Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • 10 ಸಾವಿರ ಕ್ರೀಡಾಪಟುಗಳಿಗೆ ಲಸಿಕೆ ಅಭಿಯಾನ
  • ಕ್ರೀಡೆ
  • ಕರ್ನಾಟಕ
  • ನಗರ
  • ಬೆಂಗಳೂರು ನಗರ

10 ಸಾವಿರ ಕ್ರೀಡಾಪಟುಗಳಿಗೆ ಲಸಿಕೆ ಅಭಿಯಾನ

The Bengaluru Live June 10, 2021 4:00 PM 1 minute read
10 ಸಾವಿರ ಕ್ರೀಡಾಪಟುಗಳಿಗೆ ಲಸಿಕೆ ಅಭಿಯಾನ

10 ಸಾವಿರ ಕ್ರೀಡಾಪಟುಗಳಿಗೆ ಲಸಿಕೆ ಅಭಿಯಾನ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಅಭಿಯಾನಕ್ಕೆ ಸಚಿವ ಡಾ. ನಾರಾಯಣಗೌಡರಿಂದ ಚಾಲನೆ

ಬೆಂಗಳೂರು:

ಪ್ರತಿಯೊಬ್ಬ ಕ್ರೀಡಾಪಟುವು ಹೆಸರು ನೋಂದಾಯಿಸಿಕೊಂಡು ಲಸಿಕೆಯನ್ನು ಪಡೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲೂ ಲಸಿಕೆಯನ್ನು ನೀಡಲಾಗುತ್ತಿದ್ದು, ಎಲ್ಲ ಕ್ರೀಡಾಪಟುಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು. ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಅನುಪ್ ಶ್ರೀಧರ್ ಅವರಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ರಾಜ್ಯದಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಆದಾಗ್ಯೂ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹಾಗೂ ಲಸಿಕೆಯನ್ನು ಪಡೆದುಕೊಳ್ಳುವುದು ಅವಶ್ಯಕ. ದೈಹಿಕ ಕ್ಷಮತೆಯನ್ನು ಸದಾಕಾಲ ಕಾಪಾಡಿಕೊಳ್ಳಬೇಕಾಗಿರುವುದು ಕ್ರೀಡಾಪಟುಗಳ ಆದ್ಯ ಕರ್ತವ್ಯ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ ಕೂಡ ಹೌದು. ಹೀಗಾಗಿ ಕ್ರೀಡಾಪಟುಗಳಿಗೆ ಕೋವಿಡ್ -19 ಲಸಿಕೆ ನೀಡುವ ಸಲುವಾಗಿ ಅಭಿಯಾನ ಆರಂಭಿಸಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಎರಡೇ ದಿನಕ್ಕೆ ಅಭಿಯಾನವನ್ನು ಮುಗಿಸೋದಿಲ್ಲ. ರಾಜ್ಯಾಧ್ಯಂತ ಇರುವ 10 ಸಾವಿರಕ್ಕು ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಬೇಕು. ಎಲ್ಲ ಜಿಲ್ಲಾ ಕೇಂದ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಈ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಕ್ರೀಡಾಪಟುಗಳು ಬಂದು ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆದುಕೊಳ್ಳಬೇಕು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

Karnataka organises vaccination camp for sportspersons1

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಓಲಂಪಿಕ್ ಸಂಸ್ಥೆ ಸಹಯೋಗದಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 2200 ಕ್ರೀಡಾಪಟುಗಳು ಈಗಾಗಲೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇಂದು ಮತ್ತು ನಾಳೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರಿಗೆ ಲಸಿಕೆ ನೀಡಲಾಗುತ್ತದೆ. ಈಗ ಹೆಸರು ನೋಂದಾಯಿಸಿಕೊಂಡವರಿಗೆ ಅಭಿಯಾನವನ್ನು ಮುಂದುವರೆಸಿ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಅಭಿಯಾನ ಆರಂಭವಾಗಿದ್ದು, ಎಲ್ಲ ಕ್ರೀಡಾಪಟುಗಳು ಲಸಿಕೆ ಪಡೆದುಕೊಂಡ ನಂತರ ಅಭಿಯಾನವನ್ನು ಮುಕ್ತಾಯಗೊಳಿಸಲಾಗುವುದು. ಇದು ಮೊದಲ ಹಂತದ ಲಸಿಕಾ ಅಭಿಯಾನವಾಗಿದ್ದು, ನಿಗದಿತ ಸಮಯದ ನಂತರ ಎರಡನೇ ಹಂತದ ಲಸಿಕೆಯನ್ನೂ ಸಹ ಇದೇ ಮಾದರಿಯಲ್ಲಿ ನೀಡಲಾಗುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸಚಿವರ ಜೊತೆ ಚರ್ಚಿಸಿ ಕ್ರೀಡಾಪಟುಗಳಿಗೆ ಲಸಿಕಾ ಕರಣ ಅಭಿಯಾನದ ರೂಪುರೇಷೆಯನ್ನು ಸಿದ್ದಪಡಿಸಿದ್ದಾರೆ. ಇಲಾಖೆಯ ಕಾರ್ಯಕ್ಕೆ ಎಲ್ಲ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ರೀಡಾಟುಗಳ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ನಾಡಿನ ಕ್ರೀಡಾಸಂಪತ್ತನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಕೋವಿಡ್ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿರದಿದ್ದರೆ ತಕ್ಷಣವೇ ನೋಂದಾಯಿಸಿ ಲಸಿಕೆ ಪಡೆದುಕೊಳ್ಳುವಂತೆ ಕೋರುವೆ.@CMofKarnataka #KarnatakaFightsCorona pic.twitter.com/CitqJZxlX1

— Dr.Narayana Gowda / ಡಾ.ನಾರಾಯಣ ಗೌಡ (@narayanagowdakc) June 10, 2021

ಮೊದಲ ಡೋಸ್ ಲಸಿಕೆ ಪಡೆದ ಖ್ಯಾತ ಕ್ರೀಡಾಪಟುಗಳು

ಬ್ಯಾಡ್ಮಿಟನ್ ಆಟಗಾರ ಅನೂಪ್ ಶ್ರೀಧರ್, ಪಿ.ಎನ್. ಪ್ರಕಾಶ್- ಶೂಟರ್, ನಿಖಿಲ್- ಶೂಟರ್, ನಿಶಿತಾ- ರೋಯಿಂಗ್, ಶ್ರೇಯಾ ಬಿ. – ರೋಯಿಂಗ್, ಭೂಮಿಕಾ ಆರ್. ಕೇಸರಕರ್- ಸ್ಮಿಮ್ಮರ್, ಪ್ರಿಯಾ ಮೋಹನ್- ಅಥ್ಲೆಟಿ , ನ್ಯಾಷ್ನಲ್ ಛಾಂಪಿಯನ್ ಗಳಾದ ಐಶ್ವರ್ಯ, ಯಶ್ವಂತ್, ಅಕ್ಷಯ್ ಸೇರಿದಂತೆ ನೂರಾರು ಕ್ರೀಡಾಪಟುಗಳು ಲಸಿಕೆ ಪಡೆದರು.

ಸಂಸದ ಪಿ.ಸಿ. ಮೋಹನ್, ರಾಜ್ಯ ಓಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಈಗ ವಾಟ್ಸಾಪ್ ಮೂಲಕವೇ ಜಿಯೋ ರೀಚಾರ್ಜ್ ಮಾಡಿ: ಜಿಯೋದಿಂದ ಗ್ರಾಹಕರಿಗೆ ಹೊಸ ಸೇವೆ
Next: ಬೆಂಗಳೂರು ನಗರ ಸೇರಿ 19 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ: ಯಡಿಯೂರಪ್ಪ

Related Stories

ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM

Latest Post

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಕಡತ ಚಿತ್ರ
  • ಶಿಕ್ಷಣ

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ

November 22, 2026 9:22 PM
ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

November 22, 2026 2:01 PM
ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 22, 2026 11:32 AM
ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

November 22, 2026 11:16 AM
ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನ ಕಂಬಗಳ ಬಳಿ ನಿಂತಿರುವ ಪ್ರಯಾಣಿಕರು
  • ಕರ್ನಾಟಕ
  • ಬೆಂಗಳೂರು ನಗರ

ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್

November 22, 2026 8:08 AM
ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ

November 22, 2026 8:06 AM

ನೀವು ತಪ್ಪಿಸಿಕೊಂಡಿರಬಹುದು

ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಕಡತ ಚಿತ್ರ
  • ಶಿಕ್ಷಣ

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ

The Bengaluru Live November 22, 2026 9:22 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ
  • ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ
  • ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ
  • ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ
©Copyright 2025 The Bengaluru Live All rights reserved. | MoreNews by AF themes.