ್ಟಡದ ಬ್ಲೂಪ್ರಿಂಟ್ ರೆಡಿ ಮಾಡ್ತೇವೆ ಎಂದು ಅವರು ಹೇಳಿದರು.
