Home ಬೆಂಗಳೂರು ನಗರ ನಾಡಿನ ನೆಲ-ಜಲ ರಕ್ಷಣೆಗೆ ಸರಕಾರ ಬದ್ಧ; ಬಂದ್ ಆಚರಣೆ ಬೇಡ: ಅಶ್ವತ್ಥನಾರಾಯಣ ಮನವಿ

ನಾಡಿನ ನೆಲ-ಜಲ ರಕ್ಷಣೆಗೆ ಸರಕಾರ ಬದ್ಧ; ಬಂದ್ ಆಚರಣೆ ಬೇಡ: ಅಶ್ವತ್ಥನಾರಾಯಣ ಮನವಿ

17
0
bengaluru

ಬೆಂಗಳೂರು:

ಬೆಳಗಾವಿ ವಿಚಾರದಲ್ಲಿ ಉದ್ಧಟತನ ತೋರಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳು ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕನ್ನಡಪರ ಸಂಘಟನೆಗಳು ನೀಡಿರುವ ಡಿ.31ರ `ಕರ್ನಾಟಕ ಬಂದ್’ ಕರೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮನವಿ ಮಾಡಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ತಮ್ಮ ಇಲಾಖೆಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಉತ್ತಮ ಆಡಳಿತ ದಿನ’ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ರಾಜ್ಯದ ನೆಲ, ಜಲ ಮತ್ತು ನುಡಿಯ ವಿಚಾರಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕನ್ನಡಪರ ಸಂಘಟನೆಗಳ ಸಲಹೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ’’ ಎಂದರು.

ಬಂದ್ ಆಚರಣೆಯಿಂದ ಜನರಿಗೆ ತೊಂದರೆಯಾಗುತ್ತದೆ. ಜತೆಗೆ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗಲಿದೆ. ಸರಕಾರವು ಕನ್ನಡಪರ ಸಂಘಟನೆಗಳ ಜತೆಗೆ ಮಾತುಕತೆಗೆ ಸಿದ್ಧವಿದೆ. ಬೆಳಗಾವಿಯಲ್ಲಿ ದುಷ್ಕೃತ್ಯ ನಡೆಸಿದವರನ್ನು ಈಗಾಗಲೇ ಬಂಧಿಸಿ, ಮುಂದಿನ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

bengaluru
bengaluru

LEAVE A REPLY

Please enter your comment!
Please enter your name here